Lokayukta Raid in Belagavi: ಕಿತ್ತೂರಿನಲ್ಲಿ ತಹಸೀಲ್ದಾರ್ ನಿವಾಸದ ಮೇಲೆ ಲೋಕಾಯುಕ್ತ ದಾಳಿ; ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಅಧಿಕಾರಿ
Lokayukta Raid in Belagavi: ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ತಹಸೀಲ್ದಾರ್ ಸೋಮಲಿಂಗ ಅವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಸೋಮಲಿಂಗ ಅವರು 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೆಂಗಳೂರು: ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ತಹಸೀಲ್ದಾರ್ ಸೋಮಲಿಂಗ ಹಾಲಗಿ ಎಂಬುವವರ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮಲಿಂಗ ಅವರು 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಈ ದಾಳಿ ನಡೆದಿತ್ತು.
ದಾಳಿ ಸಂದರ್ಭದಲ್ಲಿ ತಹಸೀಲ್ದಾರ್ ಸೋಮಲಿಂಗ ಅವರ ಮನೆಯಲ್ಲಿದ್ದ 10 ಲಕ್ಷ ರೂಪಾಯಿ ನಗದನ್ನು ಕೂಡ ಅಧಿಕಾರಿಗಳು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಈ ದಾಳಿ ನಡೆದಿತ್ತು. ಲೋಕಾಯುಕ್ತ ಎಸ್‌ಪಿ ಯಶೋಧಾ ವಂಟಗೋಡೆ ನೇತೃತ್ವದ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ನಿನ್ನೆ ರಾತ್ರಿ ಇಡೀ ಮನೆ ಶೋಧ ನಡೆಸಿದರು. 10 ಲಕ್ಷ ರೂಪಾಯಿಗೂ ಅಧಿಕ ನಗದು ಮತ್ತು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಖೋದನಾಪುರದ ರಾಜೇಂದ್ರ ಇನಾಂದಾರ್ ಅವರು 10 ಎಕರೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ತಹಸೀಲ್ದಾರ್ ಸೋಮಲಿಂಗ ಹಾಲಗಿ ಅವರಿಗೆ ಈ ಕಡತ ತಲುಪಿತ್ತು. ಖಾತೆ ಬದಲಾವಣೆಗೆ 5 ಲಕ್ಷ ರೂಪಾಯಿ ಲಂಚ ನೀಡುವಂತೆ ರಾಜೇಂದ್ರ ಇನಾಂದಾರ್‌ಗೆ ಸೋಮಲಿಂಗ ಹಾಲಗಿ ತಿಳಿಸಿದ್ದರು. ಈ ಕುರಿತು ರಾಜೇಂದ್ರ ಇನಾಂದಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇದರಂತೆ, ಯೋಜಿತ ದಾಳಿಯ ವೇಳೆ ನಿನ್ನೆ ರಾತ್ರಿ ತಹಸೀಲ್ದಾರ್ ಮನೆಯಲ್ಲಿರುವಾಗಲೇ ಲಂಚದ ಹಣದೊಂದಿಗೆ ರಾಜೇಂದ್ರ ಇನಾಂದಾರ್‌ಗೆ ತೆರಳುವಂತೆ ಸೂಚಿಸಲಾಗಿತ್ತು. ಸೋಮಲಿಂಗ ಹಾಲಗಿ ಕೂಡ ರಾಜೇಂದ್ರ ಇನಾಂದಾರ್ ಅವರಿಗೆ ಮನೆಗೆ ಬಂದು ಹಣ ನೀಡುವಂತೆ ಸೂಚಿಸಿದ್ದರು. ಹಾಗೆ ಮನೆಗೆ ಹೋದಾಗ, ಅಲ್ಲಿ ತಹಸೀಲ್ದಾರ್ ಸೋಮಲಿಂಗ ಹಾಲಗಿ ಜತೆಗೆ ಗುಮಾಸ್ತ ಜಿ. ಪ್ರಸನ್ನ ಕೂಡ ಜತೆಗಿದ್ದರು. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳ ತಂಡ ತಹಸೀಲ್ದಾರ್ ಸೋಮಲಿಂಗ ಹಾಲಗಿ ಮತ್ತು ಗುಮಾಸ್ತ ಜಿ.ಪ್ರಸನ್ನ ಅವರನ್ನು ಬಂಧಿಸಿದೆ.
ಗಮನಿಸಬಹುದಾದ ಇತರೆ ಸುದ್ದಿಗಳು
BBMP Documents: ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದ ಬಿಬಿಎಂಪಿ ಕಡತಗಳು ಎಲ್ಲಿ ಹೋದವು?!; ಯಾವ ಕಡತ? ಯಾಕಿಷ್ಟು ಮಹತ್ವ
BBMP Documents: ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದ ಬಿಬಿಎಂಪಿಯ ಮಹತ್ವದ ಕಡತಗಳು ಎಲ್ಲಿ ಹೋದವು? ಸ್ಥಳೀಯ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ನಿನ್ನೆಯಿಂದ ಪ್ರಸಾರವಾಗುತ್ತಿವೆ. ಏನಿದು ವಿದ್ಯಮಾನ? ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಅಪರೂಪದ ವಿಚಿತ್ರ ಮೀನು ಕಲಬುರಗಿಯಲ್ಲಿ ಪತ್ತೆ!; ನಾಗರಾಳ ಜಲಾಶಯದಲ್ಲಿ ಮೀನುಗಾರರ ಬಲೆಗೆ ಬಿದ್ದ ಮೀನು
Rare fish in Kalaburagi: ನಾಗರಾಳ ಜಲಾಶಯದಲ್ಲಿ ಮೀನುಗಾರಿಕೆಗೆ ನಡೆಯುತ್ತಿದ್ದ ವೇಳೆ, ಮೀನುಗಾರರು ಹಾಕಿದ್ದ ಬಲೆಗೆ ಈ ಮೀನು ಬಿದ್ದಿದೆ. ಮೀನುಗಾರ ಈಶ್ವರ್ ಎಂಬುವರರ ಬಲೆಗೆ ಬಿದ್ದ ಈ ಮೀನು ನ್ಯೂಜಿಲೆಂಡ್ ಮೂಲದ್ದು (Freshwater eels in New Zealand) ಎಂದು ಹೇಳಲಾಗುತ್ತಿದೆ. ಏನಿದರ ವಿಶೇಷತೆ. ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಸುರಂಗ ಕೊರೆದು ರೈಲು ಇಂಜಿನ್ ಹೊತ್ತೊಯ್ದ ಕಳ್ಳರು! ದುರಸ್ತಿಗೆ ನಿಲ್ಲಿಸಿದ್ದ ರೈಲು ಇಂಜಿನ್
ಕಬ್ಬಿಣದ ಸೇತುವೆ ಕಳವು ಪ್ರಕರಣದ ನಂತರ ದೇಶದ ಗಮನಸೆಳೆದಿರುವ ಕಳವು ಪ್ರಕರಣ ಇದು. ಈ ಕಳವು ಪ್ರಸಂಗ ಸಿನಿಮೀಯವಾಗಿದೆ. ಸುರಂಗ ಕೊರೆದು ರೈಲು ಇಂಜಿನ್ ಕಳವು ಮಾಡಿದ್ದು ಮತ್ತು ಭಾರತೀಯ ರೈಲ್ವೆ ಅಧಿಕಾರಿಗಳಿಗೆ ಇಂಜಿನ್ ಕಳವು ಪ್ರಕರಣ ಗೊತ್ತೇ ಇರಲಿಲ್ಲ ಎಂಬುದು ಈಗ ದೊಡ್ಡ ಸುದ್ದಿ! ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಜಗದ ಅತಿವೇಗದ ಎಸ್‌ಯುವಿಯಂತೆ ಇದು! ಆಕರ್ಷಕ ಫೀಚರ್ಸ್ ಹೇಗಿದೆ ಎನ್ನುವ ಕುತೂಹಲವೆ?
ಜಗತ್ತಿನ ಅತಿವೇಗದ ಎಸ್‌ಯುವಿ ಎಂಬ ಖ್ಯಾತಿಯ ಲಂಬೋರ್ಗಿನಿ ಉರುಸ್ ಪರ್ಫಾರ್ಮೆಂಟೆ 306 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿವೆ ಫೋಟೋಸ್ ಕ್ಲಿಕ್ ಮಾಡಿ.