ಮಧೂರು ಬ್ರಹ್ಮಕಲಶೋತ್ಸವ, ಮಹಾಮೂಡಪ್ಪ ಸೇವೆ ವೈಭವ, ಮಂಗಳೂರಿನಿಂದ ಕೆಎಸ್ಸಾರ್ಟಿಸಿ ವಿಶೇಷ ಬಸ್ ಸೇವೆ, ಶನಿವಾರ, ಭಾನುವಾರದ ಕಾರ್ಯಕ್ರಮ ವಿವರ
Madhur Mahamoodappa: ಮಧೂರು ಬ್ರಹ್ಮಕಲಶೋತ್ಸವ, ಮಹಾಮೂಡಪ್ಪ ಸೇವೆ ವೈಭವವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಭಕ್ತರಿಗೆ ಅನುಕೂಲ ಮಾಡಿಕೊಡಲು ಮಂಗಳೂರಿನಿಂದ ಮಧೂರು ಕ್ಷೇತ್ರಕ್ಕೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೇವೆ ಶುರುಮಾಡಿದೆ. ಮಹಾಮೂಡಪ್ಪ ಸೇವೆ ಶನಿವಾರ ನಡೆಯಲಿದ್ದು. ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮಗಳ ವಿವರ ಇಲ್ಲಿವೆ

Madhur Mahamoodappa: ಮಾರ್ಚ್ 27ರಿಂದ ಆರಂಭಗೊಂಡು, ಏಪ್ರಿಲ್ 7ರವರೆಗೆ ಕಾಸರಗೋಡು ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರವಾದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿದೆ. ಈಗಾಗಲೇ ಸಹಸ್ರಾರು ಮಂದಿ ಇಲ್ಲಿನ ಕಾರ್ಯಕ್ರಮಗಳಿಗೆ ಆಗಮಿಸಿದ್ದಾರೆ. ಹಲವಾರು ಮಂದಿ ಇಲ್ಲಿಗೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರು ಕೆಎಸ್ ಆರ್ ಟಿ ಸಿ ವಿಭಾಗದಿಂದ ಮಂಗಳೂರು-ಮಧೂರು ನಡುವೆ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ. ಈ ವಿಶೇಷ ಬಸ್ ಸೇವೆಯು ಎ.4 ರಿಂದ ಎ.6ರವರೆಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಬಸ್ ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಮಧೂರಿಗೆ ಬೆಳಗ್ಗೆ 10 ಗಂಟೆಗೆ ಮತ್ತು 10.20ಕ್ಕೆ ಹೊರಡಲಿದೆ. ಮಧೂರಿನಿಂದ ಮಂಗಳೂರಿಗೆ 1.30 ಮತ್ತು 1.45ಕ್ಕೆಹೊರಡಲಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 5 ಶನಿವಾರ ಹಾಗೂ ಏಪ್ರಿಲ್ 6 ಭಾನುವಾರದ ಕಾರ್ಯಕ್ರಮಗಳ ವಿವರಗಳು ಇಲ್ಲಿವೆ.
ಮಧೂರು ಮಹಾಮೂಡಪ್ಪ ಶನಿವಾರದ ಕಾರ್ಯಕ್ರಮಗಳು
ವೈದಿಕ ಕಾರ್ಯಕ್ರಮಗಳು: ಮುಂಜಾನೆ 5ಕ್ಕೆ ದೀಪದ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ. 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಕಲಶಾಭಿಷೇಕ. ಬೆಳಿಗ್ಗೆ 9ರಿಂದ ಮಹಾಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ, ಮಧ್ಯಾಹ್ನ ಅಪ್ಪ ಮಾಡಲು ಆರಂಭ, ಮಹಾಪೂಜೆ.
ಸಂಜೆ 5ಕ್ಕೆ: ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀದೇವರ ಸವಾರಿ. ರಾತ್ರಿ 8ಕ್ಕೆ ಶ್ರೀದೇವರ ಬೆಡಿಕಟ್ಟೆಯಲ್ಲಿ ಸುಡುಮದ್ದಿನ ಪ್ರದರ್ಶನ, ರಾತ್ರಿ 10ಕ್ಕೆ ಶ್ರೀಭೂತಬಲಿ ಮಹಾಮೂಡಪ್ಪಾದಿವಾಸ ಹೋಮ, ರಾತ್ರಿ 11ಕ್ಕೆ ಶ್ರೀಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, ಕಯ್ಯಾಕಲ್ಪನೆ, ಕವಾಟ ಬಂಧನ.
ಸಾಂಸ್ಕೃತಿಕ ಕಾರ್ಯಕ್ರಮ: ಬೆಳಗ್ಗೆ 8ಕ್ಕೆ ಸೌಪರ್ಣಿಕಾ ಅನ್ವಿತ್ ಮನ್ನಿಪ್ಪಾಡಿ ಅವರಿಂದ ಹಾಗೂ ಬೆಳಗ್ಗೆ 9ಕ್ಕೆ ನಂದಿನಿ ವಿನಾಯಕ್ ಪುತ್ತೂರು ಇವರಿಂದ ಶಾಸ್ತ್ರೀಯ ಸಂಗೀತ.
ಬೆಳಗ್ಗೆ 10ಕ್ಕೆ ಧಾರ್ಮಿಕ ಸಭೆ: ಅಧ್ಯಕ್ಷತೆ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಂಟ್ವಾಳ ಶಾಸಕರು. ಗೌರವ ಉಪಸ್ತಿತಿ. ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀಪಾದ ನಾಯ್ಕ್, ವಕೀಲರಾದ ಕೃಷ್ಣಮೋಹನ ವರ್ಮ, ಮಾಯಿಪ್ಪಾಡಿ. ಮುಖ್ಯ ಅತಿಥಿಗಳು: ಮಿಝೋರಾಮ್ ಮಾಜಿ ಗವರ್ನರ್ ಕುಮ್ಮನಂ ರಾಜಶೇಖರನ್ ಸಹಿತ ಪ್ರಮುಖರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಮಧ್ಯಾಹ್ನ 12.30ಕ್ಕೆ ಕಾಸರಗೋಡಿನ ಮಹಿಮಾ ಎಸ್. ರಾವ್ ಅವರಿಂದ ನೃತ್ಯ, 1.30ಕ್ಕೆ ಅಶ್ವಿನಿ ಕೆ. ಕಾಂತಬೈಲು ಅವರಿಂದ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 2.30ಕ್ಕೆ ಶಂಕರ್ ಸ್ಕೂಲ್ ಆಫ್ ಡ್ಯಾನ್ಸ್ ಅವರಿಂದ ನೃತ್ಯವೈವಿಧ್ಯ.
ಸಂಜೆ 4.30ಕ್ಕೆ ಧಾರ್ಮಿಕ ಸಭೆ. ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಕೊಲ್ಯ ಮೂಕಾಂಬಿಕಾ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಮಧೂಸೂಧನ ಆಯರ್ ಮತ್ತಿತರರು.
ರಾತ್ರಿ 7ಕ್ಕೆ ಸ್ವಾಮಿಮಲೈ ಎಸ್.ಕೆ. ಸುರೇಶ್ ಚೆನ್ನೈ ಅವರಿಂದ ಭರತನಾಟ್ಯಂ, 8.30ರಿಂದ ದಿವ್ಯಾ ವೇಣುಗೋಪಾಲ್ ಚೆನ್ನೈ ಅವರಿಂದ ನಾಟ್ಯವೈಭವ, 9.30ಕ್ಕೆ ಪರಕ್ಕಿಲ ತನ್ಮಯೀ ಸ್ಕೂಲ್ ಆಫ್ ಡ್ಯಾನ್ಸ್ ನಿಂದ ನೃತ್ಯ ಕಾರ್ಯಕ್ರಮ.
ಮಧೂರು ಮಹಾಮೂಡಪ್ಪ ಭಾನುವಾರ, ಏಪ್ರಿಲ್ 6ರಂದು ಕಾರ್ಯಕ್ರಮಗಳು
ಮಧೂರಿನಲ್ಲಿ ಭಾನುವಾರ ಬೆಳಗ್ಗೆ 6.20ಕ್ಕೆ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯದರ್ಶನ, ವಿಶೇಷಾಭಿಷೇಕ, 128 ಕಾಯಿ ಅಪ್ಪದ್ರವ್ಯ ಮಹಾಗಣಪತಿ ಯಾಗ, ಮಹಾಪೂಜೆ. ಸಂಜೆ. 6ಕ್ಕೆ ಜಳಕದ ಬಲಿ, ಅವಭೃತ, ದರ್ಶನ ಬಲಿ.
ಸಾಂಸ್ಕೃತಿಕ ಹಾಗೂ ಕಾರ್ಯಕ್ರಮಗಳು: ಬೆಳಗ್ಗೆ 8ಕ್ಕೆ ಸುಮನಾ ಕೋಡಿಚ್ಚಾಲು ಅವರಿಂದ ಸಂಗೀತ ಕಛೇರಿ, 9.30ಕ್ಕೆ ದಿವ್ಯನಿಧಿ ರೈ ಮುಳಿಯ ಅವರಿಂದ ಸಂಗೀತ ಸ್ವರ ಸಮರ್ಪಣೆ, 10.30ರಿಂದ ಸದಾಶಿವ ಆಚಾರ್ಯ ಅವರಿಂದ ಶಾಸ್ತ್ರೀಯ ಸಂಗೀತ, ಬೆಳಗ್ಗೆ 11.30ಕ್ಕೆ ಕಲ್ಯಾಡಿ ಎಸ್. ಪೂರ್ಣಪ್ರಜ್ಞ ಚೆನ್ನೈ ಅವರಿಂದ ವಯೋಲಿನ್, ಮಧ್ಯಾಹ್ನ 12.30ಕ್ಕೆ ಮಧೂರು ಸಹೋದರಿಯರಿಂದ ಸಂಗೀತ. ಮಧ್ಯಾಹ್ನ 2ರಿಂದ ಅಡೂರು ನಾಟ್ಯಾಂಜಲಿ ನೃತ್ಯಾಲಯಂ ಅವರಿಂದ ನೃತ್ಯವೈಭವಂ.
ಸಂಜೆ 4.30ಕ್ಕೆ ಧಾರ್ಮಿಕ ಸಭೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಬಿ.ಎಸ್.ರಾವ್ ಅಧ್ಯಕ್ಷತೆ. ಕೊಳತ್ತೂರು ಅದ್ವೈತಾಶ್ರಮ ಸಂಸ್ಥಾಪಕ ಚಿದಾನಂದಪುರಿ ಸ್ವಾಮೀಜಿ ಆಶೀರ್ವಚನ. ಉಪಸ್ಥಿತಿ: ಶಿವಪ್ರಸಾದ ತಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಡಿ.ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ (ಮೂವರೂ ಶಾಸಕರು). ಹಾಗೂ ಇತರ ಗಣ್ಯರು. ರಾತ್ರಿ 7ರಿಂದ ಗುರುವಾಯೂರು ಕೈಕೊಟ್ಟುಕಳಿ ಸಂಘದಿಂದ ಕೈಕೊಟ್ಟುಕಳಿ, 8ರಿಂದ ಅಪರ್ಣಾ ಶರ್ಮ ಗುರುವಾಯೂರು ಅವರಿಂದ ನಾಟ್ಯವೈಭವ. 9ರಿಂದ ಯೋಗೀಶ್ವರಿ ಜಯಪ್ರಕಾಶ್ ಶಿಷ್ಯವೃಂದದಿಂದ ಭರತನಾಟ್ಯ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)


