Kodagu Power Cut: ಕೊಡಗಿನ ಹಲವು ಪ್ರದೇಶಗಳಲ್ಲಿ ಇಂದು ಕರೆಂಟ್‌ ಇರೋಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Kodagu Power Cut: ಕೊಡಗಿನ ಹಲವು ಪ್ರದೇಶಗಳಲ್ಲಿ ಇಂದು ಕರೆಂಟ್‌ ಇರೋಲ್ಲ

Kodagu Power Cut: ಕೊಡಗಿನ ಹಲವು ಪ್ರದೇಶಗಳಲ್ಲಿ ಇಂದು ಕರೆಂಟ್‌ ಇರೋಲ್ಲ

Kodagu News ಕೊಡಗಿನ ನಾನಾ ಭಾಗಗಳಲ್ಲಿ ಗುರುವಾರ ವಿದ್ಯುತ್‌ ಕಡಿತವಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ತಿಳಿಸಿದೆ.

ಕೊಡಗಿನ ಹಲವು  ಭಾಗಗಳಲ್ಲಿ ಬುಧವಾರ ವಿದ್ಯುತ್‌ ಕಡಿತವಾಗಲಿದೆ.
ಕೊಡಗಿನ ಹಲವು ಭಾಗಗಳಲ್ಲಿ ಬುಧವಾರ ವಿದ್ಯುತ್‌ ಕಡಿತವಾಗಲಿದೆ.

ಮಡಿಕೇರಿ: ಕೊಡಗಿನ ಹಲವು ಭಾಗಗಳಲ್ಲಿ ಆಗಸ್ಟ್, 29ರ ಗುರುವಾರ ವಿದ್ಯುತ್‌ ಕಡಿತವಾಗಲಿದೆ. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು( Chescom) ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ವಿದ್ಯುತ್‌ ವ್ಯತ್ಯಯವಾಗಲಿದೆ. ಕುಶಾಲನಗರ 220/11 ಕೆವಿ, ಸುಂಟಿಕೊಪ್ಪ 66/11 ಕೆವಿ ಮತ್ತು ಸೋಮವಾರಪೇಟೆ 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಆಗಸ್ಟ್, 29 ರಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯ ವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದರಿಂದಾಗಿ ಕುಶಾಲನಗರ ಪಟ್ಟಣ, ಹೆಬ್ಬಾಲೆ ಶಿರಂಗಾಲ, ಕೂಡಿಗೆ, ರಸಲ್‍ಪುರ, ಭುವನಗಿರಿ, ಬಲಮುರಿ, ಹಾರಂಗಿ, ನಂಜರಾಯಪಟ್ಟಣ, ಎಸ್.ಎಲ್.ಎನ್, ಸಿದ್ದಲಿಂಗಪುರ ಕಾವೇರಿ ನಿಸರ್ಗಧಾಮ, ಸೋಮೇಶ್ವರ, ಕೂಡುಮಂಗಳೂರು, ಸುಂಟಿಕೊಪ್ಪ, ಮಳ್ಳೂರು, ಹೊಸಕೋಟೆ, ನಾಕೂರು, ಮಾದಾಪುರ, ಸೂರ್ಲಬ್ಬಿ, ಹಟ್ಟಿಹೊಳೆ, ಕಾಂಡನಕೊಲ್ಲಿ, ಗರ್ವಾಲೆ, ಬಿಳಿಗೇರಿ, ಕಂಬಿಬಾಣೆ, ಕೊಡಗರಹಳ್ಳಿ, ಉಪ್ಪುತೋಡು, ಚೆಟ್ಟಳ್ಳಿ, ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ಮತ್ತಿಕಾಡು, ಕೆದಕಲ್, ಸೋಮವಾರಪೇಟೆ ಟೌನ್, ಶಾಂತಳ್ಳಿ, ಗೌಡಳ್ಳಿ, ಅಬ್ಬೂರುಕಟ್ಟೆ, ಐಗೂರು, ಬಜೇಗುಂಡಿ, ದೊಡ್ಡಮಳ್ತೆ, ಮಸಗೋಡು, ಕರ್ಕಳ್ಳಿ, ಹಾನಗಲ್ಲು, ಬೇಳೂರು, ಯಡವಾರೆ, ಕುಂಬೂರು ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್‌ ಕಡಿತದ ವೇಳೆ ಸಾರ್ವಜನಿಕರು ಸಹಕರಿಸುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಇಇ ಅನಿತಾ ಬಾಯಿ ಮನವಿ ಮಾಡಿಕೊಂಡಿದ್ದಾರೆ.

Whats_app_banner