ಮಹಾ ಕುಂಭಮೇಳದ ಪ್ರಯಾಣ, ವಸತಿ, ಆಹಾರ, ವೈದ್ಯಕೀಯ ಸೇರಿ ವಿವಿಧ ಸೇವೆಗಳ ಎಐ ಆಧಾರಿತ ಮಾಹಿತಿ ಕನ್ನಡದಲ್ಲಿ ಲಭ್ಯ; ಸೌಲಭ್ಯ ಹೀಗೆ ಪಡೆಯಿರಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಹಾ ಕುಂಭಮೇಳದ ಪ್ರಯಾಣ, ವಸತಿ, ಆಹಾರ, ವೈದ್ಯಕೀಯ ಸೇರಿ ವಿವಿಧ ಸೇವೆಗಳ ಎಐ ಆಧಾರಿತ ಮಾಹಿತಿ ಕನ್ನಡದಲ್ಲಿ ಲಭ್ಯ; ಸೌಲಭ್ಯ ಹೀಗೆ ಪಡೆಯಿರಿ

ಮಹಾ ಕುಂಭಮೇಳದ ಪ್ರಯಾಣ, ವಸತಿ, ಆಹಾರ, ವೈದ್ಯಕೀಯ ಸೇರಿ ವಿವಿಧ ಸೇವೆಗಳ ಎಐ ಆಧಾರಿತ ಮಾಹಿತಿ ಕನ್ನಡದಲ್ಲಿ ಲಭ್ಯ; ಸೌಲಭ್ಯ ಹೀಗೆ ಪಡೆಯಿರಿ

ಇಲ್ಲಿ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಹಾಯ್ ಎಂದು ಇಂಗ್ಲಿಷ್ ನಲ್ಲಿ ಸಂದೇಶ ಕಳುಹಿಸಿದರೆ ಸಾಕು ನಿಮಗೆ ಕನ್ನಡದಲ್ಲೇ ಮಹಾ ಕುಂಭಮೇಳದಲ್ಲಿನ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುತ್ತದೆ. ಪ್ರಯಾಣ, ಊಟ, ವಸತಿ, ಹೋಟಲ್, ವೈದ್ಯಕೀಯ ಸೌಲ್ಯಭಗಳ ಬಗ್ಗೆ ನಿಮ್ಮ ಮೊಬೈಲ್ ನಲ್ಲೇ ಮಾಹಿತಿ ಪಡೆಯಬಹುದು. ಇದರ ವಿವಿದ ಹಂತಗಳನ್ನು ಇಲ್ಲಿ ನೀಡಲಾಗಿದೆ.

ಮಹಾ ಕುಂಭಮೇಳಕ್ಕೆ ಹೋಗುವ ಕರ್ನಾಟಕದ ಪ್ರಯಾಣಿಕರ ಪ್ರಯಾಣ, ವಸತಿ, ಆಹಾರ, ವೈದ್ಯಕೀಯ ಸೇರಿ ವಿವಿಧ ಸೇವೆಗಳ ಬಗ್ಗೆ ಎಐ ಆಧಾರಿತ ಮಾಹಿತಿ ಕನ್ನಡದಲ್ಲಿ ಲಭ್ಯವಾಗಲಿದೆ. ಈ ಮಾಹಿತಿ ಪಡೆಯಲು ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.
ಮಹಾ ಕುಂಭಮೇಳಕ್ಕೆ ಹೋಗುವ ಕರ್ನಾಟಕದ ಪ್ರಯಾಣಿಕರ ಪ್ರಯಾಣ, ವಸತಿ, ಆಹಾರ, ವೈದ್ಯಕೀಯ ಸೇರಿ ವಿವಿಧ ಸೇವೆಗಳ ಬಗ್ಗೆ ಎಐ ಆಧಾರಿತ ಮಾಹಿತಿ ಕನ್ನಡದಲ್ಲಿ ಲಭ್ಯವಾಗಲಿದೆ. ಈ ಮಾಹಿತಿ ಪಡೆಯಲು ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರು: ವಿಶ್ವದ ಅತಿ ದೊಡ್ಡ ಅಧ್ಯಾತ್ಮಿಕ, ಸಾಂಸ್ಕೃತಿ ಹಾಗೂ ಧಾರ್ಮಿಕ ಸಂಗಮವಾಗಿರುವ ಮಹಾ ಕುಂಭಮೇಳಕ್ಕೆ ದೇಶ, ವಿದೇಶ ಸೇರಿದಂತೆ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಸಮರೋಪಾದಿಯಲ್ಲಿ ಭಾಗವಹಿಸಿ ಸಂಗಮದಲ್ಲಿ ಪವಿತ್ರ ಪುಣ್ಯ ಸ್ನಾನವನ್ನು ಮಾಡುತ್ತಿದ್ದಾರೆ. 2025ರ ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿರುವ ಈ ಮಹಾ ಕುಂಭ ಮೇಳದಲ್ಲಿ ಈಗಾಗಲೇ ಕೋಟಿ ಕೋಟಿ ಜನರು ಪುಣ್ಯ ಸ್ನಾನ ಮಾಡಿದ್ದಾರೆ. 45 ದಿನಗಳ ಕುಂಭಮೇಳವು ಫೆಬ್ರವರಿ 26 ರ ಮಹಾಶಿವರಾತ್ರಿಯಂದು ಪೂರ್ಣಗೊಳ್ಳಲಿದ್ದು, ಭಕ್ತರು ಬರುತ್ತಲೇ ಇದ್ದಾರೆ. ಒಂದು ವೇಳೆ ನೀವೇನಾದರೂ ಕುಂಭ ಮೇಳದಲ್ಲಿ ಭಾಗಹಿಸಿದ್ದರೆ ಅಥವಾ ಅಲ್ಲಿಗೆ ಭೇಟಿ ನೀಡಲು ಪ್ಲಾನ್ ಮಾಡಿಕೊಂಡಿದ್ದರೆ ಕುಂಭ ಮೇಳದಲ್ಲಿನ ಸೌಲಭ್ಯಗಳ ಬಗ್ಗೆ ನಿಮಗೆ ಕನ್ನಡದಲ್ಲೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಮಹಾಕುಂಭ ಮೇಳ 2025, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಬಳಸಿ ಕನ್ನಡದಲ್ಲಿ ಕನ್ನಡಿಗರಿಗಾಗಿ ಅಧಿಕೃತ ಮಾಹಿತಿ ನೀಡುವ ಸೌಲಭ್ಯವನ್ನು ಒದಗಿಸಲಾಗಿದೆ. ಇದಕ್ಕಾಗಿ +91 8887847135 ಈ ಸಂಖ್ಯೆಗೆ Hi ಎಂದು ಸಂದೇಶ ಕಳುಹಿಸಿದರೆ ಸಾಕು. ಮಹಾ ಕುಂಭಮೇಳದ ಪ್ರಯಾಣ, ವಸತಿ, ಆಹಾರ, ವೈದಕೀಯ ಹೀಗೆ ವಿವಿಧ ಸೇವೆಗಳ ಬಗ್ಗೆ ನೀವು ಕನ್ನಡದಲ್ಲೇ ಮಾಹಿತಿಯನ್ನು ಪಡೆಯಬಹುದು. ಇದು ಮಹಾ ಕುಂಭಮೇಳದಲ್ಲಿ ಅಧಿಕಾರಿಗಳು ನೀಡುವ ಅಧಿಕೃತ ಮಾಹಿತಿಯಾಗಿದೆ. ಮಹಾ ಕುಂಭಮೇಳಕ್ಕೆ ಹೋಗುವ ಕನ್ನಡಿಗರಿಗೆ ನೆರವಾಗಲಿ ಎಂದು ಕನ್ನಡದಲ್ಲಿರುವ ಈ ಸೌಲಭ್ಯ ನಾನು ನೀಡಿದ್ದೇನೆ ಎಂದು ಸೈಬರ್ ತಜ್ಞ ಉದಯ ಶಂಕರ್ ಪುರಾಣಿಕ ಅವರು ತಿಳಿಸಿದ್ದಾರೆ. ಮಹಾ ಕುಂಭಮೇಳ ಕುರಿತು ಕನ್ನಡದಲ್ಲಿ, ಕನ್ನಡಿಗರಿಗೆ ಅಧಿಕೃತ ಮಾಹಿತಿ ನೀಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ. ಕೇಂದ್ರ ಸರ್ಕಾರದ " ಭಾಷಿಣಿ" ಇಲ್ಲಿ ಬಳಸಲಾಗಿದೆ ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಹಾ ಕುಂಭಮೇಳದ ಮಾಹಿತಿ ಕನ್ನಡದಲ್ಲಿ ಪಡೆಯುವುದು ಹೇಗೆ

  • ವಾಟ್ಸಪ್ ನಲ್ಲಿ 8887847135 ಮೊಬೈಲ್ ಸಂಖ್ಯೆಗೆ Hi ಎಂದು ಸಂದೇಶ ಕಳುಹಿಸಬೇಕು
  • ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ಎಂಬ ಆಯ್ಕೆಯ ಭಾಗ ಕಾಣಿಸುತ್ತದೆ
  • ಆ ನಂತರ ಆಯ್ಕೆಗೆ ಹೋಗಿ ಅಲ್ಲಿರುವ ಭಾಷೆಗಳ ಪೈಕಿ ಕನ್ನಡವನ್ನು ಆಯ್ಕೆ ಮಾಡಿ
  • ಎಲ್ಲಾ ಮಾಹಿತಿಯು ಕನ್ನಡದಲ್ಲಿ ಲಭ್ಯವಾಗುತ್ತದೆ
  • ಆಯ್ಕೆಯಲ್ಲಿ ಹೋಟೆಲ್, ಹೋಂಸ್ಟೇ ಅಥಾವಾ ಪಿಜಿ, ಟೆಂಟ್ ಸಿಟಿ ಹೀಗೆ ಹಲವಾರು ಆಯ್ಕೆಗಳಿರುತ್ತವೆ. ಅದರಲ್ಲಿ ನಿಮಗೆ ಬೇಕಾದನ್ನು ಆಯ್ಕೆ ಮಾಡಿಕೊಳ್ಳಿ

ಉಪಾಹಾರ, ಪಾನೀಯಗಳು, ರೆಸ್ಟ್ ರೂಮ್, ವೈದ್ಯಕೀಯ ಮತ್ತು ವಿಶೇಷ ನೆರವು, ತುರ್ತು ಸೇವೆಗಳು, ಸಹಾಯ ಕೇಂದ್ರ, ಸಾರಿಗೆ, ಪಾರ್ಕಿಂಗ್ ಸೇರಿದಂತೆ ಎಲ್ಲಾ ಮಾಹಿತಿಯನ್ನು ಇಲ್ಲಿ ಕನ್ನಡದಲ್ಲಿ ಪಡೆಯಬಹುದಾಗಿದೆ.

Whats_app_banner