Kannada News  /  Karnataka  /  Mallikarjun Kharge Writes To Railway Minister Ashwini For Additional Trains From Bidar Kalaburgi To Bengaluru Mgb
ಹೆಚ್ಚುವರಿ ರೈಲುಗಳಿಗೆ ಮಲ್ಲಿಕಾರ್ಜುನ ಖರ್ಗೆ ಮನವಿ
ಹೆಚ್ಚುವರಿ ರೈಲುಗಳಿಗೆ ಮಲ್ಲಿಕಾರ್ಜುನ ಖರ್ಗೆ ಮನವಿ

Bidar-Kalaburgi News: ಬೀದರ್, ಕಲಬುರಗಿಯಿಂದ ಬೆಂಗಳೂರಿಗೆ ಹೆಚ್ಚುವರಿ ರೈಲುಗಳು ಬೇಕು; ರೈಲ್ವೇ ಸಚಿವರಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

26 May 2023, 15:33 ISTMeghana B
26 May 2023, 15:33 IST

Bidar, Kalaburgi to Bengaluru Train: ಕಲಬುರಗಿಯಿಂದ ಬೆಂಗಳೂರಿಗೆ ಎರಡು ಹೆಚ್ಚುವರಿ ರೈಲು ಹಾಗೂ ಬೀದರ್‌ನಿಂದ ಬೆಂಗಳೂರಿಗೆ ಒಂದು ಹೊಸ ರೈಲನ್ನು ತುರ್ತಾಗಿ ಪ್ರಾರಂಭವಾಗುವ ಅವಶ್ಯಕತೆಯಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​​ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​​ ಅವರಿಗೆ ಪತ್ರ ಬರೆದು ಬೀದರ್ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ಹೆಚ್ಚುವರಿ ರೈಲು (Bidar, Kalaburgi to Bengaluru Train)ಸೇವೆಗೆ ಮನವಿ ಮಾಡಿದ್ದಾರೆ.

ಈ ಎರಡು ಪಟ್ಟಣಗಳು ಮತ್ತು ರಾಜ್ಯದ ರಾಜಧಾನಿ ನಡುವೆ ಹೆಚ್ಚುವರಿ ರೈಲುಗಳ ಅವಶ್ಯಕತೆಯಿದೆ. ಪ್ರಸ್ತುತ ಸೇವೆಗಳು ಪ್ರಯಾಣಿಕರಿಗೆ ಸಾಕಾಗುತ್ತಿಲ್ಲ ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಒತ್ತಿಹೇಳಿದ್ದಾರೆ.

"ಪ್ರಸ್ತುತ ರೈಲುಗಳಲ್ಲಿ ವಿಪರೀತ ದಟ್ಟಣೆಯಿಂದಾಗಿ ಪ್ರಯಾಣಿಕರು ಬೀದರ್-ಬೆಂಗಳೂರು ಮತ್ತು ಕಲಬುರಗಿ-ಬೆಂಗಳೂರು ವಲಯಗಳ ನಡುವೆ ಪ್ರಯಾಣಿಸಲು ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂದು ನಿಮ್ಮ ಗಮನಕ್ಕೆ ತರಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಕಾಯ್ದಿರಿಸದ ಕೋಚ್‌ಗಳಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಕಲಬುರಗಿಯಿಂದ ಬೆಂಗಳೂರಿಗೆ ನಿತ್ಯ ಆರು ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ. ಕಾಯ್ದಿರಿಸದ ಬೋಗಿಗಳಲ್ಲಿ ಸಂಚರಿಸುವುದು ಅನೇಕರಿಗೆ ಅನಿವಾರ್ಯವಾಗಿದೆ" ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​ ಅವರಿಗೆ ಬರೆದ ಪತ್ರದಲ್ಲಿ ಖರ್ಗೆ ಉಲ್ಲೇಖಿಸಿದ್ದಾರೆ.

"ಹೀಗಾಗಿ ರೈಲ್ವೇ ಸಚಿವರು ತುರ್ತಾಗಿ ಮಧ್ಯಸ್ಥಿಕೆ ವಹಿಸಬೇಕು. ಕಲಬುರಗಿಯಿಂದ ಬೆಂಗಳೂರಿಗೆ ಎರಡು ಹೆಚ್ಚುವರಿ ರೈಲು ಹಾಗೂ ಬೀದರ್‌ನಿಂದ ಬೆಂಗಳೂರಿಗೆ ಒಂದು ಹೊಸ ರೈಲನ್ನು ತುರ್ತಾಗಿ ಪ್ರಾರಂಭವಾಗುವ ಅವಶ್ಯಕತೆಯಿದೆ. ಇದು ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಕೋಚ್​ ಕಾಯ್ದಿರಿಸಲು ಪ್ರಯಾಣಿಕರಿಗೆ ಸಹಾಯ ಮಾಡುತ್ತದೆ" ಎಂದು ಮಲ್ಲಿಕಾರ್ಜುನ ಖರ್ಗೆ ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಪ್ರಸ್ತುತ ಉದ್ಯಾನ್ ಎಕ್ಸ್‌ಪ್ರೆಸ್, ಕರ್ನಾಟಕ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್, ಸೊಲ್ಲಾಪುರ ಹಾಸನ ಎಕ್ಸ್‌ಪ್ರೆಸ್ ಮತ್ತು ಕೊಯಮತ್ತೂರು ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಕಲಬುರಗಿ ನಡುವಿನ ದೈನಂದಿನ ರೈಲುಗಳಾಗಿವೆ. ನಾಗರ್‌ಕೋಯಿಲ್ ಎಕ್ಸ್‌ಪ್ರೆಸ್, ಟುಟಿಕೋರಿನ್ ವಿವೇಕ್ ಎಕ್ಸ್‌ಪ್ರೆಸ್, ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್, ಎಂಜಿಆರ್ ಚೆನ್ನೈ ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಯಶವಂತಪುರ ಸುವಿಧಾ ಎಕ್ಸ್‌ಪ್ರೆಸ್ ಕಲಬುರಗಿ ಮತ್ತು ಬೆಂಗಳೂರು ನಡುವೆ ವಾರಕ್ಕೊಮ್ಮೆ ಮಾತ್ರ ಚಲಿಸುತ್ತವೆ.

ಕರ್ನಾಟಕ ರಾಜ್ಯದ ನಕ್ಷೆಯ ಆಕಾರದಲ್ಲಿ ರಾಜ್ಯದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಪ್ರತಿನಿಧಿಸುವ ರಾಜ್ಯ ಪ್ರಾಣಿ ಆನೆ, ರಾಜ್ಯ ಪಕ್ಷಿ ನೀಲಕಂಠ, ರಾಜ್ಯ ಮರವಾದ ಶ್ರೀಗಂಧ, ರಾಜ್ಯ ಚಿಟ್ಟೆ ಸ್ವರ್ಣೆ ಹಾಗೂ ರಾಷ್ಟ್ರೀಯ ಪ್ರಾಣಿ ಮಾತ್ರವಲ್ಲ ರಾಜ್ಯದ ಪ್ರಮುಖ ವನ್ಯಜೀವಿಯೂ ಆಗಿರುವ ಹುಲಿಯ ಚಿತ್ರ ಹಾಗೂ ಎಲ್ಲದಕ್ಕೂ ಮೂಲ ಆಧಾರವೆಂಬಂತೆ ನಕ್ಷಯೆ ಬುಡದಲ್ಲಿ ನೀರಿನ ಮೂಲಗಳನ್ನು ಪ್ರತಿಬಿಂಬಿಸುವ ನೀಲಿಬಣ್ಣವನ್ನು ನೂತನ ಲೋಗೋ ಒಳಗೊಂಡಿದೆ. ಲೋಗೋ ನೋಡಲು ಇಲ್ಲಿ ಕ್ಲಿಕ್​ ಮಾಡಿ