ಕನ್ನಡ ಸುದ್ದಿ / ಕರ್ನಾಟಕ /
ಮಂಗಳೂರು: ಪತ್ನಿಯ ಸೀಮಂತದಂದೇ ಪತಿ ಹೃದಯಾಘಾತದಿಂದ ನಿಧನ
ಸತೀಶ್ ಅವರ ಪತ್ನಿಯ ಸೀಮಂತ ಶುಕ್ರವಾರ ನಿಗದಿಯಾಗಿತ್ತು. ಈ ವೇಳೆ ಸತೀಶ್ ಏಕಾಏಕಿ ತಮ್ಮ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.

ಪತ್ನಿಯ ಸೀಮಂತದಂದೇ ಪತಿ ಹೃದಯಾಘಾತದಿಂದ ನಿಧನ
ಮಂಗಳೂರು: ಪತ್ನಿಯ ಸೀಮಂತದಂದೇ ಪತಿ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ವಿಟ್ಲ ಸಮೀಪದ ಕನ್ಯಾನ ಬಳಿಯ ಮಿತ್ತನಡ್ಕ ಎಂಬಲ್ಲಿ ನಡೆದಿದೆ. ಕನ್ಯಾನ ಮಿತ್ತನಡ್ಕ ನಿವಾಸಿ, ಪಿಕ್‌ಅಪ್ ವಾಹನ ಚಾಲಕ ಸತೀಶ್ (33) ಮೃತಪಟ್ಟವರು.
ಸತೀಶ್ ಅವರ ಪತ್ನಿಯ ಸೀಮಂತ ಶುಕ್ರವಾರ ನಿಗದಿಯಾಗಿತ್ತು. ಸೀಮಂತ ಕಾರ್ಯದ ಸಿದ್ಧತೆಯಲ್ಲಿ ಎಲ್ಲರೂ ತೊಡಗಿದ್ದರು. ಈ ವೇಳೆ ಸತೀಶ್ ಏಕಾಏಕಿ ತಮ್ಮ ಮನೆಯಲ್ಲಿಯೇ ಬೆಳಗ್ಗೆ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಹೃದಯಾಘಾತ ಆಗಿದ್ದರಿಂದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಷ್ಟರಲ್ಲಿ ಸತೀಶ್ ಕೊನೆಯುಸಿರೆಳೆದಿದ್ದಾರೆ.