ಮೈಸೂರು: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ; ಓರ್ವನ ಕೊಲೆಯಲ್ಲಿ ಅಂತ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ; ಓರ್ವನ ಕೊಲೆಯಲ್ಲಿ ಅಂತ್ಯ

ಮೈಸೂರು: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ; ಓರ್ವನ ಕೊಲೆಯಲ್ಲಿ ಅಂತ್ಯ

ಮೈಸೂರು‌ ಜಿಲ್ಲೆ ಹುಣಸೂರು ತಾಲೂಕಿನ ಒಡೆಯರ ಹೊಸಹಳ್ಳಿಯಲ್ಲಿ ಘಟನೆ ನಡೆದಿದ್ದು, ಮಲ್ಲೇಶ್ ಕೊಲೆಯಾದ ವ್ಯಕ್ತಿಯಾಗಿದ್ದಾರೆ.

ಮಾವಿನ ಹಣ್ಣಿಗಾಗಿ ನಡೆದ ಗಲಾಟೆ; ಓರ್ವನ ಕೊಲೆಯಲ್ಲಿ ಅಂತ್ಯ
ಮಾವಿನ ಹಣ್ಣಿಗಾಗಿ ನಡೆದ ಗಲಾಟೆ; ಓರ್ವನ ಕೊಲೆಯಲ್ಲಿ ಅಂತ್ಯ

ಮೈಸೂರು: ಮಾವಿನ ಹಣ್ಣಿಗಾಗಿ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರು‌ ಜಿಲ್ಲೆ ಹುಣಸೂರು ತಾಲೂಕಿನ ಒಡೆಯರ ಹೊಸಹಳ್ಳಿಯಲ್ಲಿ ಘಟನೆ ನಡೆದಿದ್ದು, ಮಲ್ಲೇಶ್ (55) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ತಮ್ಮನ ಮಗ ಚೇತನ್‌ ಕೊಲೆ ಮಾಡಿದ್ದಾನೆಂದು ಆರೋಪ ಕೇಳಿಬಂದಿದ್ದು, ಮಾವಿನ ಹಣ್ಣು ಹಂಚಿಕೆ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಒಪ್ಪಂದ ಉಂಟಾಗಿತ್ತು.

ಸಹೋದರರಾದ ರಾಜೇಗೌಡ ಹಾಗೂ ಮಲ್ಲೇಶ್ ನಡುವೆ ಒಪ್ಪಂದವಾಗಿತ್ತು ಎಂದು ಪೊಲೀಸರು ತಿಳಿಸಿದ್ದು, ನಂತರ ಈ ಬಗ್ಗೆ ರಾಜೇಗೌಡರ ಮಗ ಚೇತನ್‌ರಿಂದ ಆಕ್ಷೇಪ ಉಂಟಾಗಿ ಗಲಾಟೆ ಉಂಟಾಗಿದೆ. ಗಲಾಟೆ ನಡುವೆ ಮಲ್ಲೇಶ್‌ಗೆ ತಮ್ಮನ ಮಗ ಚೇತನ್ ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿದೆ.

ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in