ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಸಿಲುಕಿಕೊಂಡ ವಾಹನ ಸವಾರ, ಹತ್ತೇ ನಿಮಿಷದಲ್ಲಿ ಆತ ಇದ್ದಲ್ಲಿಗೇ ಬಂತು ಆಹಾರ!
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಸಿಲುಕಿಕೊಂಡ ವಾಹನ ಸವಾರ, ಹತ್ತೇ ನಿಮಿಷದಲ್ಲಿ ಆತ ಇದ್ದಲ್ಲಿಗೇ ಬಂತು ಆಹಾರ!

ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಸಿಲುಕಿಕೊಂಡ ವಾಹನ ಸವಾರ, ಹತ್ತೇ ನಿಮಿಷದಲ್ಲಿ ಆತ ಇದ್ದಲ್ಲಿಗೇ ಬಂತು ಆಹಾರ!

ಬೆಂಗಳೂರು ಟ್ರಾಫಿಕ್‌ ಮತ್ತು 10 ನಿಮಿಷದಲ್ಲಿ ಆಹಾರ ಪೂರೈಸುವ ಚಾಕಚಕ್ಯತೆ ಸದ್ಯ ಎಕ್ಸ್‌ ಖಾತೆಯಲ್ಲಿ ಚರ್ಚೆಯ ವಿಚಾರ. ಇದಕ್ಕೆ ಕಾರಣವಾಗಿದ್ದು, ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಸಿಲುಕಿಕೊಂಡ ವಾಹನ ಸವಾರ, ಹತ್ತೇ ನಿಮಿಷದಲ್ಲಿ ಆತ ಇದ್ದಲ್ಲಿಗೇ ಆಹಾರ ಪೂರೈಕೆಯಾದ ಘಟನೆ. ಯಾರು ಏನು ಹೇಳಿದ್ರು ಅಂತ ನೋಡೋಣ.

ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಸಿಲುಕಿಕೊಂಡ ವಾಹನ ಸವಾರ, ಹತ್ತೇ ನಿಮಿಷದಲ್ಲಿ ಆತ ಇದ್ದಲ್ಲಿಗೇ ಬಂತು ಆಹಾರ!. ಈ ವಿಚಾರ ಈಗ ವೈರಲ್ ಆಗಿದೆ.
ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಸಿಲುಕಿಕೊಂಡ ವಾಹನ ಸವಾರ, ಹತ್ತೇ ನಿಮಿಷದಲ್ಲಿ ಆತ ಇದ್ದಲ್ಲಿಗೇ ಬಂತು ಆಹಾರ!. ಈ ವಿಚಾರ ಈಗ ವೈರಲ್ ಆಗಿದೆ. (@speakingofarpit)

ಬೆಂಗಳೂರು: ಸಂಚಾರ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಬೆಂಗಳೂರಲ್ಲಿ ನಿತ್ಯವೂ ಒಂದಿಲ್ಲೊಂದು ಗಮನಸೆಳೆಯುವ ಘಟನೆಗಳು ಆಗುತ್ತಿರುತ್ತವೆ. ಸೋಷಿಯಲ್ ಮೀಡಿಯಾದಲ್ಲಿ ಇದು ಬೇಗ ವೈರಲ್ ಆಗುತ್ತಿದ್ದು, ಇತ್ತೀಚಿನ ಘಟನೆಯಲ್ಲಿ ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆಗೂ ಹೆಚ್ಚು ಹೊತ್ತು ಸಿಲುಕಿಕೊಂಡ ವಾಹನ ಸವಾರ, ಹತ್ತೇ ನಿಮಿಷದಲ್ಲಿ ಆತ ಇದ್ದಲ್ಲಿಗೇ ಬಂತು ಆಹಾರ ಪೂರೈಕೆ ಆಗಿರುವುದು ಚರ್ಚೆಗೆ ಒಳಗಾಗಿದೆ. ಬೆಂಗಳೂರಿಗ ಅರ್ಪಿತ್‌ ಅರೋರಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ಧಾರೆ. ನವೆಂಬರ್ 5 ರಂದು ಎರಡು ಗಂಟೆ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹತಾಶೆಗೊಳಗಾಗಿದ್ದ ಸಂದರ್ಭದಲ್ಲಿ ರಾತ್ರಿ ಊಟಕ್ಕೆ ಆಪ್ ಮೂಲಕ ಆರ್ಡರ್ ಮಾಡಿದರೆ ಕೇವಲ 10 ನಿಮಿಷದಲ್ಲಿ ಫುಡ್ ಡೆಲಿವರಿ ಆಗಿದೆ! ಸಂಚಾರ ದಟ್ಟಣೆ, ವಾಹನಗಳು ನಿಂತಲ್ಲೇ ನಿಂತಿವೆ. ಆದರೆ ಆಹಾರ 10 ನಿಮಿಷದಲ್ಲಿ ಸಿಕ್ಕ ಬಗೆಯೇ ಅಚ್ಚರಿ ಮೂಡುವಂತೆ ಮಾಡಿತು ಎಂದು ಅವರು ಹೇಳಿಕೊಂಡಿದ್ದಾರೆ.

ಬೆಂಗಳೂರು ಸಂಚಾರ ದಟ್ಟಣೆ; 2 ಗಂಟೆ ನಿಂತಲ್ಲೇ ಇದ್ದ ವಾಹನ ಸವಾರ, ಹತ್ತೇ ನಿಮಿಷಕ್ಕೆ ಬಂದ ಆಹಾರ

ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಬೆಂಗಳೂರಿಗ ಅರ್ಪಿತ್‌ ಅರೋರಾ ಎಂಬುವವರು ಟ್ವೀಟ್ ಮಾಡಿದ್ದು, ಇದೊಂದು ಥರಾ ಪೀಕ್ ಬೆಂಗಳೂರು ಕ್ಷಣ. ನೀವು ಟ್ರಾಫಿಕ್‌ನಲ್ಲಿ ಸಿಲುಕಿ ಬಹುತೇಕ ಎರಡು ಗಂಟೆಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿದ್ದೀರಿ. ನೀವು ಕಾರಿನಲ್ಲಿ ಕುಳಿತು ರಾತ್ರಿ ಊಟ ಆರ್ಡರ್ ಮಾಡುತ್ತೀರಿ. ಅದು 10 ನಿಮಿಷಕ್ಕೆ ಬಂದೇ ಬಿಡ್ತು!. ಅದು ತಿಂದು ಮುಗಿಯಬಹುದು, ಆದರೆ ಈ ಸಂಚಾರ ದಟ್ಟಣೆ ಸರಿಯಾಗಲ್ಲ ಎಂದು ಹೇಳಿಕೊಂಡಿದ್ದಾರೆ.

ಅರ್ಪಿತ್ ಅರೋರಾ ಅವರು ನವೆಂಬರ್ 5 ರಂದು ಸಂಜೆಯೇ ಈ ಪೋಸ್ಟ್ ಮಾಡಿದ್ದು, 1700ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದ್ದು, 200ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. 1.84 ಲಕ್ಷ ವೀಕ್ಷಣೆಯೂ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ

“ಹಹಹ… ನಮ್ಮ ಬೆಂಗಳೂರಿಗೆ ಸುಸ್ವಾಗತ.. ಹಾಗಾದರೆ ನೀವು ಇದನ್ನು ರೂಢಿಸಿಕೊಳ್ಳಬೇಕು.. ಇಲ್ಲವಾದರೆ ಸ್ಥಳವನ್ನು ತೊರೆಯುವುದು ಉತ್ತಮ ಆಯ್ಕೆ.. ಬೇರೆ ಆಯ್ಕೆಯಿಲ್ಲ” ಎಂದು ಧೀಕ್ಷಿತಾ ಎಂಬುವವರು ಲಘುವಾಗಿ ಛೇಡಿಸಿ ಪ್ರತಿಕ್ರಿಯಿಸಿದ್ದಾರೆ.

ನಾನು ಬೆಡ್‌ನಿಂದ ಮೇಲೇಳಬೇಕಾದರೆ ಬೇಕು 10 ನಿಮಿಷ. ಅಂಥದ್ರಲ್ಲಿ ಅಲ್ಲಿ 10 ನಿಮಿಷಕ್ಕೆ ಊಟ ಬಂದು ಬಿಡ್ತಾ… ಅಬ್ಬಬ್ಬಾ… ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಏನು ತಿನ್ನಬೇಕು ಅಂಥ ನಿರ್ಧರಿಸೋದಕ್ಕೆ ನನಗೆ 10 ನಿಮಿಷ ಬೇಕಾಗುತ್ತೆ. ಅಷ್ಟೇ ಏಕೆ ಇವತ್ತು ಆಫೀಸಿಗೆ ಸ್ನಾನ ಮಾಡ್ಕೊಂಡು ಹೋಗುವುದಾ ಅಥವಾ ಹಾಗೇ ಹೋಗುವುದಾ ಅಂತ ನಿರ್ಧಾರ ಮಾಡೋದಕ್ಕೂ 10 ನಿಮಿಷ ತಗೊಳ್ತೇನೆ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಹತ್ತು ನಿಮಿಷದಲ್ಲಿ ಊಟ ಕೂಡ ಡೆಲಿವರಿ ಕೊಟ್ಟು ಹೋಗ್ತಾರೆ.. ಆದರೆ ಇಷ್ಟು ವೇಗವಾಗಿ ಕ್ರಷ್‌ ಕೂಡ ಉತ್ತರ ಕೊಡೋದಿಲ್ಲ ಎಂದು ಅಲವತ್ತುಕೊಂಡಿದ್ದಾರೆ ಒಬ್ಬರು.

ಉಸೈನ್ ಬೋಲ್ಡ್‌ಗಿಂತ ವೇಗ ಯಾವುದು ಎಂದರೆ ಅದು ಸ್ವಿಗ್ಗಿ ಡೆಲಿವರಿ ಬೋಲ್ಟ್‌ ಎಂದು ಮತ್ತೊಬ್ಬರು ಲಘುವಾಗಿ ಛೇಡಿಸಿದ್ದಾರೆ.

ಬೆಂಗಳೂರಿನಲ್ಲಿರುವ ಉದ್ಯಮಿಗಳಿರುವುದೇ ಮತ್ತೊಂದು ಸ್ತರದಲ್ಲಿ. ಅವರು ಟ್ರಾಫಿಕ್‌ನಲ್ಲೂ ಲಾಭ ಗಳಿಸುವುದು ಹೇಗೆ ಎಂದು ಆಲೋಚಿಸುತ್ತಿರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೆಂಥಾ ಬದುಕು ಮಹರಾಯ… ಮುಂಬಯಿನಲ್ಲಿ ಕೂಡ ಇದೇ ಗೋಳು ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.

ಬೆಂಗಳೂರು ರಸ್ಟೋರೆಂಟ್‌ಗಳೇನು ಶಕಲಕ ಪೆನ್ಸಿಲ್‌ ಇಟ್ಕೊಂಡು ಆಹಾರ ತಯಾರಿಸ್ತಾವಾ ಹೇಗೆ, 10 ನಿಮಿಷದಲ್ಲಿ ಫುಡ್‌ ಡೆಲಿವರಿ ಕೊಡ್ತಿದ್ದಾವಲ್ಲ ಅದಕ್ಕೆ ಕೇಳಿದೆ ಎಂದು ವಂಶಿತಾ ಹೇಳಿಕೊಂಡಿದ್ದಾರೆ.

Whats_app_banner