ಕನ್ನಡ ಸುದ್ದಿ  /  Karnataka  /  Man Who Peeled Off Stickers Hiding Hindi Instructions In Bengaluru Metro Apologizes

Bengaluru: 'ಪ್ರಿಯ ಕನ್ನಡಿಗರೇ...': ನಮ್ಮ ಮೆಟ್ರೋದಲ್ಲಿ ಹಿಂದಿ ಸೂಚನೆ ಮರೆಮಾಚುವ ಸ್ಟಿಕ್ಕರ್​ ಕಿತ್ತ ವ್ಯಕ್ತಿಯಿಂದ ಕ್ಷಮೆಯಾಚನೆ

ಬೆಂಗಳೂರಿನ ನಮ್ಮ ಮೆಟ್ರೊ ರೈಲಿನಲ್ಲಿ ಹಿಂದಿ ಭಾಷೆಯ ಸೂಚನೆಗಳನ್ನು ಮರೆಮಾಚಿದ್ದ ಸ್ಟಿಕ್ಕರ್‌ಗಳನ್ನು ಕಿತ್ತ ವ್ಯಕ್ತಿ ಇದೀಗ ಕನ್ನಡಿಗರ ಬಳಿ ಕ್ಷಮೆಯಾಚಿಸಿದ್ದಾನೆ.

ನಮ್ಮ ಮೆಟ್ರೋದಲ್ಲಿ ಹಿಂದಿ ಸೂಚನೆ ಮರೆಮಾಚುವ ಸ್ಟಿಕ್ಕರ್​ ಕಿತ್ತ ವ್ಯಕ್ತಿ
ನಮ್ಮ ಮೆಟ್ರೋದಲ್ಲಿ ಹಿಂದಿ ಸೂಚನೆ ಮರೆಮಾಚುವ ಸ್ಟಿಕ್ಕರ್​ ಕಿತ್ತ ವ್ಯಕ್ತಿ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೊ ರೈಲಿನಲ್ಲಿ ಹಿಂದಿ ಭಾಷೆಯ ಸೂಚನೆಗಳನ್ನು ಮರೆಮಾಚಿದ್ದ ಸ್ಟಿಕ್ಕರ್‌ಗಳನ್ನು ಕಿತ್ತ ವ್ಯಕ್ತಿ ಇದೀಗ ಕನ್ನಡಿಗರ ಬಳಿ ಕ್ಷಮೆಯಾಚಿಸಿದ್ದಾನೆ.

"ಹಾಯ್​ ಎಲ್ಲಾ ಕನ್ನಡಿಗರೇ, ನಾನು ಬೈ ಮಿಸ್​ ಆಗಿ ಸ್ಟಿಕ್ಕರ್‌ಗಳನ್ನು ಕಿತ್ತು ಹಾಕಿದ್ದೇನೆ, ಅದಕ್ಕಾಗಿ ಕ್ಷಮಿಸಿ. ನಾನು ಪ್ರಾದೇಶಿಕ ಭಾಷೆಯ ಮೇಲೆ ಹಿಂದಿ ಹೇರಿಕೆಯನ್ನು ಸಹ ವಿರೋಧಿಸುತ್ತೇನೆ, ನಾನು ನನ್ನ ಕರ್ಮಭೂಮಿಯನ್ನು ಗೌರವಿಸುತ್ತೇನೆ. ದಯವಿಟ್ಟು ನನ್ನ ಕ್ಷಮೆಯನ್ನು ಸ್ವೀಕರಿಸಿ" ಎಂದು ವಿಡಿಯೋವೊಂದರಲ್ಲಿ ಹೇಳಿದ್ದಾರೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿಯ ಭಾಷೆಯ ಸ್ಟಿಕ್ಕರ್‌ ಅಂಟಿಸಲಾಗಿತ್ತು. ಹಿಂದಿ ಹೇರಿಕೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾದ ಬೆನ್ನಲ್ಲೆ, ಹಿಂದಿ ಬರಹದ ಮೇಲೆ ಸ್ಟಿಕ್ಕರ್‌ ಅಂಟಿಸಲಾಗಿತ್ತು. ಹಾಗೆ ಹಿಂದಿ ಬರಹದ ಮೇಲೆ ಅಂಟಿಸಿದ ಸ್ಟಿಕ್ಕರ್‌ಅನ್ನು ಅಕ್ಷಯ್‌ ಗುಪ್ತಾ ಎಂಬ ವ್ಯಕ್ತಿ 'ಹಿಂದಿ ಜೊತೆ ಇವರಿಗೇನು ಸಮಸ್ಯೆ' ಎಂದು ಗೊಣಗುತ್ತಾ ಕಿತ್ತು ಹಾಕಿದ್ದ. ಹಾಗೆ ಕಿತ್ತು ಹಾಕುವ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದ.

ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ, ಆತನ ವಿಳಾಸ ಪತ್ತೆ ಮಾಡಿ ತಂಡದೊಂದಿಗೆ ತೆರಳಿದ ಕನ್ನಡಪರ ಹೋರಾಟಗಾರ ಹಾಗೂ ಬಿಗ್​ಬಾಸ್​ ಸೀಸನ್​ 9ರ ಸ್ಪರ್ಧಿ ರೂಪೇಶ್‌ ರಾಜಣ್ಣ, ಕರ್ನಾಟಕದಲ್ಲಿನ ವಾಸ್ತವತೆ ಏನೆಂಬುದನ್ನು ವಿವರಿಸಿದ್ದರು. ಮಾಡಿದ್ದು ಸರೀನಾ ತಪ್ಪಾ ಎಂದು ತಿಳಿಹೇಳಿದ್ದರು. ನಾವು ಭೇಟಿ ಮಾಡಿ ತಿಳಿ ಹೇಳಿದ ಬಳಿಕವೇ ಆತ ಕ್ಷಮೆ ಯಾಚಿಸಿದ್ದಾರೆ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

ಹಿಂದಿ ಸೂಚನೆ ಮರೆಮಾಚುವ ಸ್ಟಿಕ್ಕರ್​ ಕಿತ್ತ ವಿಡಿಯೋ ನೋಡಿದ ನೆಟ್ಟಿಗರು ಅಕ್ಷಯ್‌ ಗುಪ್ತಾನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಉತ್ತರ ಭಾರತದಲ್ಲಿ ನಮ್ಮ ದಕ್ಷಿಣದ ಭಾಷೆಗಳ ಮೇಲೆ ಏಕೆ ಇಷ್ಟೊಂದು ದ್ವೇಷ? ನಿಮ್ಮ ಮಹಾನಗರಗಳಲ್ಲಿ ನಮ್ಮ ತೆಲುಗು, ಕನ್ನಡ, ತಮಿಳು, ಮಲಯಾಳಂ ಸೈನ್‌ಬೋರ್ಡ್‌ಗಳು ಏಕೆ ಇಲ್ಲ?” ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದರು.

“ನಮ್ಮ ರಾಜ್ಯದಲ್ಲಿ ನಮಗೆ ನಮ್ಮದೇ ಭಾಷೆ ಸಾಕು. ಸಂವಹನ ಭಾಷೆಯಾಗಿ ಇಂಗ್ಲಿಷ್ ಬಳಕೆಯಾಗುತ್ತದೆ, ನಮಗೆ ಬೇರೆ ಭಾಷೆ ಬೇಕಾಗಿಲ್ಲ” ಎಂದು ಮತ್ತೊಬ್ಬರು ಟ್ವೀಟ್​ ಮಾಡಿದ್ದರು.

ಗಮನಿಸಬಹುದಾದ ಇತರೆ ಸುದ್ದಿಗಳು

Kannada Pustaka Pradhikara: ಕನ್ನಡ ಪುಸ್ತಕ ನೀತಿ ಪುನರ್ ರಚನೆ; ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯ ಆಹ್ವಾನ

ಕನ್ನಡ ಪುಸ್ತಕ ಲೋಕವು ಆಧುನಿಕ ಮಾಧ್ಯಮಗಳ ನೂತನ ಅವಿಷ್ಕಾರಗಳ ಫಲವಾಗಿ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಪುಸ್ತಕೋದ್ಯಮದ ಎಲ್ಲ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಠಿಕೋನದಿಂದ ನೋಡುವ ಅಗತ್ಯ ಇದೆ. ಆದ್ದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್ ರಚಿಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

The survivor Trailer: ಕನ್ನಡದಲ್ಲಿ ಸಿದ್ಧವಾಯ್ತು ಹಾಲಿವುಡ್‌ ಶೈಲಿಯ ಕಿರುಚಿತ್ರ; ಹಲವು ಭಾಷೆಗಳಲ್ಲಿ ‘ದಿ ಸರ್ವೈವರ್’‌ ಟ್ರೇಲರ್ ರಿಲೀಸ್‌

ಯುವ ಪ್ರತಿಭೆಗಳು ತಮ್ಮನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿ ಕಿರುಚಿತ್ರಗಳು ಹಾಗೂ ಅಲ್ಬಮ್ ಸಾಂಗ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಾಲಿಗೆ ಯುವ ಪ್ರತಿಭೆ ರಜತ್ ರಜನಿಕಾಂತ್ ಸೇರಿದ್ದಾರೆ. ಸಿನಿಮಾ ಮಾಡುವ ಕನಸನ್ನು ಹೊತ್ತು ಇಂಡಸ್ಟ್ರಿಗೆ ಬಂದಿರುವ ಇವರು ಮೊದಲ ಪ್ರಯತ್ನವಾಗಿ 'ದ ಸರ್ವೈವರ್' ಎಂಬ ಕಿರುಚಿತ್ರವನ್ನು ಸಿದ್ದಪಡಿಸಿದ್ದಾರೆ. ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್​ ಮಾಡಿ

IPL_Entry_Point