ಮಂಡ್ಯ ಬಾಲಕಿ ಸಾವು ಪ್ರಕರಣ: ಟ್ರಾಫಿಕ್ ಫೈನ್ ನಾವೆಲ್ಲರೂ ಕಟ್ಟುತ್ತೇವೆ, ಈ ಮಗುವಿನ ಪ್ರಾಣ ಕೊಡ್ತೀರಾ, ಜನಾಕ್ರೋಶ, ಯಾರು ಏನು ಹೇಳಿದ್ರು
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯ ಬಾಲಕಿ ಸಾವು ಪ್ರಕರಣ: ಟ್ರಾಫಿಕ್ ಫೈನ್ ನಾವೆಲ್ಲರೂ ಕಟ್ಟುತ್ತೇವೆ, ಈ ಮಗುವಿನ ಪ್ರಾಣ ಕೊಡ್ತೀರಾ, ಜನಾಕ್ರೋಶ, ಯಾರು ಏನು ಹೇಳಿದ್ರು

ಮಂಡ್ಯ ಬಾಲಕಿ ಸಾವು ಪ್ರಕರಣ: ಟ್ರಾಫಿಕ್ ಫೈನ್ ನಾವೆಲ್ಲರೂ ಕಟ್ಟುತ್ತೇವೆ, ಈ ಮಗುವಿನ ಪ್ರಾಣ ಕೊಡ್ತೀರಾ, ಜನಾಕ್ರೋಶ, ಯಾರು ಏನು ಹೇಳಿದ್ರು

ಮಂಡ್ಯ ಬಾಲಕಿ ಸಾವು ಪ್ರಕರಣವು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಅಸಡ್ಡೆಯಿಂದ ದಿಢೀರ್ ವಾಹನ ತಡೆದು ನಿಲ್ಲಿಸಿ ತಪಾಸಣೆ ನಡೆಸುವ ಕ್ರಮದ ಬಗ್ಗೆ ಟೀಕೆಯೂ ವ್ಯಕ್ತವಾಗಿದೆ. ಟ್ರಾಫಿಕ್ ಫೈನ್ ನಾವೆಲ್ಲರೂ ಕಟ್ಟುತ್ತೇವೆ, ಈ ಮಗುವಿನ ಪ್ರಾಣ ಕೊಡ್ತೀರಾ ಎಂದೂ ಪ್ರಶ್ನಿಸಿದ್ದಾರೆ. ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

ಮಂಡ್ಯ ಬಾಲಕಿ ಸಾವು ಪ್ರಕರಣ: ಟ್ರಾಫಿಕ್ ಫೈನ್ ನಾವೆಲ್ಲರೂ ಕಟ್ಟುತ್ತೇವೆ, ಈ ಮಗುವಿನ ಪ್ರಾಣ ಕೊಡ್ತೀರಾ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರು ಏನು ಹೇಳಿದ್ರು ಎಂಬ ವಿವರ ಇಲ್ಲಿದೆ. (ಕಡತ ಚಿತ್ರ)
ಮಂಡ್ಯ ಬಾಲಕಿ ಸಾವು ಪ್ರಕರಣ: ಟ್ರಾಫಿಕ್ ಫೈನ್ ನಾವೆಲ್ಲರೂ ಕಟ್ಟುತ್ತೇವೆ, ಈ ಮಗುವಿನ ಪ್ರಾಣ ಕೊಡ್ತೀರಾ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರು ಏನು ಹೇಳಿದ್ರು ಎಂಬ ವಿವರ ಇಲ್ಲಿದೆ. (ಕಡತ ಚಿತ್ರ)

ಬೆಂಗಳೂರು: ಟ್ರಾಫಿಕ್ ಪೊಲೀಸ್ ತಪಾಸಣೆ ವೇಳೆ ಪೊಲೀಸರ ಅಸಡ್ಡೆ ಕಾರಣ ಅಪಘಾತ ಸಂಭವಿಸಿ ಮೂರು ವರ್ಷದ ಬಾಲಕಿ ಮೃತಪಟ್ಟ ಘಟನೆ ವ್ಯಾಪಕ ಜನಾಕ್ರೋಶ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಜನರು ತಮ್ಮ ಭಾವನೆ, ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಟೀಕೆಗಳು ವ್ಯಕ್ತವಾಗಿವೆ. ರಾಜಕೀಯವಾಗಿ ಕೂಡ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್ ಸೇರಿ ಹಲವು ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಮಂಡ್ಯ ಬಾಲಕಿ ಸಾವು ಪ್ರಕರಣ; ಯಾರು ಏನು ಹೇಳಿದ್ರು

“ಮಂಡ್ಯದಲ್ಲಿ ಸಂಭವಿಸಿರುವ ಮುಗ್ಧ ಬಾಲಕಿಯ ದುರ್ಮರಣ ನನಗೆ ತೀವ್ರ ದುಃಖವುಂಟು ಮಾಡಿದೆ. ನಾಯಿ ಕಡಿತದ ಹಿನ್ನಲೆಯಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತನ್ನ ತಂದೆ-ತಾಯಿ ಜತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ಹಸುಕಂದ ಹೀಗೆ ಅಕಾಲ ಮರಣಕ್ಕೆ ತುತ್ತಾಗಿರುವುದು ನನ್ನ ಮನಸ್ಸನ್ನು ಕಲಕಿದೆ. ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದಾಗ ಅತ್ಯಂತ ಸೂಕ್ಷ್ಮವಾಗಿ ವರ್ತಿಸಬೇಕು. ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ಏಕಾಏಕಿ ರಸ್ತೆಯಲ್ಲಿ ತಡೆದು ನಿಲ್ಲಿಸುವ ಅಥವಾ ಅವರಿಗೆ ಗಾಬರಿ ಉಂಟು ಮಾಡುವ ರೀತಿಯಲ್ಲಿ ವರ್ತಿಸಬಾರದು. ಸ್ವಲ್ಪ ಎಚ್ಚರ ವಹಿಸಿದ್ದಿದ್ದರೆ ಮಗುವಿನ ಸಾವನ್ನು ತಪ್ಪಿಸಬಹುದಿತ್ತು. ಭವಿಷ್ಯದಲ್ಲಿ ಇಂಥ ಅಚಾತುರ್ಯದ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕರು ಕೂಡ ಸಂಚಾರ ನಿಯಮಗಳನ್ನು ಪಾಲಿಸಬೇಕು. ತಮ್ಮ ಜೀವದ ರಕ್ಷಣೆಗಾಗಿಯೇ ನಿಯಮಗಳನ್ನು ಮೀರಬಾರದು ಎಂಬುದು ನನ್ನ ವಿನಮ್ರ ಮನವಿ. ಈ ನಿಟ್ಟಿನಲ್ಲಿ ಪೊಲೀಸರು ಇನ್ನೂ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕು. ಮೃತಪಟ್ಟ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಬಾಲಕಿ ಸಾವು ಕೇಸ್‌; ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಸಚಿವ ಚಲುವನಾರಾಯಣಸ್ವಾಮಿ

ಮಂಡ್ಯದ ಸ್ವರ್ಣಸಂದ್ರ ಬಳಿ ಸಂಚಾರಿ ಪೊಲೀಸರು ಹೆಲ್ಮೆಟ್‌ ತಪಾಸಣೆ ನಡೆಸುತ್ತಿದ್ದ ವೇಳೆ ನಡೆದ ಅನಾಹುತದಿಂದ ಪುಟ್ಟ ಮಗುವೊಂದು ಮೃತಪಟ್ಟ ಘಟನೆ ತಿಳಿದು ಅತೀವ ದುಃಖವಾಗಿದೆ. ಮೃತ ಮಗು ರಿತೀಕ್ಷ್‌ನ ತಂದೆ-ತಾಯಿಗೆ ಈ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಘಟನೆಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಅಮಾನತುಗೊಳಿಸಿ, ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಚಲುವನಾರಾಯಣ ಸ್ವಾಮಿ ಹೇಳಿದ್ಧಾರೆ.

ಟ್ರಾಫಿಕ್ ಫೈನ್ ನಾವೆಲ್ಲರೂ ಕಟ್ಟುತ್ತೇವೆ, ಈ ಮಗುವಿನ ಪ್ರಾಣ ಕೊಡ್ತೀರಾ..!? ಈಗಲೂ ಕರ್ನಾಟಕದ ಹಲವೆಡೆ ರಸ್ತೆ ತಿರುವಿನಲ್ಲಿ ಕಳ್ಳರಂತೆ ಅವಿತು ಏನೋ ಉಗ್ರರ ಹಿಡಿದ ರೀತಿ ಸಡನ್ ಆಗಿ ವಾಹನ ಅಡ್ಡ ಹಾಕಿ ಸುಲಿಗೆ ಮಾಡೋ ಕೆಲವು ಅಯೋಗ್ಯ ಪೊಲೀಸರಿಗೆ ಈ ಘಟನೆ ಪಾಠ ಆಗಬೇಕು..! ಎಂದು ಚೇತನ್‌ ಸೂರ್ಯ ಎಂಬುವವರು ಟ್ವೀಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಮಂಡ್ಯ ಅಪಘಾತದಲ್ಲಿ ಬಾಲಕಿ ಸಾವು ಪ್ರಕರಣದಲ್ಲಿ ಪೊಲೀಸರ ವಾಹನ ತಪಾಸಣೆ ಕ್ರಮ, ಶೈಲಿಯ ವಿಚಾರವಾಗಿ ಟೀಕೆಗೆ ಒಳಗಾಗಿದೆ. ಜನರು ಈ ಬಗ್ಗೆ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.