Mandya News: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ, 60 ಎಕರೆ ಪ್ರದೇಶದಲ್ಲಿ ಆಯೋಜನೆ, 450 ಮಳಿಗೆ, 20 ಎಕರೆ ವಾಹನ ಪಾರ್ಕಿಂಗ್‌
ಕನ್ನಡ ಸುದ್ದಿ  /  ಕರ್ನಾಟಕ  /  Mandya News: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ, 60 ಎಕರೆ ಪ್ರದೇಶದಲ್ಲಿ ಆಯೋಜನೆ, 450 ಮಳಿಗೆ, 20 ಎಕರೆ ವಾಹನ ಪಾರ್ಕಿಂಗ್‌

Mandya News: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ, 60 ಎಕರೆ ಪ್ರದೇಶದಲ್ಲಿ ಆಯೋಜನೆ, 450 ಮಳಿಗೆ, 20 ಎಕರೆ ವಾಹನ ಪಾರ್ಕಿಂಗ್‌

Mandya Kannada Sahitya Sammelana 2024: ಮಂಡ್ಯದಲ್ಲಿ ಡಿಸೆಂಬರ್‌ ಮೂರನೇ ವಾರ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ದತೆಗಳು ಭರದಿಂದ ಸಾಗಿವೆ.

ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಬೃಹತ್‌ ವೇದಿಕೆ ಸಿದ್ದತೆಯನ್ನು ಶಾಸಕ ನರೇಂದ್ರ ಸ್ವಾಮಿ ಪರಿಶೀಲಿಸಿದರು.
ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಬೃಹತ್‌ ವೇದಿಕೆ ಸಿದ್ದತೆಯನ್ನು ಶಾಸಕ ನರೇಂದ್ರ ಸ್ವಾಮಿ ಪರಿಶೀಲಿಸಿದರು.

Mandya Kannada Sahitya Sammelana 2024: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20, 21, 22 ರಂದು ಮೂರು ದಿನಗಳ ಕಾಲ ನಡೆಯಲಿದ್ದು, ಸಮ್ಮೇಳನವನ್ನು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಹೊಂದಿಕೊಂಡಂತೆ ಇರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗವಿರುವ 60 ಎಕರೆ ಪ್ರದೇಶದಲ್ಲಿ ನಡೆಸಲು ಸಜ್ಜುಗೊಳಿಸಲಾಗುತ್ತಿದೆ. 1000 ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು, 450 ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕ ವಾಹನ ನಿಲುಗಡೆಗೆ ಪ್ರತ್ಯೇಕವಾಗಿ ಸುಮಾರು 20 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಸುಮಾರು 9 ಕಡೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆಯೂ ಸಿದ್ದವಾಗುತ್ತಿದೆ.

ಸಾಹಿತ್ಯ ಸಮ್ಮೇಳನ ವೇದಿಕೆ ಸಮಿತಿಯ ಅಧ್ಯಕ್ಷರೂ ಆಗಿರುವ ಮಳವಳ್ಳಿ ವಿಧಾನಸಭಾ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಶುಕ್ರವಾರ ಸ್ಥಳಪರಿಶೀಲನೆ ನಡೆಸಿದರು. ಈ ವೇಳೆ ಹಲವಾರು ಮಾಹಿತಿಗಳನ್ನು ನೀಡಲಾಯಿತು.ನಗರದ ಅಮರಾವತಿ ಹೋಟೆಲ್ ಹಾಗೂ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಕನ್ನಡ ಸಾಹಿತ್ಯ ಸಮ್ಮೇಳನವು ಸುಮಾರು 60 ಎಕರೆ ಪ್ರದೇಶದಲ್ಲಿ ನಡೆಯಲಿದ್ದು, ಮುಖ್ಯ ಪ್ರವೇಶ ದ್ವಾರದಿಂದ ವೇದಿಕೆಯವರೆಗೂ ಸಿದ್ಧತೆ ನಡೆದಿದೆ. ಮುಖ್ಯದ್ವಾರದ ಬಳಿ ನೋಂದಣಿ ಕೌಂಟರ್ ಅನ್ನು ತೆರೆಯಲಾಗುವುದು.

ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲೆಯಲ್ಲಿ ಎಲ್ಲಾ ಜನರೊಡಗೂಡಿ ಕನ್ನಡ ಸಾಹಿತ್ಯ ಸಮ್ಮೇಳನದ ಮೆರಗನ್ನು ಹೆಚ್ಚಿಸುವ ಸಲುವಾಗಿ ಯಾವುದೇ ಉದಾಸೀನ ತೋರದೆ ಜವಾಬ್ದಾರಿಯಿಂದ ಎಲ್ಲರೂ ಒಗ್ಗೂಡಿ ಕನ್ನಡದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು

ಸಮ್ಮೇಳನದ ವೇದಿಕೆ ಸಮ್ಮೇಳನದಲ್ಲಿ 600 ಅಡಿ ಉದ್ದ ಹಾಗೂ 300 ಅಡಿ ಅಗಲದಲ್ಲಿ ಮುಖ್ಯ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಸುಮಾರು 35, 000 ರಿಂದ 40,000 ಜನ ಸಭಿಕರು ಕೂರಲು ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ 2 ಸಮಾನಂತರ ವೇದಿಕೆಯನ್ನು 11,000 ಚದರ ಅಡಿ ಸ್ಥಳದಲ್ಲಿ ನಿರ್ಮಿಸಲಾಗುವುದು.

ಮಳಿಗೆ: ಮುಖ್ಯ ವೇದಿಕೆಯ ಬಲಭಾಗ ಕನ್ನಡ ಆಸಕ್ತರಿಗಾಗಿ ಪುಸ್ತಕ ಮಳಿಗೆಯನ್ನು ತೆರೆಯಲಾಗುವುದು. ಎಡಭಾಗಕ್ಕೆ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಗಳನ್ನು ಇಡಲಾಗುವುದು. ಒಟ್ಟು 1000 ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು, 450 ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ.

ಊಟದ ವ್ಯವಸ್ಥೆ ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಊಟದ ವ್ಯವಸ್ಥೆಯನ್ನು ವೇದಿಕೆಯ ಬಲಭಾಗದಲ್ಲಿ ಮಾಡಲಾಗುವುದು. ಡೈನಿಂಗ್ ಮತ್ತು ಅಡುಗೆಗೆ ಸುಮಾರು 2,64,000 ಅದರ ಅಡಿ ವ್ಯಾಪ್ತಿಯ ಪ್ರದೇಶವನ್ನು ಮೀಸಲಿಡಲಾಗಿದೆ. ಕುಡಿಯುವ ನೀರಿಗೆ ಈಗಾಗಲೇ ಪೈಪ್ಲೈನ್ ವ್ಯವಸ್ಥೆ ಅಳವಡಿಸಲು ಸಿದ್ಧತೆ ನಡೆಯುತ್ತಿದ್ದು, ಯಾವುದೇ ತೊಂದರೆಯಾಗುವುದಿಲ್ಲ.

ಪಾರ್ಕಿಂಗ್ ವ್ಯವಸ್ಥೆ: ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕ ವಾಹನ ನಿಲುಗಡೆಗೆ ಪ್ರತ್ಯೇಕವಾಗಿ ಸುಮಾರು 20 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ವೇದಿಕೆಯ ಬಲಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಶೌಚಾಲಯ ವ್ಯವಸ್ಥೆ: ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಸುಮಾರು 9 ಕಡೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು. ಜನರಿಗೆ ಎಲ್ಲಾ ಮಾಹಿತಿ ಒದಗಿಸಲು ಸೂಚನಾ ಫಲಕಗಳನ್ನು ಅಳವಡಿಸಲಾಗುವುದು.

Whats_app_banner