ಕನ್ನಡ ಸುದ್ದಿ  /  Karnataka  /  Mandya News Four People Drowned In Cauvery River While Swimming Near Muthathi Mandya Rmy

Mandya News: ಈಜಲು ಹೋಗಿದ್ದ ನಾಲ್ವರು ಕಾವೇರಿ ನದಿಯಲ್ಲಿ ಮುಳುಗಿ ಸಾವು; ಮಂಡ್ಯದ ಮುತ್ತತ್ತಿ ಬಳಿ ದುರಂತ

Mandya News: ಕಾವೇರಿ ನದಿಯಲ್ಲಿ ಈಜಾಡಲು ಹೋಗಿ ನಾಲ್ವರು ಮೃತ ಪಟ್ಟಿರುವ ದುರಂತ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಈಜಾಡಲು ಹೋಗಿದ್ದ ನಾಲ್ವರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ಮಂಡ್ಯ ಜಿಲ್ಲೆಯಲ್ಲಿ (Mandya Crime News) ನಡೆದಿದೆ. ಮೃತರ ಮೈಸೂರು ನಗರದವರು ಎಂದು ಗೊತ್ತಾಗಿದೆ. ನಾಗೇಶ್ (40), ಭರತ್ (17), ಗುರು (32) ಹಾಗೂ ಮಹಾದೇವ್ (16) ಮೃತ ದುರ್ದೈವಿಗಳು. ಮೈಸೂರು ಕನಕಗಿರಿ ಬಡಾವಣೆಗೆ ಸೇರಿದ ಇವರು ದೇವರ ಕಾರ್ಯಕ್ಕೆಂದು ಬಂದು ಮಳವಳ್ಳಿ ತಾಲೂಕು ಮುತ್ತತ್ತಿ ಬಳಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ಉಳಿದ ಇಬ್ಬರ ಮೃತದೇಹಗಳಿಗಾಗಿ ಹುಡುಕಾಟ ನಡೆದಿದೆ.

ಕುಟುಂಬಸ್ಥರು ಹಾಗೂ ಸ್ನೇಹಿತರೆಲ್ಲಾ ಸೇರಿ ಬಸ್‌ನಲ್ಲಿ ಮೈಸೂರಿನಿಂದ ಮಂಡ್ಯ ಜಿಲ್ಲೆಯ ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದಾರೆ. ಈ ವೇಳೆ ನಾಲ್ವರು ಈಜಾಡಲು ಹೋಗಿದ್ದಾರೆ. ನೀರಿಿನಲ್ಲಿ ಮುಳುಗುತ್ತಿದ್ದ ಓರ್ವನನ್ನು ಉಳಿಸಲು ಹೋದ ಇತರೆ ಮೂವರು ಕೂಡ ನೀರಿನಲ್ಲಿ ಮುಳುಗು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈಜಾಡಲು ಹೋಗಿದ್ದ ಇಬ್ಬರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ದುರ್ಘಟನೆ ಬೆಂಗಳೂರಿನ ಕಗ್ಗಲೀಪುರ ಬಳಿಯ ಅಗರ ಕೆರೆಯಲ್ಲಿ ಇತ್ತೀಚೆಗಷ್ಟೇ ಸಂಭವಿಸಿತ್ತು. ನವೀನ್ ಮತ್ತು ಪೃಥ್ವಿರಾಜ್ (16) ಮೃತಪಟ್ಟ ವಿದ್ಯಾರ್ಥಿಗಳು. ಒಂಭತ್ತು ಮಂದಿ ಸ್ನೇಹಿತರೊಂದಿಗೆ ಈ ಇಬ್ಬರೂ ಕೆರೆಹೆ ಈಜಲು ತೆರಳಿದ್ದರು. ಮಧ್ಯಾಹ್ನದ ಸುಮಾರಿಗೆ ಈಜಲು ಮುಂದಾದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ತುರ್ತು ಸೇವಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು, ಕಾರ್ಯಾಚರಣೆ ನಂತರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಿದ್ದರು. ಈ ದುರ್ಘಟನೆಯ ನಂತರ ಕಗ್ಗಲಿಪುರ ಪೊಲೀಸರು ಅಸ್ವಾಭಾವಿಕ ಮರಣ ವರದಿ (ಯುಡಿಆರ್) ಪ್ರಕರಣ ದಾಖಲಿಸಿಕೊಂಡಿದ್ದರು.