KRS Reservoir: ಕೃಷ್ಣರಾಜಸಾಗರ ಜಲಾಶಯ ಸುಭದ್ರ, ಆತಂಕ ಬೇಡ; ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ-mandya news krs reservoir oldest in karnataka is in good condition no need of panic minister cheluvarayaswamy clarifies ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Krs Reservoir: ಕೃಷ್ಣರಾಜಸಾಗರ ಜಲಾಶಯ ಸುಭದ್ರ, ಆತಂಕ ಬೇಡ; ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

KRS Reservoir: ಕೃಷ್ಣರಾಜಸಾಗರ ಜಲಾಶಯ ಸುಭದ್ರ, ಆತಂಕ ಬೇಡ; ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Mandya News ಮಂಡ್ಯ ಜಿಲ್ಲೆಯ( Mandya ) ಕೃಷ್ಣರಾಜಸಾಗರ ಜಲಾಶಯ( KRS Dam) ಸುರಕ್ಷಿತವಾಗಿದ್ದು ಆತಂಕ ಬೇಡ ಎಂದು ತಿಳಿಸಲಾಗಿದೆ.

ಸಚಿವ ಚಲುವರಾಯಸ್ವಾಮಿ ಅವರು ಕೆಆರ್‌ಎಸ್‌ ಜಲಾಶಯ ಸುರಕ್ಷತೆ ಕುರಿತು ಮಾತನಾಡಿದ್ದಾರೆ.
ಸಚಿವ ಚಲುವರಾಯಸ್ವಾಮಿ ಅವರು ಕೆಆರ್‌ಎಸ್‌ ಜಲಾಶಯ ಸುರಕ್ಷತೆ ಕುರಿತು ಮಾತನಾಡಿದ್ದಾರೆ.

ಮಂಡ್ಯ: ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್‌ ಗೇಟ್ ನ ಭಾಗ ಮುರಿದು ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಇದರಿಂದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಭಾಗದ ರೈತರಲ್ಲಿ ಆತಂಕ ಎದುರಾಗಿದೆ. ಆದರೆ ಕರ್ನಾಟಕದ ಹಳೆಯ ಜಲಾಶಯಗಳಲ್ಲಿ ಒಂದಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಜಲಾಶಯ ಗಟ್ಟಿ ಮುಟ್ಟಾಗಿದೆ. ಜನ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಜಲಾಶಯದ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಕಾಲಕಾಲಕ್ಕೆ ಜಲಾಶಯದ ಸ್ಥಿತಿಗತಿ ಪರಾಮರ್ಶಿಸಿ ರಿಪೇರಿಯಂತಹ ಚಟುವಟಿಕೆಗಳನ್ನು ಕೈಗೊಂಡು ಕೃಷ್ಣರಾಜಸಾಗರ ಜಲಾಶಯ ಸುಸ್ಥಿತಿಯಲ್ಲಿ ಇಟ್ಟಿದೆ.

ಇದು ಕರ್ನಾಟಕ ಸರ್ಕಾರದ ಸ್ಪಷ್ಟನೆ. ತುಂಗಭದ್ರಾ ಜಲಾಶಯದ ಸ್ಥಿತಿಗತಿ ಬಯಲಾದ ನಂತರ ನೂರು, ಐವತ್ತು ವರ್ಷ ಪೂರೈಸಿರುವ ಕರ್ನಾಟಕದ ಇತರೆ ಜಲಾಶಯಗಳು ಯಾವ ಸ್ಥಿತಿಯಲ್ಲಿವೆ. ಏನಾದರೂ ಅನಾಹುತ ಆಗಬಹುದಾ ಎನ್ನುವ ಆತಂಕ ಜನರಲ್ಲಿದೆ. ಈ ಕಾರಣದಿಂದಲೇ ಮಂಡ್ಯದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್‌.ಚಲುವರಾಯಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

ಕೆಡಿಪಿ ಸಭೆ ವೇಳೆ ಕೆಆರ್‌ ಎಸ್‌ ಸ್ಥಿತಿಗತಿ ಕುರಿತೂ ಚರ್ಚೆಗೆ ಬಂದಿತು. ಆಗ ಸಚಿವ ಎನ್ ಚಲುವರಾಯಸ್ವಾಮಿ, ಕೃಷ್ಣರಾಜ ಸಾಗರ ಸುಭದ್ರವಾಗಿದೆ. ಯಾವುದೇ ಆತಂಕ ಬೇಡ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಕೆ.ಆರ್.ಎಸ್ ಜಲಾಶಯದ ಸುತ್ತ ಅನಧಿಕೃತ ರೆಸಾಟ್ ೯ ಗಳು ಹೆಚ್ಚಾಗುತ್ತಿದೆ. ಕೆಲವು ಕುಡಿಯುವ ನೀರಿನ ಮೂಲಗಳಿಗೆ ಕಾರ್ಖಾನೆಗಳಿಂದ ಕಲುಷಿತ ನೀರು ಮಿಶ್ರಣವಾಗುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ಈಗಲೇ ಗಮನ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು.

ನೀರು ಹರಿಸಲು ಕ್ರಮ

ಜಿಲ್ಲೆಯಲ್ಲಿ 948 ಕೆರೆಗಳಿದ್ದು, ಕೆರೆ ತುಂಬಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಈ ಬಾರಿ ಉತ್ತಮ ಮಳೆ ಯಾಗಿದ್ದು, ಬೆಳೆಗಳಿಗೆ ನೀರಿನ ತೊಂದರೆ ಇಲ್ಲ. ತಾಂತ್ರಿಕಾ ತೊಂದರೆಗಳಿಂದ ಕೆಲವು ಭಾಗಗಳಿಗೆ ಕೃಷಿಗೆ ನೀರು ತಲುಪಿಲ್ಲ ತಡವಾಗಿ ನೀರು ತಲುಪುತ್ತದೆ. ಇದನ್ನು ನೀರಾವರಿ ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡ ಬೇಕು. ಇಲ್ಲಾವಾದಲ್ಲಿ ರೈತರಿಂದ ಹಲವಾರು ದೂರು ಬರುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಕಾವೇರಿ ಅಚ್ಚುಕಟ್ಟಿನಲ್ಲಿ ಹೆಚ್ಚಾಗಿ ಮಳೆಯಾಗಿದೆ. ಕೃಷಿ ಹಾಗೂ ಕೆರೆಗಳಿಗೆ ನೀರು ನೀಡಬೇಕು. ನೀರು ಹರಿಸುವ ಸಂದರ್ಭದಲ್ಲಿ ಜನಪ್ರತಿನಿಧಿಗಳಿಗೆ ತಿಳಿಸಬೇಕು.ಮಳವಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ಕೊನೆಯ ಭಾಗದಲ್ಲಿರುವ ಕೆರೆಗಳನ್ನು ಸಹ ತುಂಬಿಸಲು ಹೆಚ್ಚಿನ ಆದ್ಯತೆ ನೀಡಿ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಿ

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ಕೇವಲ ಆರೋಗ್ಯ ಇಲಾಖೆಯ ಕೆಲಸ ಎಂಬ ಧೋರಣೆ ಬೇಡ. ಪೊಲೀಸ್, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಟ್ಟಾಗಿ ಕೆಲಸ ನಿರ್ವಹಿಸಿ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಯಾಗದಂತೆ ತಡೆಗಟ್ಟಿ ಎಂದು ಸಚಿವರು ಸಲಹೆ ನೀಡಿದರು.

ಬಾಲ್ಯವಿವಾಹ ತಡೆಗಟ್ಟಲು ಜಾಗೃತಿ ಮೂಡಿಸಿ ಬಾಲ್ಯ ವಿವಾಹವಾದ ನಂತರ‌ ಶಿಕ್ಷೆ ವಿಧಿಸುವುದು ಸರಿಯಷ್ಠೆ. ಬಾಲ್ಯವಿವಾಹಕ್ಕಿಂತ ಮೊದಲೇ ತಡೆಗಟ್ಟಲು ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಿ. ಸಾರ್ವಜನಿಕರಲ್ಲಿ ಬಾಲ್ಯ ವಿವಾಹವಾದ ಬಗ್ಗೆ ಕಾನೂನು ಭಯ ಹುಟ್ಟಿಸಿ‌ ಇದರ ಜೊತೆಗೆ ಬಾಲ್ಯವಿವಾಹವಾದ ಹೆಣ್ಣು ಮಗುವಿನ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಎಂದರು.

ರೈತರಿಗೆ ಕಾಲಕ್ಕೆ ಸರಿಯಾಗಿ ಬಿತ್ತನೆ ಬೀಜ, ಕೀಟಾನಾಶಕ ರಸಗೊಬ್ಬರಗಳ ಬಳಕೆ, ಅಳವಡಿಸಿಕೊಳ್ಳಬೇಕಿರುವ ತಾಂತ್ರಿಕತೆ, ತಳಿಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಿ. ರೈತರ ಆತ್ಮಹತ್ಯೆಯ ಪ್ರಕರಣಗಳಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಕೆಲಸದಲ್ಲಿ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಅರ್ಜಿ ಸಲ್ಲಿಸಿ ಅವರಿಗೆ ಪರಿಹಾರ ಒದಗಿಸಬೇಕು. ಯಾವುದೇ ಕಾರಣಕ್ಕೂ ರೈತರ ಮನೆಯವರನ್ನು ಅಲೆದಾಡಿಸಬಾರದು ಎಂದು ನಿರ್ದೇಶನ ನೀಡಿದರು.