ಕನ್ನಡ ಸುದ್ದಿ  /  ಕರ್ನಾಟಕ  /  Mandya Politics: ಮಂಡ್ಯ ಜಿಲ್ಲೆಯಿಂದ ಕೇಂದ್ರ ಸಚಿವರಾದವರು ಐವರು, ಕುಮಾರಸ್ವಾಮಿ ಲೋಕಸಭೆಯಿಂದ ಗೆದ್ದ ಮೊದಲ ಕ್ಯಾಬಿನೇಟ್‌ ಮಂತ್ರಿ !

Mandya Politics: ಮಂಡ್ಯ ಜಿಲ್ಲೆಯಿಂದ ಕೇಂದ್ರ ಸಚಿವರಾದವರು ಐವರು, ಕುಮಾರಸ್ವಾಮಿ ಲೋಕಸಭೆಯಿಂದ ಗೆದ್ದ ಮೊದಲ ಕ್ಯಾಬಿನೇಟ್‌ ಮಂತ್ರಿ !

Mandya ಮಂಡ್ಯ ಜಿಲ್ಲೆಯಿಂದ ಈವರೆಗೂ ನಾಲ್ವರು ಕೇಂದ್ರ ಸಚಿವರಾಗಿದ್ದಾರೆ. ಹೊಸ ಸೇರ್ಪಡೆ ಮೊದಲ ಬಾರಿಗೆ ಮಂಡ್ಯದಲ್ಲಿ ಭಾರೀ ಅಂತರದಿಂದ ಗೆದ್ದ ಎಚ್‌.ಡಿ.ಕುಮಾರಸ್ವಾಮಿ. ಹಿಂದೆ ಆದವರು ಕಾಂಗ್ರೆಸ್‌ನವರು.ಮೊದಲ ಬಾರಿ ಜನತಾದಳದವರಿಗೆ ಈ ಅವಕಾಶ ಸಿಕ್ಕಿದ್ದು. ಅದೂ ಲೋಕಸಭೆ ಸದಸ್ಯರಾಗಿ ಕ್ಯಾಬಿನೆಟ್‌ ದರ್ಜೆ ಸಚಿವರಾಗುತ್ತಿರುವವರಲ್ಲಿ ಕುಮಾರಸ್ವಾಮಿ ಮೊದಲಿಗರು.

ಮಂಡ್ಯದಿಂದ ಕೇಂದ್ರ ಸಚಿವ ಸ್ಥಾನದವರೆಗೂ ಕುಮಾರಸ್ವಾಮಿ. ಎಸ್‌ಎಂ ಕೃಷ್ಣ, ಅಂಬರೀಷ್‌, ರೆಹಮಾನ್‌ ಖಾನ್‌ ಹಾಗೂ ಚಂದ್ರಶೇಖರ ಮೂರ್ತಿ.
ಮಂಡ್ಯದಿಂದ ಕೇಂದ್ರ ಸಚಿವ ಸ್ಥಾನದವರೆಗೂ ಕುಮಾರಸ್ವಾಮಿ. ಎಸ್‌ಎಂ ಕೃಷ್ಣ, ಅಂಬರೀಷ್‌, ರೆಹಮಾನ್‌ ಖಾನ್‌ ಹಾಗೂ ಚಂದ್ರಶೇಖರ ಮೂರ್ತಿ.

ಮಂಡ್ಯ: ಮಂಡ್ಯದ ರಾಜಕಾರಣ ಅದು ಇಂಡಿಯಾದ ರಾಜಕಾರಣ ಎನ್ನುವ ಮಾತಿದೆ. ಈ ಜಿಲ್ಲೆಯವ ಭಾಗವಾಗಿದ್ದ ಐದು ಮಂದಿ ಈವರೆಗೂ ಕೇಂದ್ರದಲ್ಲಿ ಸಚಿವರಾಗಿದ್ಧಾರೆ. ಹಿರಿಯರಾದ ಎಸ್‌.ಎಂ.ಕೃಷ್ಣ ಅವರು ಮೊದಲು ಕೇಂದ್ರದಲ್ಲಿ ರಾಜ್ಯ ಮಂತ್ರಿಯಾಗಿ ನಂತರ ಕರ್ನಾಟಕದ ಮುಖ್ಯಮಂತ್ರಿಯಾಗಿ ಬಳಿಕ ಕೇಂದ್ರದಲ್ಲಿ ಮತ್ತೆ ವಿದೇಶಾಂಗ ಸಚಿವರಾದರು. ಆದರೆ ಮಂಡ್ಯದಿಂದ ಗೆದ್ದು ಮೊದಲ ಬಾರಿಗೆ ಕ್ಯಾಬಿನೆಟ್‌ ಸ್ಥಾನ ಅಲಂಕರಿಸಿರುವುದರಲ್ಲಿ ಎಚ್‌ಡಿಕುಮಾರಸ್ವಾಮಿ ಅವರೇ ಮೊದಲಿಗರು.

ಟ್ರೆಂಡಿಂಗ್​ ಸುದ್ದಿ

  • ದೇವೇಗೌಡರ ಕುಟುಂಬಕ್ಕೂ ಮಂಡ್ಯಕ್ಕೂ ಬಿಡಿಸಲಾರದ ನಂಟು. ಆದರೆ ರಾಮನಗರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರು ಜಿಲ್ಲೆಯಿಂದ ಅವರ ಕುಟುಂಬದವರು ರಾಜಕಾರಣ ಮಾಡಿದ್ದರೂ ಸ್ಪರ್ಧಿಸಿದ್ದು ಕಡಿಮೆ. ಅವರ ಬೀಗರಾದ ಡಿ.ಸಿ.ತಮ್ಮಣ್ಣ ಕಾಂಗ್ರೆಸ್‌ನಿಂದ ಬಿಜೆಪಿ ನಂತರ ಜೆಡಿಎಸ್‌ಗೆ ಬಂದರು. ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿ ಸೋತಿದ್ದರು. ಕುಮಾರಸ್ವಾಮಿ ಅವರು ಈ ಜಿಲ್ಲೆಯಲ್ಲಿ ಚುನಾವಣೆ ಕಣದಲ್ಲಿ ಇರಲಿಲ್ಲ. ಮೊದಲ ಬಾರಿಗೆ ಸ್ಪರ್ಧಿಸಿ ಭಾರೀ ಅಂತರದಿಂದ ಗೆದ್ದು ಬಂದರು. ಈಗ ಕೇಂದ್ರದಲ್ಲಿ ಕ್ಯಾಬಿನೆಟ್‌ ದರ್ಜೆ ಸಚಿವರೂ ಆಗಿದ್ದಾರೆ. ಇದು ಅವರ ವಿಶೇಷ.
  • ಎಸ್‌ಎಂ ಕೃಷ್ಣ ಅವರು ಮಂಡ್ಯ ಲೋಕಸಭೆ ಸದಸ್ಯರಾಗಿದ್ದವರು. ಅವರು ಲೋಕಸಭೆ ಸದಸ್ಯರಾದರೂ ರಾಜೀವ್‌ಗಾಂಧಿ ಅವರ ಸಂಪುಟದಲ್ಲಿ ರಾಜ್ಯ ಕೈಗಾರಿಕಾ ಸಚಿವರಾಗಿ ಕೆಲಸ ಮಾಡಿದರು. ಮರು ಚುನಾವಣೆಯಲ್ಲಿಯೇ ಗೆದ್ದರೆ ಕ್ಯಾಬಿನೆಟ್‌ ಸಚಿವರಾಗುತ್ತಾರೆ ಎನ್ನುವ ಚರ್ಚೆಗಳು ನಡೆದರೂ ಕೆ.ವಿ. ಶಂಕರಗೌಡರ ವಿರುದ್ದ ಸೋತರು. ಇದರಿಂದ ಕ್ಯಾಬಿನೆಟ್‌ ಮಂತ್ರಿಯಾಗುವ ಅವಕಾಶ ತಪ್ಪಿಸಿಕೊಂಡರು. ಮುಂದೆ 2009ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿಯೂ ಕೆಲಸ ಮಾಡಿದರು. ಆಗ ಅವರು ಲೋಕಸಭಾ ಸದಸ್ಯರಾಗಿರಲಿಲ್ಲ.
  • ನಟ ಅಂಬರೀಷ್‌ ಅವರು ಮಂಡ್ಯ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದರು.ಮನಮೋಹನಸಿಂಗ್‌ ಸಂಪುಟದಲ್ಲಿ ಮಂತ್ರಿಯಾದರು. ಅವರು ಪ್ರಮಾಣ ವಚನ ಸ್ವೀಕರಿಸಿದರೂ ರಾಜ್ಯ ಸಚಿವರ ಜತೆಗೆ ವಾರ್ತಾ ಖಾತೆಯನ್ನು ನೀಡಿದರು ಎಂದು ಕಚೇರಿಗೆ ಹೋಗಲೇ ಇಲ್ಲ. ರಾಜೀನಾಮೆಯನ್ನು ಸ್ಪೀಕರ್‌ ಹಾಗೂ ಸೋನಿಯಾಗಾಂಧಿ ಅವರಿಗೆ ಬರೆದು ಸುಮ್ಮನಾದರು. ಖುದ್ದು ಅವರೇ ಬಂದು ರಾಜೀನಾಮೆ ನೀಡಬೇಕು ಎಂದು ಸ್ಪೀಕರ್‌ ಕಚೇರಿಯಿಂದ ಪತ್ರ ಬಂದರೂ ಉತ್ತರಿಸಿರಲಿಲ್ಲ.
  • ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನವರಾದ ಎಂ.ವಿ.ಚಂದ್ರಶೇಖರ ಮೂರ್ತಿ ಅವರು ನರಸಿಂಹರಾವ್‌ ಸಂಪುಟದಲ್ಲಿ ಹಣಕಾಸು ರಾಜ್ಯ ಸಚಿವರಾಗಿದ್ದರು. ಅವರು ಕನಕಪುರ ಕ್ಷೇತ್ರದ ಸಂಸದರಾಗಿದ್ದರು.

* ಮಂಡ್ಯ ಜಿಲ್ಲೆ ಕೆಆರ್‌ಪೇಟೆ ಮೂಲದವರಾದ ಕೆ.ರೆಹಮಾನ್‌ ಖಾನ್‌ ಕೂಡ ಮನಮೋಹನ ಸಿಂಗ್‌ ಅವರ ಸಂಪುಟದಲ್ಲಿ ರಾಜ್ಯ ಸಚಿವರಾಗಿದ್ದರು. ಅಲ್ಲದೇ ರಾಜ್ಯ ಸಭೆ ಉಪಸಭಾಪತಿಯೂ ಆಗಿದ್ದರು.

ಟಿ20 ವರ್ಲ್ಡ್‌ಕಪ್ 2024