ಕನ್ನಡ ಸುದ್ದಿ  /  Karnataka  /  Mandya News Mandya Mp Sumalatha Ambareesh Decided To Support Jds Bjp Candidate Hdkumaraswamy Kub

Sumalatha Ambareesh: ಮಂಡ್ಯದಲ್ಲಿ ಕಳೆದ ಚುನಾವಣೆ ಎದುರಾಳಿಗಳು, ಈ ಬಾರಿ ಒಂದಾದರು, ಎಚ್‌ಡಿಕೆಗೆ ಬೆಂಬಲಿಸಿದ ಸುಮಲತಾ

Mandya Politics ಮಂಡ್ಯ ಲೋಕಸಭಾ ಸದಸ್ಯ ಸುಮಲತಾ ಅಂಬರೀಷ್‌ ಅವರು ಎಚ್‌ಡಿಕುಮಾರಸ್ವಾಮಿ ಅವರನ್ನು ಬೆಂಬಲಿಸಲು ತೀರ್ಮಾನಿಸಿದ್ಧಾರೆ.

ಮಂಡ್ಯ ಸಂಸದೆ ಸುಮಲತಾ ಅಂಬರೀಷ್
ಮಂಡ್ಯ ಸಂಸದೆ ಸುಮಲತಾ ಅಂಬರೀಷ್

ಮಂಡ್ಯ: ಐದು ವರ್ಷದ ಹಿಂದೆ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಎದುರಾಳಿಗಳು. ಪರಸ್ಪರ ರಾಜಕೀಯವಾಗಿ ಟೀಕೆ ಮಾಡಿಕೊಂಡಿದ್ದವರು ಈ ಚುನಾವಣೆಯಲ್ಲಿ ಒಂದಾಗಿದ್ಧಾರೆ. ನಾಲ್ಕೈದು ತಿಂಗಳಿನಿಂದ ನಡೆಯುತ್ತಿದ್ದ ಮಂಡ್ಯದ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್‌ ಅವರ ರಾಜಕೀಯ ತೀರ್ಮಾನ ಹೊರ ಬಿದ್ದಿದೆ. ಜೆಡಿಎಸ್‌ ಬಿಜೆಪಿ ಮೈತ್ರಿಯನ್ನೇ ಬೆಂಬಲಿಸುವುದಾಗಿ ಸುಮಲತಾ ಅಂಬರೀಷ್‌ ಘೋಷಣೆ ಮಾಡಿದ್ಧಾರೆ. ಸುಮಲತಾ ಅಂಬರೀಷ್‌ ಅವರು ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಇರುವುದಿಲ್ಲ ಎನ್ನುವುದು ಖಚಿತವಾಗಿದೆ. ಸುಮಲತಾ ಅವರು ತಾವೇ ಸ್ಪರ್ಧಿಸುತ್ತಾರೋ, ಜೆಡಿಎಸ್‌- ಬಿಜೆಪಿ ಮೈತ್ರಿಗೆ ಬೆಂಬಲಿಸುತ್ತಾರೋ ಅಥವಾ ಕಾಂಗ್ರೆಸ್‌ ಅನ್ನು ಬೆಂಬಲಿಸುತ್ತಾರೋ ಎನ್ನುವ ಕುರಿತು ಚರ್ಚೆಗಳಿದ್ದವು.

ಮಂಡ್ಯದಲ್ಲಿ ಬುಧವಾರ ನಡೆದ ಅಭಿಮಾನಿಗಳ ಸಭೆಯ ಬಳಿಕ ಸುಮಲತಾ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿಗೆ ಬೆಂಬಲ ಸೂಚಿಸಿ ಮತ ಯಾಚಿಸುತ್ತೇನೆ. ಮಂಡ್ಯದಲ್ಲಿಯೇ ಇದ್ದುಕೊಂಡು ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಘೋಷಿಸಿದರು.

ಮಂಡ್ಯ ಕ್ಷೇತ್ರವನ್ನು ಮೈತ್ರಿ ಸೂತ್ರದಂತೆ ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ. ಇಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪರ್ಧಿಸಲಿದ್ಧಾರೆ. ಅವರಿಗ ನನ್ನ ಸಂಪೂರ್ಣ ಬೆಂಬಲವಿದೆ. ನನ್ನ ಬೆಂಬಲಿಗರೂ ಕೂಡ ಅವರಿಗೆ ಬೆಂಬಲ ಸೂಚಿಸುವರು. ಮಂಡ್ಯ ಬಿಟ್ಟು ಎಲ್ಲಿಗೂ ಹೋಗುವ ಯೋಚನೆ ನನಗಿಲ್ಲ. ಕುಮಾರಸ್ವಾಮಿ ಅವರನ್ನು ಗೆಲ್ಲಿಸುತ್ತೇವೆ ಎಂದು ಸುಮಲತಾ ಹೇಳಿದರು.,

ಕಳೆದ ಬಾರಿ ಚುನಾವಣೆ ನಡಾಗ ಪರಿಸ್ಥಿತಿ ಬೇರೆ ರೀತಿಯಲ್ಲಿತ್ತು. ಆಗ ನಾನು ಪಕ್ಷೇತರಳಾಗಿ ಸ್ಪರ್ಧಿಸುವ ಸನ್ನಿವೇಶ ಎದುರಾಯಿತು. ಆನಂತರ ಗೆದ್ದು ಬಂದೆ. ಐದು ವರ್ಷ ಕೆಲಸ ಮಾಡಲು ಅವಕಾಶ ದೊರೆಯಿತು. ಈ ಬಾರಿಯ ವಾತಾವರಣವೇ ಬೇರೆ ರೀತಿಯದೆ. ದೊಡ್ಡ ಸವಾಲೇ ನಮ್ಮ ಮುಂದೆ ಇರುವುದರಿಂದ ಅದನ್ನು ಎದುರಿಸಲೇಬೇಕಾಗಿದೆ ಎನ್ನುವುದು ಅವರ ಅಭಿಪ್ರಾಯ.

ನಾನು ಬಯಸಿದ್ದರೆ ಮಂಡ್ಯದ ಜತೆಗೆ ಬೇರೆ ಕಡೆಯೂ ಸ್ಪರ್ಧಿಸಬಹುದಿತ್ತು. ಮೈಸೂರು, ಬೆಂಗಳೂರು ಸಹಿತ ಬೇರೆ ಕ್ಷೇತ್ರದಿಂದಲೂ ಸಾಕಷ್ಟು ಒತ್ತಡಗಳು ಬಂದವು. ಪರಿಸ್ಥಿತಿ ನೋಡಿಕೊಂಡು ನನ್ನ ತೀರ್ಮಾನವನ್ನು ಕೈಗೊಂಡಿದ್ದೇನೆ. ಅಧಿಕಾರಕ್ಕೆ ಅಂಟಿಕೊಂಡು ಕೂಡುವ ಜಾಯಮಾನ ನನ್ನದಲ್ಲ ಎಂದು ತಿಳಿಸಿದರು.

ಸುಮಲತಾ ಅವರೊಂದಿಗೆ ಬಿಜೆಪಿ ವರಿಷ್ಠರು ಮಾತುಕತೆ ನಡೆಸಿದ್ದರು. ಎಚ್‌ಡಿಕುಮಾರಸ್ವಾಮಿ ಅವರೇ ಖುದ್ದು ಭೇಟಿಯಾಗಿ ಮಾತನಾಡಿದ್ದರು. ಈ ಕುರಿತು ಮಂಡ್ಯದಲ್ಲಿ ಸಭೆ ನಡೆಸಿ ತೀರ್ಮಾನಿಸುವುದಾಗಿ ಸುಮಲತಾ ಹೇಳಿದ್ದರು. ಸುಮಲತಾ ಮೈತ್ರಿಗೆ ಬೆಂಬಲಿಸುತ್ತಾರೆ ಎನ್ನುವ ರೀತಿಯಲ್ಲಿಯೇ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ ನಾಯಕರು ಮಾತ್ರ ಸುಮಲತಾ ಕಳೆದ ಚುನಾವಣೆಯ ಸನ್ನಿವೇಶ ನೆನಪಿಟ್ಟುಕೊಂಡು ಕಾಂಗ್ರೆಸ್‌ ಬೆಂಬಲಿಸುವ ತೀರ್ಮಾನ ಮಾಡಲಿ ಎಂದು ಒತ್ತಾಯಿಸಿದರು.

ಸುಮಲತಾ ಹಿಂದೆ ಸರಿದಿದ್ದು ಏಕೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರನನ್ನು ಕಣಕ್ಕೆ ಇಳಿಬಹುದು ಇಲ್ಲವೇ ತಾವೇ ಸ್ಪರ್ಧಿಸಬಹುದು ಎನ್ನುವ ಚರ್ಚೆಗಳು ಇವೆ. ಇಲ್ಲದೇ ಇದ್ದರೆ ಮುಂದೆ ಅವಕಾಶ ಬಂದಾಗ ರಾಜ್ಯಸಭೆಗೆ ಅವಕಾಶ ಮಾಡಿಕೊಡುವ ಭರವಸೆಯೂ ವರಿಷ್ಠರಿಂದ ದೊರೆತಿರುವ ಕಾರಣಕ್ಕೆ ಸುಮಲತಾ ಹಿಂದೆ ಸರಿದಿದ್ಧಾರೆ ಎನ್ನಲಾಗುತ್ತಿದೆ

ಎಚ್‌ಡಿಕೆ ದೌಡು

ಸುಮಲತಾ ಅವರು ತಮಗೆ ಬೆಂಬಲ ನೀಡುವ ಘೋಷಣೆ ಮಾಡುತ್ತಿದ್ದಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲಿ ಎಂದು ಘೋಷಿಸುತ್ತಿದ್ದಂತೆ ತುಮಕೂರು ಪ್ರವಾಸದಲ್ಲಿದ್ದ ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ ಅವರು ಮಂಡ್ಯದತ್ತ ಬಂದರು. ನಾಮಪತ್ರ ಸಲ್ಲಿಸುವುದೂ ಸೇರಿದಂತೆ ಹಲವಾರು ವಿಷಯಗಳ ಕುರಿತು ಪ್ರಮುಖರೊಂದಿಗೆ ಚರ್ಚಿಸಿದರು. ಗುರುವಾರ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.

IPL_Entry_Point