Melkote News: ಮೇಲುಕೋಟೆಯಲ್ಲಿ ಒಂದೇ ರಾತ್ರಿ ವೈರಮುಡಿ, ರಾಜಮುಡಿ ಉತ್ಸವ, ನಾಳೆ ಕಿರೀಟ ಧಾರಣೆಗೆ ಸಿದ್ದತೆ ಹೇಗಿದೆ
ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಗುರುವಾರ ನಡೆಯಲಿದೆ. ಭಾರತದಲ್ಲಿ ಒಂದೇ ರಾತ್ರಿ ಎರಡು ವಜ್ರಖಚಿತ ಕಿರೀಟತೊಂಡಿಸುವ ಸಂಪ್ರದಾಯ ಮೇಲುಕೋಟೆಯಲ್ಲಿ ಮಾತ್ರ ಆಚರಣೆಯಲ್ಲಿದ್ದು ಇದನ್ನು ಕಣ್ತುಂಬಿಕೊಳ್ಳಲು ಭಕ್ತರು ಆಗಮಿಸಲಿದ್ದಾರೆ.
ಮೇಲುಕೋಟೆ: ಭಾರತದ ಐತಿಹಾಸಿಕ ಬಹ್ಮೋತ್ಸವಗಳಲ್ಲಿ ಪ್ರಮುಖವಾದ ಶ್ರೀಚೆಲುವನಾರಾಯಣಸ್ವಾಮಿಯವರ ವೈರಮುಡಿ ಕಿರೀಟ ಧಾರಣಮಹೋತ್ಸವ ಮಾರ್ಚ್21ರ ಗುರುವಾರ ರಾತ್ರಿ 8ಗಂಟೆಗೆ ಆರಂಭವಾಗಲಿದ್ದು ಬೆಳಗಿನ 3 ಗಂಟೆಯವರೆಗೆ ನಡೆಯಲಿದೆಹತ್ತು ದಿನಗಳ ಬ್ರಹ್ಮೋತ್ಸವದಲ್ಲಿ ನಾಲ್ಕನೆ ತಿರುನಾಳ್ ದಿನವಾದ ಮಾ.21 ರ ಗುರುವಾರ ರಾತ್ರಿ ಶ್ರೀದೇವಿ ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣನ ವೈರಮುಡಿ ಉತ್ಸವ ರಾತ್ರಿ 8ಗಂಟೆಗೆ ಮಹಾಮಂಗಳಾರತಿಯೊಂದಿಗೆ ಆರಂಭವಾಗಲಿದೆ. ತಡರಾತ್ರಿ ವೈರಮುಡಿ ಉತ್ಸವ ಮುಗಿದ ತಕ್ಷಣ ಸ್ವಾಮಿಗೆ ವಜ್ರಖಚಿತ ರಾಜಮುಡಿ ಉತ್ಸವ ನೆರವೇರಲಿದೆ. ಭಾರತದಲ್ಲಿ ಒಂದೇ ರಾತ್ರಿ ಎರಡು ವಜ್ರಖಚಿತ ಕಿರೀಟತೊಂಡಿಸುವ ಸಂಪ್ರದಾಯ ಮೇಲುಕೋಟೆಯಲ್ಲಿ ಮಾತ್ರ ಆಚರಣೆಯಲ್ಲಿದ್ದು ರಾಜ್ಯ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ.
ವೈರಮುಡಿ ಜಾತ್ರಾಮಹೋತ್ಸವ ಮಾ. 16 ರ ಅಂಕುರಾರ್ಪಣದೊಂದಿಗೆ ಆರಂಭವಾಗಿದ್ದು ಮಾ . 28 ರವರೆಗೆ ಸೇವೆಯವರೆಗೆ 13 ದಿನಗಳ ಕಾಲ ನಡೆಯಲಿದೆ. ಬ್ರಹ್ಮೋತ್ಸವದಲ್ಲಿ ಮಾ.24 ರ ಭಾನುವಾರ ನಡೆಯುವ ಮಹಾರಥೋತ್ಸವ 25 ರಂದು ರಾತ್ರಿ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ 26 ರಂದು ಬೆಳಿಗ್ಗೆ 11 ಗಂಟೆಗೆ ತೀರ್ಥಸ್ನಾನ ಸಂಜೆ 5ಗಂಟೆಗೆ ನಡೆಯುವ ಪಟ್ಟಾಭಿಷೇಕ ಮಹೋತ್ಸವಗಳು ಅತ್ಯಂತ ಪ್ರಮುಖ ಉತ್ಸವಗಳಾಗಿವೆ.
ವೈರಮುಡಿಯಂದು ಕಾರ್ಯಕ್ರಮವೇನು
ಮಾರ್ಚ 21 ಬೆಳಿಗ್ಗೆ 7.30 ಮಂಡ್ಯ ಲಕ್ಷ್ಮೀಜನಾರ್ಧನ ದೇವಸ್ಥಾನದಲ್ಲಿ ವೈರಮುಡಿ ರಾಜಮುಡಿ ಕಿರೀಟಗಳಿಗೆ ಪ್ರಥಮಪೂಜೆ ದಾರಿಯುದ್ದಕ್ಕೂ ವಿವಿಧ ಹಳ್ಳಿಗಳಲ್ಲಿ ಪೂಜೆ ನಡೆದ ನಂತರ 5-30ಕ್ಕೆ ಕಿರೀಟಗಳು ಮೇಲುಕೋಟೆ ತಲುಪಲಿದೆ. ಅಲ್ಲಿಂದ ಚಿನ್ನದಪಲ್ಲಕ್ಕಿಯಲ್ಲಿ ತಿರುವಾಭರಣಪೆಟ್ಟಿಗೆಗಳ ಮೆರವಣಿಗೆ ಆದಿಚುಂಚನಗಿರಿ ನಿರ್ಮಲಾನಂದ ಕಿರೀಟಗಳಿಗೆ ಶ್ರೀಗಳಿಂದ ಪೂಜೆ ಪೇಟೆ ಆಂಜನೇಯ ಸನ್ನಿಧಿಬಳಿ ಒಕ್ಕಲಿಗ ಜನಾಂಗದವರ ಪೂಜೆ ಮೇಲುಕೋಟೆ ಉತ್ಸವ ಬೀದಿ ಪ್ರದಕ್ಷಿಣೆಯ ನಂತರ ಯತಿರಾಜದಾಸರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಗುರುಪೀಠದ ಕೊನೆಯ ಪೀಠದ ಪೂಜೆ ನಂತರ ದೇಗುಲಪ್ರವೇಶಿಸುವ ಕಿರೀಟಗಳ ಪೈಕಿ ರಾಜಮುಡಿ ಕಿರೀಟ ಮತ್ತು ಆಭರಣಗಳ ಪರಿಶೀಲನೆ ನಂತರ ಗರುಡದೇವನ ಉತ್ಸವ ರಾತ್ರಿ 8ಕ್ಕೆ ಮಹಾಮಂಗಳಾರತಿ ವೈರಮುಡಿ ಉತ್ಸವಕ್ಕೆ ಚಾಲನೆ ದೊರೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ನಾನಾ ಚಟುವಟಿಕೆ ಪೂರ್ಣ
ಇದನ್ನು ಹೊರತುಪಡಿಸಿದರೆ ಮಾರ್ಚ 17 ರಂದು ಸಂಜೆ 5 ಗಂಟೆಗೆ ಕಲ್ಯಾಣಿಯಧಾರಾಮಂಟಪದಲ್ಲಿ ಕಲ್ಯಾಣೋತ್ಸವ ಮಾ.18 ರಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನಡೆದಿವೆ. 19 ರಂದು ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆಸಲಾಗಿದ್ದು, 20 ರಂದು ಸಂಜೆ ಕಲ್ಯಾಣಿಯಲ್ಲಿ ನಾಗವಲ್ಲೀ ಮಹೋತ್ಸವ 22 ರ ಪ್ರಹ್ಮಾದ ಪರಿಪಾಲನೋತ್ಸವ 23 ರಂದು ರಾತ್ರಿ ಗಜೇಂದ್ರಮೋಕ್ಷ ಉತ್ಸವ 27 ರಂದು ನಡೆಯುವ ಮಹಾಭಿಷೇಕ ಮಹೋತ್ಸವಗಳು ವಿಶೇಷ ಉತ್ಸವಗಳಿಗೆ ಸಿದ್ದತೆಗಳಾಗಿವೆ.
ವಿಶೇಷ ಉತ್ಸವಗಳ ಜೊತೆಗೆ ವಾಹನೋತ್ಸವಗಳು ಸಹ ಚೆಲುವನಾರಾಯಣನಿಗೆ ನೆರವೇರುತ್ತದೆ ವಾಹನೋತ್ಸವಗಳು ಪ್ರತಿದಿನ ರಾತ್ರಿ ನಡೆಯಲಿದ್ದು 20ರಂದು ಚಂದ್ರಮಂಡಲವಾಹನ, 22ರಂದು ಗರುಡವಾಹನ, 23ರಂದು ಗಜ ಮತ್ತು ಅಶ್ವವಾಹನ, 24ರಂದು ರಾತ್ರಿ ಬಂಗಾರದಪಲ್ಲಕ್ಕಿ, 25ರಂದು ಅಶ್ವವಾಹನೋತ್ಸವ, 26 ಪುಷ್ಪಮಂಟಪವಾಹನ,27 ಹಮುಮಂತವಾಹನೋತ್ಸವಗಳು ನಡೆಯಲಿದೆ.
ದೀಪಾಲಂಕಾರದ ಸೊಬಗು
ಇಡೀ ಮೇಲುಕೋಟೆಗೆ ಆಕರ್ಷಕ ದೀಪಾಲಂಕಾರ, ಸ್ವಾಮಿಯ ಉತ್ಸವಕ್ಕೆ ವಿಶೇಷ ತೋಮಾಲೆಗಳ ಅಲಂಕಾರ, ಮೈಸೂರು, ಬೆಂಗಳೂರು, ಮಂಡ್ಯ ಹಾಸನ ಚನ್ನರಾಯಪಟ್ಟಣ ನಾಗಮಂಗಲ ಮುಂತಾದ ಸ್ಥಳಗಳಿಂದ ವಿಶೇಷಬಸ್ ಸೌಕರ್ಯ, ಸುಜ್ಜಿತ ವೈಧ್ಯಕೀಯ ಸೇವೆ, ನಿರಂತರ ಸ್ವಚ್ಚತೆ ಶುದ್ಧಕುಡಿಯುವ ನೀರಿನ ಪೂರೈಕೆ, ವೈರಮುಡಿ, ರಥೋತ್ಸವ ನಾಗವಲ್ಲೀ ಉತ್ಸವಗಳಂದು ದೇವಾಲಯದ ಆವರಣಗಳಿಗೆ ಪುಷ್ಪಾಲಂಕಾರ, ಪ್ರತಿ ಉತ್ಸವ ಹಾಗೂ ವಾಹನೋತ್ಸವಗಳಿಗೆ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜನೆ ಹಾಗೂ ಎಸ್.ಎಸ್ ಐ.ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಾದೋಪಾಸನ ಸೇವೆ ಮಂಗಳವಾದ್ಯ ನಿಯೋಜನೆ ಇರಲಿದೆ.