ಕನ್ನಡ ಸುದ್ದಿ  /  ಕರ್ನಾಟಕ  /  Mandya News: ಐಸ್‌ಕ್ರಿಂನಲ್ಲಿ ವಿಷ ಹಾಕಿ ಅವಳಿ ಹೆಣ್ಣು ಮಕ್ಕಳನ್ನು ಕೊಂದ ಹೆತ್ತ ತಾಯಿ

Mandya News: ಐಸ್‌ಕ್ರಿಂನಲ್ಲಿ ವಿಷ ಹಾಕಿ ಅವಳಿ ಹೆಣ್ಣು ಮಕ್ಕಳನ್ನು ಕೊಂದ ಹೆತ್ತ ತಾಯಿ

ಹೆತ್ತ ತಾಯಿಯೇ ಅವಳಿ ಹೆಣ್ಣು ಮಕ್ಕಳಿಗೆ ವಿಷ ಹಾಕಿ ಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಅವಳಿ ಮಕ್ಕಳನ್ನೇ ಕೊಂದ ತಾಯಿ
ಅವಳಿ ಮಕ್ಕಳನ್ನೇ ಕೊಂದ ತಾಯಿ

ಮಂಡ್ಯ: ಐಸ್‌ಕ್ರೀಂ ತಿಂದು ಅವಳಿ ಹೆಣ್ಣು ಮಕ್ಕಳು ಮೃತಪಟ್ಟಿವೆ ಎಂದು ಬಿಂಬಿಸಿದ್ದ ಹೆತ್ತ ತಾಯಿಯೇ ಮಕ್ಕಳನ್ನು ವಿಷ ಹಾಕಿ ಕೊಂದಿರುವ ಪ್ರಕರಣ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ. ಬುಧವಾರ ಅವಳಿ ಮಕ್ಕಳು ಐಸ್‌ಕ್ರೀಂ ತಿಂದು ಮೃತಪಟ್ಟಿರುವ ಕುರಿತು ವರದಿಯಾಗಿತ್ತು. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆಕೆಯೇ ಮಕ್ಕಳನ್ನು ಕೊಂದಿರುವುದು ಬಯಲಾಗಿದೆ. ಅಲ್ಲದೇ ತಾನು ಕಟ್ಟು ಕಥೆ ಕಟ್ಟಿದ್ದಾಗಿ ತಾಯಿಯೇ ಒಪ್ಪಿಕೊಂಡಿದ್ದಾಳೆ. ಹೆತ್ತ ಮಕ್ಕಳನ್ನು ಕೊಂದ ತಾಯಿ ಪೂಜಾ ಎಂಬಾಕೆಯನ್ನು ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿನ್ನಲೆಯಲ್ಲಿ ತನಿಖೆ ನಡೆದಿದೆ. ಇಂತಹ ಘಟನೆ ನಡೆದಿರುವುದು ಬೆಟ್ಟಹಳ್ಳಿ ಗ್ರಾಮದಲ್ಲಿ.

ಟ್ರೆಂಡಿಂಗ್​ ಸುದ್ದಿ

ಬೆಟ್ಟಹಳ್ಳಿ ಗ್ರಾಮದ ಪೂಜಾ ಹಾಗೂ ಪ್ರಸನ್ನ ಐದು ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ಒಂದೂವರೆ ವರ್ಷದ ಹಿಂದೆ ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು. ತ್ರಿಶಾ ಹಾಗೂ ತ್ರಿಶೂಲ್‌ ಎಂಬ ಹೆಸರಿನ ಈ ಮಕ್ಕಳು ಸೇರಿ ಮೂರು ಮಕ್ಕಳಿದ್ದವು. ಆದರೆ ಪತಿ ಹಾಗೂ ಪತ್ನಿ ನಡುವೆ ಇತ್ತೀಚಿನ ದಿನಗಳಲ್ಲಿ ಜಗಳ ನಡೆಯುತ್ತಿದ್ದವು. ರಾಜೀ ಪಂಚಾಯಿತಿ ನಡೆದರೂ ಬಗೆಹರಿದಿರಲಿಲ್ಲ. ಎರಡು ದಿನದ ಹುಇಂದೆ ಮತ್ತೆ ಜಗಳವಾಗಿತ್ತು. ಬುಧವಾರ ಮನೆ ಬಳಿ ವ್ಯಕ್ತಿಯೊಬ್ಬ ಐಸ್‌ಕ್ರೀಂ ತಂದಾಗ ಅದನ್ನು ಖರೀದಿಸಿದ ಪೂಜಾ ತಾನೂ ಸೇವಿಸಿ ಇಬ್ಬರು ಮಕ್ಕಳಿಗೆ ನೀಡಿದ್ದಳು. ಸಂಜೆ ಹೊತ್ತಿಗೆ ಅಸ್ವಸ್ಥರಾದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯುವುದಾಗಿ ಹೇಳಿ ತಾನೂ ಹೋಗಿದ್ದಳು. ಐಸ್‌ಕ್ರೀಂನಲ್ಲಿ ವಿಷ ಬೆರೆಸಿರಬೇಕು ಎನ್ನುವ ಅನುಮಾನ ವ್ಯಕ್ತವಾಗಿತ್ತು.ಕೊನೆಗೆ ಮಕ್ಕಳು ಮೃತಪಟ್ಟಿರುವುದಾಗಿ ಹೇಳಿಕೊಂಡಿದ್ದಳು.

ಇದೇ ಐಸ್‌ ಕ್ರೀಂ ಅನ್ನು ಹಲವರು ತಿಂದರೂ ಏನು ಆಗಿರಲಿಲ್ಲ. ವ್ಯಾಪಾರಿಯನ್ನು ಹಿಡಿದು ಪ್ರಶ್ನಿಸಿದ್ದರು. ಆತನೂ ಇಂತ ಕೆಲಸ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದ. ರಾತ್ರಿಯೇ ಅರಕೆರೆ ಪೊಲೀಸರು ಮಕ್ಕಳ ಶವವನ್ನು ಮಂಡ್ಯ ಆಸ್ಪತ್ರೆಗೆ ರವಾನಿಸಿದ್ದರು. ಕೊನೆಗೆ ಪೊಲೀಸರು ಗುರುವಾರ ವಿಚಾರಣೆ ನಡೆಸಿದಾಗ ಆಕೆಯ ಐಸ್‌ ಕ್ರೀಂಗೆ ಜಿರಲೆಗೆ ನೀಡುವ ಔಷಧ ವನ್ನು ಐಸ್‌ಕ್ರೀಂ ಜತೆ ಬೆರೆಸಿ ಸಾಯಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪತಿಯ ಮೇಲಿನ ಸಿಟ್ಟಿಗೆ ಹೀಗೆ ಮಾಡಿದ್ದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನೊಂದು ಹೆಣ್ಣು ಅಜ್ಜಿ ಮನೆಗೆ ಹೋಗಿದ್ದರಿಂದ ಬದುಕುಳಿದಿದೆ ಎಂದು ಕುಟುಂಬಸ್ಥರು ಕಣ್ಣೀರಾದರು.

IPL_Entry_Point