Mangalore Bank Robbery: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ, ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟ: ಪೊಲೀಸ್ ಆಯುಕ್ತ
ಕನ್ನಡ ಸುದ್ದಿ  /  ಕರ್ನಾಟಕ  /  Mangalore Bank Robbery: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ, ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟ: ಪೊಲೀಸ್ ಆಯುಕ್ತ

Mangalore Bank Robbery: ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ, ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟ: ಪೊಲೀಸ್ ಆಯುಕ್ತ

Mangalore Bank Robbery: ಮಂಗಳೂರು ಹೊರವಲಯದ ಬ್ಯಾಂಕ್ ದರೋಡೆ: ಆರಂಭಿಕ ಅಂದಾಜಿನ ಪ್ರಕಾರ ಹೊತ್ತೊಯ್ದದ್ದು 4 ಕೋಟಿ ರೂ ಮೊತ್ತದ ಹಣ, ಆಭರಣ ಎಂದು ಮಂಗಳೂರು ಪೊಲೀಸ್‌ ಕಮೀಷನರ್ ಅನುಪಮ್ ಅಗರವಾಲ್‌ ತಿಳಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟವಾಗಿಬಹುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ: ಆರಂಭಿಕ ಅಂದಾಜು ಪ್ರಕಾರ 4 ಕೋಟಿ ರೂ ಮೊತ್ತ ಹಣ, ಆಭರಣ ನಷ್ಟವಾಗಿಬಹುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Mangalore Bank Robbery: ಮಂಗಳೂರು ಹೊರವಲಯದ ತಲಪಾಡಿಯ ಕೆ.ಸಿ.ರೋಡ್‌ನಲ್ಲಿ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಘಟನೆಯ ಸಂಬಂಧ ಮಂಗಳೂರು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆರಂಭಿಕ ಅಂದಾಜಿನ ಪ್ರಕಾರ, ಕದ್ದೊಯ್ದ ಒಟ್ಟು ಮೊತ್ತ 4 ಕೋಟಿ ಆಗಿರಬಹುದು ಎಂದು ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸೂಚನೆ ಬಳಿಕ ಚುರುಕುಗೊಂಡ ಕಾರ್ಯಾಚರಣೆ

ಪಶ್ಚಿಮ ರೇಂಜ್ ನ ಐಜಿ ಅಮಿತ್, ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್, ಎಸ್.ಪಿ ಯತೀಶ್ , ಡಿವೈಎಸ್ ಪಿ ಸೇರಿ ಹಿರಿಯ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರು ನೀಡಿದ ಸೂಚನೆಗಳ ಬಳಿಕ ಮತ್ತಷ್ಟು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈಗಾಗಲೇ ಎಲ್ಲಾ ಟೋಲ್ ಗಳಲ್ಲೂ ಬಿಗು ತಪಾಸಣೆ ಮಾಡಲಾಗುತ್ತಿದೆ. ಸಣ್ಣ ರಸ್ತೆಗಳನ್ನೂ ಬಿಡದೆ ನಾಕಾಬಂದಿ ಹಾಕಲಾಗಿದೆ. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಲಾಗಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಮಂಗಳೂರು ಕಮೀಷನರ್ ಅನುಪಮ್ ಅಗರವಾಲ್ ನೀಡಿದ ಹೇಳಿಕೆ ಹೀಗಿದೆ

ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ತಲಪಾಡಿಯ ಕೆ.ಸಿ.ರೋಡ್ ನಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆ ಇದ್ದು ಇಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 1ರಿಂದ 1.20ರ ವೇಳೆ ಅಪರಿಚಿತರ ನಾಲ್ವರ ಗುಂಪು ಆಗಮಿಸಿದೆ. ಸುಮಾರು 35ರಿಂದ 40 ವರ್ಷದೊಳಗಿನವರು ಎಂದು ಅಂದಾಜಿಸಲಾಗಿದ್ದು, ಅವರ ಕೈಯಲ್ಲಿ ಆಯುಧಗಳು ಹಾಗೂ ಪಿಸ್ತೂಲ್ ಇತ್ತು.

ಆರೋಪಿಗಳು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದು, ಅವರು ಬ್ಯಾಂಕಿನ ಸಿಬ್ಬಂದಿಯನ್ನು ಹೆದರಿಸಿ, ಮ್ಯಾನೇಜರ್ ಗೆ ಸ್ಟ್ರಾಂಗ್ ರೂಮ್ ತೆರೆಯಲು ಸೂಚಿಸಿದ್ದಾರೆ. ಅಲ್ಲಿದ್ದ ಲಾಕರ್ ನೊಳಗಿದ್ದ ನಗದು ಹಣ ಹಾಗೂ ಆಭರಣಗಳನ್ನು ದೋಚಿದ್ದಾರೆ. ಆರಂಭಿಕ ಲೆಕ್ಕಾಚಾರದ ಪ್ರಕಾರ ಲೂಟಿಕೋರರು ಒಟ್ಟು ಅಂದಾಜು 4 ಕೋಟಿ ರೂ ಮೊತ್ತದ ನಗ, ನಗದನ್ನು ಹೊತ್ತೊಯ್ದಿದ್ದಾರೆ.

ಇಷ್ಟು ಮಾತ್ರವಲ್ಲದೆ, ಆರೋಪಿಗಳು ಬ್ಯಾಂಕಿನಲ್ಲಿದ್ದ ಪ್ರಿಂಟರ್ ಗಳನ್ನು ಹಾಳುಗೆಡವಿದ್ದಲ್ಲದೆ, ಅಲ್ಲಿದ್ದ ಸಿಬ್ಬಂದಿಯಿಂದ ಮೊಬೈಲ್ ಗಳನ್ನು ಬಲವಂತವಾಗಿ ತೆಗೆದುಕೊಂಡಿದ್ದಾರೆ. ಅಲ್ಲದೆ, ಸಿಸಿಟಿವಿ ಟೆಕ್ನೀಶಿಯನ್ ಬಳಿಯಿಂದ ರಿಂಗ್ ಒಂದನ್ನು ಸೆಳೆದುಕೊಂಡಿದ್ದಾರೆ.

ಇಷ್ಟೆಲ್ಲಾ ಕೃತ್ಯ ನಡೆಸಿದ ಬಳಿಕ ದರೋಡೆಕೋರರ ಗುಂಪು, ಕಪ್ಪು ಬಣ್ಣದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕೆ.ಸಿ.ರೋಡ್ ಜಂಕ್ಷನ್ ಕಡೆಯಲ್ಲಿ ಕಾರು ಸಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಮಂಗಳೂರು ಸಿಟಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಹಲವು ತಂಡಗಳನ್ನು ಮಾಡಿ ಘಟನೆಯ ತನಿಖೆ ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಇದ್ದಾಗಲೇ ದರೋಡೆ (Mangalore Bank Robbery) ನಡೆದ ಕಾರಣ, ಕೂಡಲೇ ಸಭೆ ನಡೆಸಿದ ಅವರು ಪೊಲೀಸರಿಗೆ ಕಡಕ್ ಸೂಚನೆ ನೀಡಿದರು. ಹೀಗಾಗಿ, ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner