ಕರ್ನಾಟಕದಲ್ಲಿ ಮತ್ತೊಂದು ದರೋಡೆ ಪ್ರಕರಣ; ಮಂಗಳೂರಿನ ಉಳ್ಳಾಲದಲ್ಲಿ ಬಂದೂಕು ತೋರಿಸಿ ಹಾಡುಹಗಲೇ ಬ್ಯಾಂಕ್‌ ಲೂಟಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಮತ್ತೊಂದು ದರೋಡೆ ಪ್ರಕರಣ; ಮಂಗಳೂರಿನ ಉಳ್ಳಾಲದಲ್ಲಿ ಬಂದೂಕು ತೋರಿಸಿ ಹಾಡುಹಗಲೇ ಬ್ಯಾಂಕ್‌ ಲೂಟಿ

ಕರ್ನಾಟಕದಲ್ಲಿ ಮತ್ತೊಂದು ದರೋಡೆ ಪ್ರಕರಣ; ಮಂಗಳೂರಿನ ಉಳ್ಳಾಲದಲ್ಲಿ ಬಂದೂಕು ತೋರಿಸಿ ಹಾಡುಹಗಲೇ ಬ್ಯಾಂಕ್‌ ಲೂಟಿ

ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಗೆ ಗುಂಡು ಹಾರಿಸಿ ಹಣ ದೋಚಿರುವ ಪ್ರಕರಣದ ಬೆನ್ನಲ್ಲೇ ಇದೀಗ ಮಂಗಳೂರಿನ ಉಳ್ಳಾಲದಲ್ಲೂ ಬ್ಯಾಂಕ್ ದರೋಡೆ ನಡೆದಿದೆ. ಉಳ್ಳಾಲದ ಕೋಟೆಕಾರು ಬ್ಯಾಂಕ್‌ನಲ್ಲಿ ದರೋಡೆಕೋರರು ಬಂದೂಕು ತೋರಿಸಿ ಸುಮಾರು 10 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಲೂಟಿ ಮಾಡಿದ್ದಾರೆ.

ಉಳ್ಳಾಲದ ಕೋಟೆಕಾರ್‌ ಬ್ಯಾಂಕ್‌ನಲ್ಲಿ ದರೋಡೆ ನಡೆದಿದ್ದು, ವಿಧಾನಸಭೆ ಸ್ಪೀಕರ್‌ ಯು ಟಿ ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಉಳ್ಳಾಲದ ಕೋಟೆಕಾರ್‌ ಬ್ಯಾಂಕ್‌ನಲ್ಲಿ ದರೋಡೆ ನಡೆದಿದ್ದು, ವಿಧಾನಸಭೆ ಸ್ಪೀಕರ್‌ ಯು ಟಿ ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಂಗಳೂರು: ರಾಜ್ಯದಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಿವೆ. ನಿನ್ನೆಯಷ್ಟೇ (ಜನವರಿ 16) ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುವಾಗ ಸಿಬ್ಬಂದಿಗೆ ಗುಂಡು ಹಾರಿಸಿ ದರೋಡೆ ಮಾಡಿದ್ದ ಪ್ರಕರಣ ನಡೆದಿದ್ದು, ಇದೀಗ ಮಂಗಳೂರಿನಲ್ಲೂ ಬ್ಯಾಂಕ್ ದರೋಡೆ ಪ್ರಕರಣ ನಡೆದಿದೆ.

ಮಂಗಳೂರಿನ ಉಳ್ಳಾಲದ ಕೆಸಿ ರಸ್ತೆಯಲ್ಲಿರುವ ಕೋಟೆಕಾರು ಬ್ಯಾಂಕ್‌ಗೆ ನುಗ್ಗಿದ ದರೋಡೆಕೋರರು ಹಾಡುಹಗಲೇ ಲೂಟಿ ಮಾಡಿದ್ದಾರೆ. ಬ್ಯಾಂಕ್‌ಗೆ ನುಗ್ಗಿದ ಐವರು ಮುಸುಕುದಾರಿಗಳು ಬ್ಯಾಂಕ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಬೆದರಿಸಿ ಹಣ ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಸುಮಾರು 10 ರಿಂದ 12 ಕೋಟಿ ಮೊತ್ತದ ಹಣ ಹಾಗೂ ಚಿನ್ನಾಭರಣಗಳನ್ನು ದರೋಡೆಕೋರು ಹೊತ್ತೊಯ್ಯಿದ್ದಾರೆ. ದರೋಡೆಗೆ ಬಂದವರು ಕನ್ನಡ ಮಾತನಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಫಿಯೆಟ್ ಕಾರಿನಲ್ಲಿ ಬಂದ 5 ಮಂದಿ ಆಗಂತುಕರ ತಂಡ, ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಿದೆ. 

ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ: ಖಾದರ್

ಮಂಗಳೂರಿನ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸುವುದಾಗಿ ವಿಧಾನಸಭಾಸ್ಪೀಕರ್‌ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಅಂದ್ರೆ, ಬ್ಯಾಂಕ್ ಒಳಗಿನ ಸಿಸಿಟಿವಿ ಕ್ಯಾಮೆರಾವನ್ನು ಸರ್ವಿಸ್ ಮಾಡುತ್ತಿದ್ದ ವೇಳೆಯೇ ಘಟನೆ ನಡೆದಿದೆ. ಹೊರಗಿನ ಕ್ಯಾಮೆರಾದಲ್ಲಿ ಆರೋಪಿಗಳು ಪಲಾಯನಗೈಯುತ್ತಿರುವ ದೃಶ್ಯ ಸೆರೆಯಾಗಿದೆ. ಹೀಗಾಗಿ ಬ್ಯಾಂಕ್ ಬಗ್ಗೆ ತಿಳಿದಿರುವ ಮಂದಿಯೇ ದರೋಡೆ ನಡೆಸಿರುವಂತೆ ಕಂಡುಬಂದಿದೆ.

ಎಸಿಪಿ ಧನ್ಯ ನಾಯಕ್ ನೇತೃತ್ವದ ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಥಳಕ್ಕೆ ಸ್ಪೀಕ‌ರ್ ಖಾದರ್ ಭೇಟಿ ನೀಡಿ ಆರೋಪಿಗಳನ್ನ ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Whats_app_banner