ಹೆದ್ದಾರಿಯಲ್ಲಿ ಕಾರು ಧಗಧಗ: ಸುಮಾರು 50 ಲಕ್ಷದ ಬಿಎಂಡಬ್ಲ್ಯೂ ಕಾರು ನಡುರಸ್ತೆಯಲ್ಲೇ ಭಸ್ಮ, ರಸ್ತೆ ಬ್ಲಾಕ್-mangalore news bmw car burnt in accidental fire in mangaluru car catches fire on nh at adyar hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಹೆದ್ದಾರಿಯಲ್ಲಿ ಕಾರು ಧಗಧಗ: ಸುಮಾರು 50 ಲಕ್ಷದ ಬಿಎಂಡಬ್ಲ್ಯೂ ಕಾರು ನಡುರಸ್ತೆಯಲ್ಲೇ ಭಸ್ಮ, ರಸ್ತೆ ಬ್ಲಾಕ್

ಹೆದ್ದಾರಿಯಲ್ಲಿ ಕಾರು ಧಗಧಗ: ಸುಮಾರು 50 ಲಕ್ಷದ ಬಿಎಂಡಬ್ಲ್ಯೂ ಕಾರು ನಡುರಸ್ತೆಯಲ್ಲೇ ಭಸ್ಮ, ರಸ್ತೆ ಬ್ಲಾಕ್

BMW Car Burnt: ಮಂಗಳೂರು ಹೊರವಲಯದಲ್ಲಿ ಸಹ್ಯಾದ್ರಿ ಕಾಲೇಜು ಬಳಿಯ ಅಡ್ಯಾರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬಿಎಂಡಬ್ಲ್ಯು ಕಾರು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಹೆದ್ದಾರಿಯಲ್ಲೇ ಹೊತ್ತಿ ಉರಿದ ಬಿಎಂಡಬ್ಲ್ಯೂ ಕಾರು
ಹೆದ್ದಾರಿಯಲ್ಲೇ ಹೊತ್ತಿ ಉರಿದ ಬಿಎಂಡಬ್ಲ್ಯೂ ಕಾರು

ಮಂಗಳೂರು: ದೆಹಲಿ ನೋಂದಣಿಯ ಹಳೆಯ ಬಿಎಂಡಬ್ಲ್ಯು ಕಾರನ್ನು ಸರ್ವಿಸ್​ಗೆ ಒಯ್ಯುತ್ತಿದ್ದಾಗ ಬೆಂಗಳೂರು ಮಂಗಳೂರು ಹೆದ್ದಾರಿ ಮಧ್ಯದಲ್ಲಿ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದು ಸುಟ್ಟು ಬೂದಿಯಾದ ಘಟನೆ ಮಂಗಳೂರು ನಗರದ ಹೊರವಲಯದ ಅಡ್ಯಾರ್​​ನಲ್ಲಿ ನಡೆದಿದೆ. ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಮುಂಭಾಗದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ಜರುಗಿದೆ.

ಬಿಸಿ ರೋಡ್ ಕಡೆಯಿಂದ ಚಾಲಕ ಗುರುದೀಪ್ ಎಂಬವರು ಕಾರನ್ನು ಚಲಾಯಿಸಿಕೊಂಡು ಬಂದಿದ್ದು ಸಹ್ಯಾದ್ರಿ ಕಾಲೇಜು ಮುಂಭಾಗಕ್ಕೆ ತಲುಪುತ್ತಿದ್ದಂತೆ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು ಕೂಡಲೇ ಕಾರಿನಿಂದ ಹೊರಕ್ಕೆ ಇಳಿದಿದ್ದಾನೆ. ಅನಂತರ, ಎಲ್ಲರೂ ನೋಡುತ್ತಿರುವಾಗಲೇ ನಡುರಸ್ತೆಯಲ್ಲೇ ಧಗ ಧಗನೆ ಕಾರು ಹೊತ್ತಿ ಉರಿದಿದೆ.

ಶಾರ್ಟ್ ಸರ್ಕ್ಯೂಟ್​ನಿಂದಾಗಿ ಕಾರಿಗೆ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಕಾರಿನಲ್ಲಿ ಏನೋ ಸಮಸ್ಯೆ ಇದೆಯೆಂದು ಅಡ್ಯಾರಿನ ಬಿಎಂಡಬ್ಲ್ಯುಗ್ಯಾರೇಜ್​ಗೆ ತರುತ್ತಿದ್ದರು. ಅಷ್ಟರಲ್ಲೇ ಬೆಂಕಿ ಹತ್ತಿಕೊಂಡಿದ್ದು ಸುಟ್ಟು ಭಸ್ಮವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿತ್ತು. ದೆಹಲಿ ನೋಂದಣಿ ಬಿಎಂಡಬ್ಲ್ಯು ಕಾರು ಇದಾಗಿದ್ದು, 2011ರ ಮಾಡೆಲ್ ಆಗಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಸುರತ್ಕಲ್ ಇಂಜಿನಿಯರಿಂಗ್ ಕಾಲೇಜು ಸಮೀಪದಲ್ಲಿ ಉಡುಪಿ ಕಡೆಯಿಂದ ಬರುತ್ತಿದ್ದ ಬಿಎಂಡಬ್ಲ್ಯು ಕಾರು ಇದೇ ರೀತಿ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು.

mysore-dasara_Entry_Point