ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ; ಮಕ್ಕಳು, ತಾಯಿ ಸುನಂದಾ ಶೆಟ್ಟಿ ಸಾಥ್

Mangalore News: ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ; ಮಕ್ಕಳು, ತಾಯಿ ಸುನಂದಾ ಶೆಟ್ಟಿ ಸಾಥ್

ಹುಟ್ಟೂರಿಗೆ ಆಗಮಿಸಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ್ದಾರೆ. ಮಕ್ಕಳಾದ ವಿಯಾನ್ ಕುಂದ್ರಾ, ಸಮಿಷಾ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬದವರು ಸಾಥ್ ನೀಡಿದ್ದಾರೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ್ದಾರೆ. ಈ ವೇಳೆ ಮಕ್ಕಳಾದ ವಿಯಾನ್ ಕುಂದ್ರಾ, ಸಮಿಷಾ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಜೊತೆಯಲ್ಲಿದ್ದರು.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ್ದಾರೆ. ಈ ವೇಳೆ ಮಕ್ಕಳಾದ ವಿಯಾನ್ ಕುಂದ್ರಾ, ಸಮಿಷಾ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಜೊತೆಯಲ್ಲಿದ್ದರು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರಕ್ಕೆ (Shibaroor Kodamanithaya Temple) ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ (Bollywood Actress Shilpa Shetty) ಭೇಟಿ ನೀಡಿ ಹರಕೆಯನ್ನು ತೀರಿಸಿದ್ದಾರೆ. ಶಿಬರೂರಿನ ಕೊಡಮಣಿತ್ತಾಯದಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಸೇವೆ ನಡೆಯುತ್ತಿದ್ದು, ದೂರದ ಊರುಗಳಲ್ಲಿ ನೆಲೆಸಿದವರು ಇಲ್ಲಿಗೆ ಆಗಮಿಸಿ, ದೇವರ ಸೇವೆ, ಹರಕೆ ಅರ್ಪಿಸುವ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಆಗಮಿಸಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಾಗಮಂಡಲಕ್ಕೆ ಪಿಂಗಾರ ಪರಕೆ (ಹಿಂಗಾರದ ಹರಕೆ) ಅರ್ಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರವಾದ ಶಿಬರೂರಿನಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕವನ್ನು ಕಣ್ತುಂಬಿಕೊಂಡಿದ್ದಾರೆ. ಈ ಸಂದರ್ಭ ಅವರು ಹಿಂಗಾರ ಹರಕೆಯನ್ನು ಅರ್ಪಿಸಿದರು. ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸುವುದು ಅಥವಾ ಹಿಂಗಾರ ಕಟ್ಟುವ ಕಾರ್ಯಕ್ಕೆ ತುಂಬಾ ಮಹತ್ವವಿದೆ. ಶಿಲ್ಪಾ ಶೆಟ್ಟಿಯವರ ಇಬ್ಬರು ಮಕ್ಕಳಾದ ವಿಯಾನ್ ಕುಂದ್ರಾ, ಸಮಿಷಾ ಕುಂದ್ರಾ ಹಾಗೂ ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬದವರು ಸಾಥ್ ನೀಡಿದ್ದಾರೆ.

ಶಿಬರೂರಿನ ಪ್ರಗತಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದ ಶಿಲ್ಪಾ ಶೆಟ್ಟಿ

ತಾನು ತುಳುನಾಡಿನವಳು. ವಿವಾಹಿತಳಾದರೂ ತನ್ನ ಹೆಸರಿಂದ ಶೆಟ್ಟಿಯನ್ನು ತೆಗೆದಿಲ್ಲ. ನನಗೆ ಶೆಟ್ಟಿ ಎನ್ನಲು ಹೆಮ್ಮೆ. ಶಿಬರೂರಿನ ಪ್ರಗತಿಗೆ ನಾನು ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂದು ಧಾರ್ಮಿಕ ವಿಧಿವಿಧಾನಗಳ ಬಳಿಕ ನಡೆದ ಸಭೆಯಲ್ಲಿ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶೆಲ್ಪಾ ಶೆಟ್ಟಿ ಶಿಬರೂರು ಗುತ್ತು ಮನೆಯಲ್ಲಿ ಕೆಲಕಾಲ ಕಳೆದರು. ಈ ವೇಳೆ ಅಭಿಮಾನಿಗಳು ಅವರೊಂದಿಗೆ ಫೊಟೋ ತೆಗೆಸಿಕೊಂಡು ಖುಷಿಪಟ್ಟರು.

'ಶ್ರೀ ಕ್ಷೇತ್ರದ ದೈವ ಕೊಡಮಣಿತ್ತಾಯನ ಅನುಗ್ರಹದಂತೆ ನಾನಿಲ್ಲಿ ಬಂದಿದ್ದೇನೆ. ನಾನು ಎಲ್ಲಿದ್ದರೂ ಮೊದಲು ತುಳುನಾಡಿನವಳು ಅನ್ನೋದು ನನಗೆ ಹೆಮ್ಮೆ. ಮುಂದೆ ಕ್ಷೇತ್ರದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸುತ್ತೇನೆ. ದೈವದ ಅನುಗ್ರಹ ನಮ್ಮೆಲ್ಲರ ಮೇಲಿರಲಿ. ನಾನು ಮತ್ತೆ ಕ್ಷೇತ್ರಕ್ಕೆ ಬರುತ್ತೇನೆ" ಎಂದು ಶಿಲ್ಪಾ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

IPL_Entry_Point