ಕನ್ನಡ ಸುದ್ದಿ  /  Karnataka  /  Mangalore News Kerala Vande Bharat Express From Thiruvananthapuram To Kasaragod Extended Up To Mangalore Kub

Vande Bharat: ಕೇರಳ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರುವರೆಗೂ ವಿಸ್ತರಣೆ, ವೇಳಾಪಟ್ಟಿ ಇಲ್ಲಿದೆ

Mangalore News ಮಂಗಳೂರು ಭಾಗದವರ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದಿಸಿದ್ದು, ತಿರುವನಂತಪುರಂ- ಕಾಸರಗೋಡು ರೈಲು ಮಂಗಳೂರುವರೆಗೂ ವಿಸ್ತರಣೆಗೊಂಡಿದೆ.ವರದಿ:ಹರೀಶ ಮಾಂಬಾಡಿ, ಮಂಗಳೂರು

ತಿರುವನಂತಪುರಂ ಕಾಸರಗೋಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಂಗಳೂರಿಗೂ ಬರಲಿದೆ.
ತಿರುವನಂತಪುರಂ ಕಾಸರಗೋಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಂಗಳೂರಿಗೂ ಬರಲಿದೆ.

ಮಂಗಳೂರು: ಕೇರಳದ ರಾಜಧಾನಿ ತಿರುವನಂತಪುರಂನಿಂದ ಕಾಸರಗೋಡುವರೆಗೂ ಇದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಮಂಗಳೂರುವರೆಗೂ ವಿಸ್ತರಿಸಬೇಕು ಎನ್ನುವ ನಿರಂತರ ಬೇಡಿಕೆಗೆ ಭಾರತೀಯ ರೈಲ್ವೆ ಕೊನೆಗೂ ಸ್ಪಂದಿಸಿದೆ. ಇನ್ನು ಮುಂದೆ ಕರಾವಳಿ ಭಾಗದ ಜನ ಕೇರಳದ ಪ್ರಮುಖ ನಗರಗಳಿಗೆ ಬೇಗನೇ ತಲುಪುಬಹುದು. ತಿರುವನಂತಪುರದಿಂದ ಕಾಸರಗೋಡುವರೆಗೂ ಬರುವ ರೈಲು ಮಂಗಳೂರಿನಿಂದ ಹೊರಡಲಿದೆ.

ತಿರುವನಂತರಪುರ-ಕಾಸರಗೋಡು ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮನವಿಯ ಮೇರೆಗೆ ಮಂಗಳೂರಿನವರೆಗೆ ವಿಸ್ತರಣೆ ಮಾಡಲಾಗಿದೆ. ಇದರೊಂದಿಗೆ ಮಂಗಳೂರಿಗೆ ಎರಡು ವಂದೇ ಭಾರತ್‌ ರೈಲುಗಳ ಸೇವೆ ದೊರೆತಂತಾಗಿದೆ.

ಈ ಕುರಿತು ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ. ಅದರ ಪ್ರಕಾರ, ವಂದೇ ಭಾರತ್ ರೈಲ್ ನಂ. 20632/20631 ಇನ್ನು ಮುಂದೆ ತಿರುವನಂತಪುರ-ಮಂಗಳೂರು ನಡುವೆ ಸಂಚರಿಸಲಿದೆ. ಈ ಸಂಬಂಧ ಹೊಸ ವೇಳಾಪಟ್ಟಿಯನ್ನೂ ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ.

ಹೀಗಿದೆ ವೇಳಾಪಟ್ಟಿ

ಹೊಸ ರೈಲ್ವೆ ವೇಳಾ ಪಟ್ಟಿಯಂತೆ ಈ ರೈಲು ಮಂಗಳೂರಿನಿಂದ ಬೆಳಿಗ್ಗೆ 06.15ಕ್ಕೆ ಹೊರಟು ಅಪರಾಹ್ನ 3.05 ಕ್ಕೆ ತಿರುವನಂತಪುರವನ್ನು ತಲುಪಲಿದೆ.

ಹಾಗೆಯೇ ತಿರುವನಂತಪುರದಿಂದ ಅದೇ ದಿನ ಸಂಜೆ 4.05 ಕ್ಕೆ ಬಿಟ್ಟು ಮಂಗಳೂರನ್ನು ಮಧ್ಯರಾತ್ರಿ 12.40ಕ್ಕೆ ತಲುಪಲಿದೆ. ಬುಧವಾರವನ್ನು ಹೊರತುಪಡಿಸಿ ವಾರದ ಆರು ದಿನಗಳಲ್ಲಿ ವಂದೇ ಭಾರತ್ ರೈಲು ತಿರುವನಂತಪುರ- ಮಂಗಳೂರು ನಡುವೆ ಸಂಚರಿಸಲಿದೆ.

ಮನವಿ ಪುರಸ್ಕರಿಸಿ ವಂದೇ ಭಾರತ್ ರೈಲನ್ನು ಮಂಗಳೂರು ವರೆಗೆ ವಿಸ್ತರಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ ಸಲ್ಲಿಸಿದ್ದಾರೆ.

ಕೇರಳದೊಂದಿಗೆ ವಹಿವಾಟು ಸೇರಿದಂತೆ ನಾನಾ ಕಾರಣದಿಂದ ನಂಟು ಹೊಂದಿರುವ ಮಂಗಳೂರಿಗರು ಹಾಗೂ ಸುತ್ತಮುತ್ತಲಿನ ಜನರಿಗೆ ಉಪಯೋಗವಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತ ಪಡಿಸಿದ್ದಾರೆ.

ಮಂಗಳೂರಿಗೆ ಎಷ್ಟು ಪ್ರಯೋಜನ

ಕಾಸರಗೋಡು ತಿರುವನಂತಪುರ ಕಾಸರಗೋಡು ವಂದೇ ಭಾರತ್ ಎಕ್ಸ್ ಪ್ರೆಸ್ ಇದುವರೆಗೆ ಬಿಡುಗಡೆಯಾದ ವಂದೇ ಭಾರತ್ ಸರಣಿಯ ರೈಲುಗಳಲ್ಲೇ ಅತ್ಯಧಿಕ ಜನರು ಸಂಚರಿಸುವ ರೈಲು ಎಂಬ ಖ್ಯಾತಿಗೆ ಒಳಪಟ್ಟಿದೆ. ಪಾಲ್ಘಾಟ್ ವಿಭಾಗಕ್ಕೆಸೇರಿದ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ತಿರುವನಂತಪುರ ಕಾಸರಗೋಡು ವಂದೇ ಭಾರತ್ ರೈಲು ವಿಸ್ತರಣೆ ಆಗಿದೆ. ಇದರಿಂದ ಕೇರಳ ಪ್ರಯಾಣಿಕರಿಗೆ ಮಂಗಳೂರು ತಲುಪುವುದು ಇನ್ನಷ್ಟು ಸುಲಭ ಆಗಲಿದೆ. ಅಂತೆಯೇ ಮಂಗಳೂರಿನವರು ಕೇರಳ ಪ್ರವಾಸ ಕೈಗೊಳ್ಳುವುದಿದ್ದರೆ ಇದರಿಂದ ಲಾಭವಾಗಲಿದೆ. ತಿರುವನಂತಪುರ ಕಾಸರಗೋಡು ವಂದೇ ಭಾರತ್ ಮಾಡಿದ ಸಂದರ್ಭ, ಕೇರಳದ ಪ್ರಯಾಣಿಕರು ಮಂಗಳೂರಿಗೆ ಬರಲು ಮತ್ತೆ ಪ್ರಯಾಸಪಡಬೇಕಾಗಿತ್ತು. ಹಾಗೆಯೇ ಮಂಗಳೂರಿನ ಪ್ರಯಾಣಿಕರು ಕಾಸರಗೋಡಿಗೆ ತೆರಳಿ ಅಲ್ಲಿಂದ ವಂದೇ ಭಾರತ್ ನಲ್ಲಿ ತಿರುವನಂತಪುರಕ್ಕೆ ತೆರಳಬೇಕಾಗಿತ್ತು. ಇದೀಗ ಮಂಗಳೂರಿಗೆ ಬರುವುದು ಒಂದರ್ಥದಲ್ಲಿ ಕೇರಳ ಕರ್ನಾಟಕ ಸಂಪರ್ಕ ಸುಲಭಸಾಧ್ಯವಾಗಲು ಕಾರಣವಾಗಿದೆ. ಇತರ ರೈಲುಗಳಲ್ಲಿನ ಒತ್ತಡಗಳೂ ಕಡಿಮೆ ಆಗಲಿವೆ.

ಗೋವಾ ರೈಲು ವಿಸ್ತರಣೆಗೆ ಕೇರಳ ಲಾಬಿ

ಈಗಾಗಲೇ ಮಂಗಳೂರು ಗೋವಾ ವಂದೇ ಭಾರತ್ ರೈಲನ್ನು ಕೇರಳದ ಕೋಯಿಕ್ಕೋಡ್ ಗೆ ವಿಸ್ತರಿಸಲು ಕೇರಳ ಸಂಸದರು ಲಾಬಿ ಮಾಡಿದ್ದಾರೆ. ಗೋವಾ ಮಂಗಳೂರು, ಗೋವಾ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಶೇ.50ಕ್ಕಿಂತಲೂ ಕಡಿಮೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದು, ಭವಿಷ್ಯದಲ್ಲಿ ಹೆಚ್ಚು ಪ್ರಯಾಣಿಕರು ಇದಕ್ಕೆ ಸಿಗಬಹುದು ಎಂಬ ನಿರೀಕ್ಷೆ ಇದೆ. ಹೀಗಾಗಿ ನಮ್ಮೂರಿಗೂ ರೈಲು ಬರಲಿ ಎಂದು ಕೇರಳ ಸಂಸದರು ಒತ್ತಾಯಿಸಿದ್ದರು.

ವರದಿ:ಹರೀಶ ಮಾಂಬಾಡಿ, ಮಂಗಳೂರು