Mangalore News: ಮಂಗಳೂರಿನ ಹೈಸ್ಕೂಲ್‌ ವಿದ್ಯಾರ್ಥಿ ಮಿಸ್ಟರ್ ಟೀನ್ ಸೂಪರ್ ಗ್ಲೋಬ್, ವರುಣ್ ಡಿ’ಕೋಸ್ಟಾಗೆ ಅಂತಾರಾಷ್ಟ್ರೀಯ ಪ್ರಶಸ್ತಿ-mangalore news mangalore highschool student varun de costa is mister teen super globe selected in thailand hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಮಂಗಳೂರಿನ ಹೈಸ್ಕೂಲ್‌ ವಿದ್ಯಾರ್ಥಿ ಮಿಸ್ಟರ್ ಟೀನ್ ಸೂಪರ್ ಗ್ಲೋಬ್, ವರುಣ್ ಡಿ’ಕೋಸ್ಟಾಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Mangalore News: ಮಂಗಳೂರಿನ ಹೈಸ್ಕೂಲ್‌ ವಿದ್ಯಾರ್ಥಿ ಮಿಸ್ಟರ್ ಟೀನ್ ಸೂಪರ್ ಗ್ಲೋಬ್, ವರುಣ್ ಡಿ’ಕೋಸ್ಟಾಗೆ ಅಂತಾರಾಷ್ಟ್ರೀಯ ಪ್ರಶಸ್ತಿ

International Mister Teen ಪ್ರೌಢಶಾಲಾ ವಿದ್ಯಾರ್ಥಿಯಾಗಿರುವ ಮಂಗಳೂರಿನ ವರುಣ್‌ ಡಿಕೋಸ್ಟಾ ಮಿಸ್ಟರ್‌ ಟೀನ್‌ ಸೂಪರ್‌ ಗ್ಲೋಬ್‌ ಆಗಿ ಸಣ್ಣ ವಯಸ್ಸಿನಲ್ಲೇ ಹೊರ ಹೊಮ್ಮಿದ್ದಾರೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

International Award ಮಂಗಳೂರಿನ ವರುಣ್ ಡಿಕೋಸ್ಟಾ ಅಂತರಾಷ್ಟ್ರೀಯ ಫ್ಯಾಷನ್‌ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
International Award ಮಂಗಳೂರಿನ ವರುಣ್ ಡಿಕೋಸ್ಟಾ ಅಂತರಾಷ್ಟ್ರೀಯ ಫ್ಯಾಷನ್‌ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.

ಮಂಗಳೂರು: ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಂಗಳೂರಿನ ಈ ಬಾಲಕ ಈಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ಧಾರೆ. ಅದೂ ಫ್ಯಾಷನ್‌ ವಲಯದಲ್ಲಿ ಹೆಸರು ಮಾಡುವ ಮುನ್ಸೂಚನೆಯಂತೂ ದೊರೆತಿದೆ. 13 ವರ್ಷದ ಬಾಲಕ ವರುಣ್ ಡಿ'ಕೋಸ್ಟಾ ಥೈಲ್ಯಾಂಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್, ಮಾಡೆಲಿಂಗ್ ಹಾಗೂ ಪ್ರತಿಭಾ ಪ್ರದರ್ಶನಗಳ ಜೊತೆ ನಡೆಯುವ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಸ್ಪರ್ಧೆಯಲ್ಲಿ ವಿಜೇತರಾಗಿ ಮರಳಿದ್ದಾರೆ. ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಸ್ಪರ್ಧೆಯ 13 ರಿಂದ 15 ವರ್ಷ ವಿಭಾಗದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ವರ್ಷ ಆಗಸ್ಟ್ 7 ರಿಂದ 10 ವರೆಗೆ ಥೈಲ್ಯಾಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ, ಅಮೇರಿಕಾ, ಲೆಬನಾನ್, ಅರ್ಮೇನಿಯಾ, ಯುಎಇ, ಓಮನ್, ಥೈಲ್ಯಾಂಡ್, ಮಲೇಶಿಯಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ನೇಪಾಳ ಸೇರಿದಂತೆ 21 ದೇಶಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದು, ಅವರನ್ನು ಮಣಿಸಿದ ಮಂಗಳೂರಿನ ಬಾಲಕ ಪ್ರಶಸ್ತಿ ಗಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ವರುಣ್ " ಈ ಸ್ಪರ್ಧೆಯಲ್ಲಿ ಮೂರು ರೌಂಡ್ ಇತ್ತು. ನ್ಯಾಷನಲ್ ಕಾಸ್ಟ್ಯೂಮ್ ರೌಂಡ್,ಟ್ಯಾಲೆಂಟ್ ರೌಂಡ್ ಮತ್ತು ಸಂದರ್ಶನ ಮತ್ತು ಇಂಟರ್ಯಾಕ್ಷನ್ ರೌಂಡ್. ಇದರಲ್ಲಿ ಆಯ್ಕೆಯಾಗಿ ಈ ಸ್ಪರ್ಧೆಯಲ್ಲಿ ವಿಜೇತನಾಗಿರುವುದು‌ ಖುಷಿ ತಂದಿದೆ ಎಂದರು.

ವರುಣ್ ತಾಯಿ ಲಿಡ್ವಿನ್ ಡಿ'ಕೋಸ್ಟಾ ಹೇಳುವಂತೆ, ನನ್ನ ಮಗ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಜಯಿಸಿರುವುದು ತುಂಬಾ ಸಂತಸವಾಗಿದೆ. ಈ ನಿರೀಕ್ಷೆ ಮಾಡಿರಲಿಲ್ಲ. ಮಗ ಸಾಧನೆ ಮಾಡಬೇಕೆಂಬ ಕನಸು ಇತ್ತು ಎಂಬುದು ಈಡೇರಿದೆ ಎನ್ನುತ್ತಾರೆ.

ವರುಣ್ ಗೆ ತರಬೇತಿ ನೀಡಿದ ವಿಜೇ ಡಿಕ್ಷನ್ " ಥೈಲ್ಯಾಂಡ್ ಗೆ ಹೋಗಿ ಜಯಿಸಿ ಬಂದಿರುವುದು ಖುಷಿ ತಂದಿದೆ. ವರುಣ್ ಗೆಲ್ಲಬೇಕೆಂಬುದು ನನ್ನ ಕನಸಾಗಿತ್ತು‌. ಅರ್ಧ ವರ್ಷದ ಶ್ರಮ ಪಟ್ಟಿದ್ದೇವೆ. ಅವರ ತಂದೆ ತಾಯಿ, ಕುಟುಂಬದ ಸಹಕಾರ ನೀಡಿ ಈ ಗೆಲುವು ಸಾಧ್ಯವಾಗಿದೆ. ಆತನಿಗೆ ನಟನಾಗಬೇಕೆಂಬ ಆಶೆಯಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವರುಣ್ ಹೇಗೆ ಆಯ್ಕೆಯಾದರು

ಭಾರತದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವರುಣ್ ಭಾಗವಹಿಸಿ ಗೆದ್ದಿದ್ದರು. 2024 ರ ಮೇ ತಿಂಗಳಲ್ಲಿ ಕ್ಯಾಲಿಕಟ್ ನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆದಿತ್ತು. ಇದರಲ್ಲಿ ವರುಣ್ ವಿಜಯ ಗಳಿಸಿದ್ದರು.ದೇಶಾದ್ಯಾಂತ ಇರುವ ಸ್ಪರ್ಧಿಗಳೊಂದಿಗೆ ಕಠಿಣ ಸ್ಪರ್ಧೆಯಲ್ಲಿ ತೊಡಗಿಕೊಂಡು, ಅಂತಿಮವಾಗಿ ಅವರು ಗೆದ್ದು, ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಅವಕಾಶ ಪಡೆದುಕೊಂಡರು.

8ನೇ ತರಗತಿ ವಿದ್ಯಾರ್ಥಿ

ವರುಣ್, ಪ್ರಸ್ತುತ ಮಂಗಳೂರು ಬಜ್ಪೆ ಸೇಂಟ್ ಜೋಸೆಫ್ ಹೈಸ್ಕೂಲ್‌ನ 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ವರುಣ್ ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ ಮತ್ತು ಜಾಹೀರಾತು ಶೂಟಿಂಗ್ ಗಳಲ್ಲಿ ಭಾಗವಹಿಸುತ್ತಿದ್ದಾರೆ. ವರುಣ್ ಯಶಸ್ಸಿನ ಹಿಂದೆ ಕಠಿಣ ಪರಿಶ್ರಮ ಮತ್ತು ತಾಯಿ-ತಂದೆಯಾದ ಲಿಡಿವಿನ್ ಡಿ'ಕೋಸ್ಟಾ ಮತ್ತು ವಿನ್ಸೆಂಟ್ ಡಿ'ಕೋಸ್ಟಾ ಅವರ ನಿರಂತರ ಬೆಂಬಲ ಇದೆ.

ವಿಜೇ ಡಿಕ್ಷನ್, ಯಶಸ್ವಿನಿ ದೇವಾಡಿಗ, ಸುಧೀರ್ ಉಲ್ಲಾಲ್, ಪ್ರಮೋದ್ ಅಲ್ವಾ, ಕೌಶಿಕ್ ಸುವರ್ಣ, ಸುಮಿತ್, ಕಿಂಗ್ಸ್ ಡ್ಯಾನ್ಸ್ ಅಕಾಡೆಮಿ ನ ಸೂರೇಶ್ ಮುಕುಂದ್, ನೃತ್ಯ ಶಕ್ತಿ ನ ಶಕ್ತಿ ಮೋಹನ್, ಬಿಗ್ ಡ್ಯಾನ್ಸ್ ಸೆಂಟರ್, ಸ್ಪಾಟ್ ಲೈಟ್ ಅಕಾಡೆಮಿ, ಟೆರೆನ್ಸ್ ಲೆವಿಸ್ ಡ್ಯಾನ್ಸ್ ಅಕಾಡೆಮಿ, ಶ್ವೇತಾ ಅರೇಹೋಳೆ, ಪ್ರಮೋದ್ ಆಳ್ವಾ, ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿ ನ ನಿತಿನ್, ಓಷನ್ ಕಿಡ್ಸ್ ನ ಚರಣ್, ಎನ್ ಪಿ ಸ್ಟುಡಿಯೋ ನ ನಿಕ್ಕಿ ಪಿಂಟೋ, ಆರ್ಯನ್ ಸ್ಟುಡಿಯೋ ನ ನವೀನ್ ಆರ್ಯನ್, ಮುಂಬೈನ ಜೋರ್ಡನ್ ಮತ್ತು ಲವಾನ್ಸ್ ಅವರ ಮಾರ್ಗದರ್ಶನದಲ್ಲಿ ಅವರು ತರಬೇತಿ ಪಡೆದರು. ಅವರ ಡಿಸೈನರ್ ಉಡುಪುಗಳನ್ನು ಹೇರಾ ಪಿಂಟೋ ಕೂಟ್ಟೂರ್ ವಿನ್ಯಾಸಗೊಳಿಸಿದ್ದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು