Mangalore Fish Mela: ಮಂಗಳೂರಿನ ಪಿಲಿಕುಳದಲ್ಲಿ ಜುಲೈ 21ರಂದು ಮತ್ಸ್ಯೋತ್ಸವ, ಮೀನು ಮಾರಾಟ,ಏನುಂಟು ವಿಶೇಷ
Fish Mela ಮಂಗಳೂರಿನಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಮತ್ಸ್ಯೋತ್ಸವವನ್ನು ಜುಲೈ 21ರ ಭಾನುವಾರ ಹಮ್ಮಿಕೊಳ್ಳಲಾಗಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು
ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಲೇಕ್ ಗಾರ್ಡನ್‍ನಲ್ಲಿ ಜುಲೈ 21ರಂದು ಆದಿತ್ಯವಾರ ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಮತ್ಸ್ಯೋತ್ಸವ ಕಾರ್ಯಕ್ರಮ ನಡೆಯಲಿದೆ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಕೆರೆಯಲ್ಲಿ ಬೆಳೆಸಿದ ರೋಹು, ಕಾಟ್ಲಾ ಮೀನುಗಳನ್ನು ಹಿಡಿದು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ. ಮೇಳದಲ್ಲಿ ಮೀನುಗಾರಿಕಾ ಇಲಾಖೆಯ ವತಿಯಿಂದ ಸಮುದ್ರದ ತಾಜಾ ಮೀನುಗಳು ಮತ್ತು ಅವುಗಳ ಖಾದ್ಯಗಳ ಮಾರಾಟ ವ್ಯವಸ್ಥೆಯನ್ನು ಕೆರೆಯ ದಂಡೆಯಲ್ಲಿ ಏರ್ಪಡಿಸಲಾಗಿದೆ. ಮೀನುಗಳ ಮಾರಾಟ ಪ್ರಕ್ರಿಯೆ ಬೆಳಿಗ್ಗೆ 8 ರಿಂದ ಪ್ರಾರಂಭವಾಗಲಿದ್ದು, ಮೀನು ಲಭ್ಯವಿರುವ ತನಕ ಮುಂದುವರಿಯಲಿದೆ ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ
ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಜುಲೈ 16 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು, ಪುತ್ತೂರು ತಾಲೂಕಿನ ಕೊಯಿ¯, ಉಪ್ಪಿನಂಗಡಿ, ಸುಳ್ಯ ತಾಲೂಕಿನ ಬೆಳ್ಳಾರೆ ಹಾಗೂ ಜುಲೈ 17 ರಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹಾಗೂ ಜುಲೈ 20 ರಂದು ಪುತ್ತೂರು ತಾಲೂಕಿನ ಪಾಣಾಜೆ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿದೆ.
ಈ ಶಿಬಿರದ ಸದುಪಯೋಗವನ್ನು ಎಂಡೋಸಲ್ಫಾನ್ ಸಂತ್ರಸ್ತರು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾರಿ ಅಕಾಡೆಮಿ : ‘ಬೆಲ್ಕಿರಿ’ ದ್ವೈಮಾಸಿಕಕ್ಕೆ ಲೇಖನ ಆಹ್ವಾನ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಗಾಗಿ ಪ್ರತೀ 2 ತಿಂಗಳಿಗೊಮ್ಮೆ ಹೊರತರುವ ‘ಬೆಲ್ಕಿರಿ’ ದ್ವೈಮಾಸಿಕ ಸಂಚಿಕೆಯಲ್ಲಿ ಪ್ರಕಟಿಸಲು ಬ್ಯಾರಿ ಇತಿಹಾಸ/ಸಂಶೋಧನಾ ಲೇಖನಗಳು, ಪುಸ್ತಕ ಪರಿಚಯ, ಮರೆಯಬಾರದ ಬ್ಯಾರಿ ಮಹನೀಯರು, ಕಥೆ/ಕವನ/ಚುಟುಕುಗಳನ್ನು ಆಹ್ವಾನಿಸಲಾಗಿದೆ.
ಟೈಪ್ ಮಾಡಿ ಕಳುಹಿಸುವುದಾದರೆ ನುಡಿ/ಬರಹ ಫಾಂಟ್‍ನಲ್ಲಿ ಕಳುಹಿಸಬೇಕು. ಹೆಸರು ಮತ್ತು ವಿಳಾಸವಿಲ್ಲದ ಲೇಖನಗಳನ್ನು ಪ್ರಕಟಿಸಲಾಗುವುದಿಲ್ಲ. ಪ್ರಕಟಿತ ಲೇಖನಗಳ ಲೇಖಕರಿಗೆ ಗೌರವ ಸಂಭಾವನೆ ಪಾವತಿಸಲಾಗುತ್ತದೆ.
ಆಸಕ್ತರು ತಮ್ಮ ಬರಹಗಳನ್ನು ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮಥ್ರ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೇ ಕಟ್ಟಡ, ಮಿನಿ ವಿಧಾನಸೌಧದ ಬಳಿ, ಮಂಗಳೂರು 575001ಅಕಾಡೆಮಿಯ ವಾಟ್ಸಪ್ ಸಂಖ್ಯೆ 7483946578 ಕಳುಹಿಸಿ ಕೊಡುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)