ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಬೆಳ್ತಂಗಡಿಯಲ್ಲಿ ಮನೆ ಮಾಲಕಿ ಮೇಲೆಯೇ ಸಾಕಿದ ನಾಯಿ ದಾಳಿ; ಮಹಿಳೆ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

Mangalore News: ಬೆಳ್ತಂಗಡಿಯಲ್ಲಿ ಮನೆ ಮಾಲಕಿ ಮೇಲೆಯೇ ಸಾಕಿದ ನಾಯಿ ದಾಳಿ; ಮಹಿಳೆ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಮನೆಯೊಡತಿ ಮೇಲೆಯೇ ಸಾಕಿದ ನಾಯಿಯೊಂದು ದಾಳಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಮಹಿಳೆ ಗಂಭೀರವಾಗಿ ಗಾಯೆಗೂಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. (ವರದಿ: ಹರೀಶ್ ಮಾಂಬಾಡಿ)

ಸಾಕಿದ ನಾಯಿಯೇ ಮನೆಯೊಡತಿಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. (ಫೋಟೊ-ಫೈಲ್)
ಸಾಕಿದ ನಾಯಿಯೇ ಮನೆಯೊಡತಿಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. (ಫೋಟೊ-ಫೈಲ್)

ಮಂಗಳೂರು (ದಕ್ಷಿಣ ಕನ್ನಡ): ಸಾಮಾನ್ಯವಾಗಿ ಕೆಲವರು ಮನುಷ್ಯರಿಗಿಂತಲೂ ಹೆಚ್ಚು ಶ್ವಾನವನ್ನು ನಂಬುತ್ತಾರೆ. ಮನೆಗೆ ಯಾರಾದರೂ ಪ್ರವೇಶಿಸಿದರೆ, ಮನೆಯ ಹಜಾರ, ಮಲಗುವ ಕೊಠಡಿಯಲ್ಲಿ ನಾಯಿಯನ್ನು ಬಿಗಿದಪ್ಪಿ ಮಲಗುವ ಮನುಷ್ಯರೂ ಸಿಗುತ್ತಾರೆ. ಇಂಥ ಸಂದರ್ಭದಲ್ಲೆಲ್ಲಾ ನಾಯಿ ಮನೆಯ ಸದಸ್ಯನಂತೆಯೇ ಬುದ್ಧಿವಂತನಂತೆ ವರ್ತಿಸುತ್ತದೆ. ಮಾಲೀಕ ಹೇಳಿದ ಕೆಲಸಗಳನ್ನೆಲ್ಲಾ ಮಾಡುತ್ತದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿನ ಮಹಿಳೆಯೊಬ್ಬರು ನಂಬಿದ್ದರು. ತಾವು ಅತಿಯಾಗಿ ಪ್ರೀತಿಸುತ್ತಿದ್ದ ಸಾಕುನಾಯಿ ಕಟ್ಟಿಹಾಕಿದ್ದನ್ನು ಬಿಡಿಸಿ ಕರೆತರುತ್ತಿದ್ದರು. ಅದೇನಾಯಿತೋ ಗೊತ್ತಿಲ್ಲ. ಶ್ವಾನ ತನ್ನ ಮಾಲಕಿ ಮೇಲೆಯ ದಾಳಿ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಏನಿದು ಘಟನೆ? ಏನಾಯಿತು ಮಹಿಳೆಗೆ?

ಕಟ್ಟಿ ಹಾಕಿದ್ದ ತನ್ನ ಮನೆಯ ಸಾಕು ನಾಯಿ ಜತೆ ಮನೆ ಮಾಲಕಿ ಸರಪಳಿಯಿಂದ ಬಿಡಿಸಿದಾಗ ಏಕಾಏಕಿ ದಾಳಿ ಮಾಡಿ ಗಂಭೀರ ಗಾಯ ಮಾಡಿರುವ ಘಟನೆ ಬೆಳ್ತಂಗಡಿ (Belthangadi Crime News) ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ನಡೆದಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಡಾಜೆ ಗ್ರಾಮದ ನಿಡಿಗಲ್ ಓಂಕಾರ್ ನಿವಾಸಿ ದಿ.ರಾಮ್ ದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ ಗಾಯಗೊಂಡ ಮಹಿಳೆ.

ಪೂರ್ಣಿಮಾ ತನ್ನ ಮನೆಯಲ್ಲಿದ್ದ ಸಾಕು ನಾಯಿಯನ್ನು ಕಟ್ಟಿಹಾಕಿದ್ದರು. ಅದನ್ನು ಬಿಡಲು ಹೋದ ಸಂದರ್ಭ ಏಕಾಏಕಿ ದಾಳಿ ಮಾಡಿದೆ. ಕಚ್ಚಿ ಗಂಭೀರ ಗಾಯಗೊಳಿಸಿದೆ. ನಾಯಿ ದಾಳಿ ಮಾಡುತ್ತಿದ್ದಂತೆ ಪೂರ್ಣಿಮಾ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾರೆ. ಆದರೂ ಬಿಡದೆ ತಲೆ ಭಾಗದ ಮೇಲೆಯೂ ದಾಳಿ ಮಾಡಿದೆ. ತಲೆ, ಕುತ್ತಿಗೆ, ಕೈ ಸಹಿತ ಸುಮಾರು 20 ಕಡೆ ಕಚ್ಚಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಮನೆಯವರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪೂರ್ಣಿಮಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. (ವರದಿ: ಹರೀಶ್ ಮಾಂಬಾಡಿ)

IPL_Entry_Point