Mangalore Crime: ಮಂಗಳೂರು ನಗರದಲ್ಲಿ ಮತ್ತೊಂದು ದರೋಡೆ ಪ್ರಕರಣ, ವೃದ್ಧರನ್ನು ಹಲ್ಲೆ ಮಾಡಿ ಕೂಡಿಹಾಕಿ ಕಾರೊಂದಿಗೆ ಪರಾರಿ
Mangalore News ಮಂಗಳೂರು ನಗರದಲ್ಲಿ ಕೆಲ ದಿನಗಳ ಹಿಂದೆ ದರೋಡೆ ನಡೆದಿತ್ತು. ಈಗ ಮತ್ತೊಂದು ಅಂತಹುದ್ದೇ ಪ್ರಕರಣ ವರದಿಯಾಗಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಮಂಗಳೂರು : ಮಂಗಳೂರು ನಗರದಲ್ಲಿ ಮತ್ತೆ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಬಿಜೈ ಕಾಪಿಕಾಡ್ ಬಳಿಯ ದಡ್ಡಲ್ ಕಾಡು ಬಳಿ ಮಂಗಳವಾರ ಬೆಳಗಿನ ಜಾವಾ ಈ ದರೋಡೆ ನಡೆದಿದೆ. ಕೋಟೆಕಣಿ ಒಂದನೇ ಕ್ರಾಸ್ ನ ಕರೀಷ್ಮಾ ಎನ್ನುವ ಮನೆಯಲ್ಲಿ ದರೋಡೆ ವಿಕ್ಟರ್ ಮೆಂಡೋನ್ಸಾ (೭೧) ಪ್ಯಾಟ್ರಿಷಾ ಮೆಂಡೋನ್ಸಾ (೬೦) ಮಕ್ಕಳಿಬ್ಬರು ವಿದೇಶದಲ್ಲಿದ್ದಾರೆ. ದಂಪತಿಗಳಿಬ್ಬರು ಮಾತ್ರ ಮನೆಯಲ್ಲಿ ಉಳಿದಿದ್ದರು. ಬೆಡ್ ರೂಂನ ಕಿಟಿಕಿ ಕಟ್ ಮಾಡಿಕೊಂಡು ರಾತ್ರಿ ೧.೪೯ ರಿಂದ ನಾಲ್ಕು ಗಂಟೆಯ ವರೆಗೆ ದರೋಡೆ ಮಾಡಿದ್ದಾರೆ. ಇಬ್ಬರಿಗೂ ಹೊಡೆದಿರುವ ಕಾರಣ ಇಬ್ಬರು ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಈ ದರೋಡೆ ಕೃತ್ಯ ನಡೆದಿದೆ. ಮನೆಯಲ್ಲಿದ್ದ ವೃದ್ದರನ್ನು ಕೂಡಿ ಹಾಕಿ ಹಲ್ಲೆ ನಡೆಸಿ ದರೋಡೆ ಮಾಡಿ ಬಳಿಕ ಮನೆ ಮಾಲಿಕ ಕಾರೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಮನೆ ಮಾಲಿಕ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಂಡದಲ್ಲಿ 4 ಮಂದಿ ದರೋಡೆಕೋರರು ಇದ್ದರೆಂದು ತಿಳಿದು ಬಂದಿದೆ. ಈ ಮನೆಯಲ್ಲಿ ವೃದ್ದರಿದ್ದು ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಮನೆಯವರಿಗೆ ಮಾರಕಾಯುಧ ತೋರಿಸಿ, ಹಲ್ಲೆ ನಡೆಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಕಾರಿನ ಕೀ ಪಡೆದು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ.
ಹೆಜಮಾಡಿ ಟೋಲ್ ಗೇಟ್ ಸಮೀಪ ಕಾರು ನಿಲ್ಲಿಸಿ ಪರಾರಿಯಾಗಿದ್ದಾರೆ. ಉರ್ವ ಪೊಲೀಸರು, ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ.ಘಟನೆ ಬೆನ್ನಲ್ಲೇ ಪೊಲೀಸರು ದರೋಡೆಗೈದ ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮೆರಾಗಳನ್ನು ಶೋಧ ನಡೆಸುತ್ತಿದ್ದಾರೆ.
ವರದಿ: ಹರೀಶ ಮಾಂಬಾಡಿ.ಮಂಗಳೂರು
ವಿಭಾಗ