ಮಂಗಳೂರು ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ; ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ “ಪ್ರಿನ್ಸ್” ಪ್ರಶಸ್ತಿ ಗೆದ್ದ ರುಶಭ್ ರಾವ್
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ; ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ “ಪ್ರಿನ್ಸ್” ಪ್ರಶಸ್ತಿ ಗೆದ್ದ ರುಶಭ್ ರಾವ್

ಮಂಗಳೂರು ಹುಡುಗ ಜಾಗತಿಕ ವೇದಿಕೆಯತ್ತ ಹೆಜ್ಜೆ; ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ “ಪ್ರಿನ್ಸ್” ಪ್ರಶಸ್ತಿ ಗೆದ್ದ ರುಶಭ್ ರಾವ್

ರುಶಭ್ ರಾವ್ ಅವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ “ಪ್ರಿನ್ಸ್” ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಮೂಲಕ ಮಂಗಳೂರು ಹುಡುಗ ಜಾಗತಿಕ ವೇದಿಕೆಯೆಡೆಗೆ ಹೆಜ್ಜೆ ಹಾಕಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು ಹುಡುಗ  ರುಶಭ್ ರಾವ್ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ “ಪ್ರಿನ್ಸ್” ಪ್ರಶಸ್ತಿ ಗೆದ್ದು ಜಾಗತಿಕ ವೇದಿಕೆಯತ್ತ ಹೆಜ್ಜೆ ಇರಿಸಿ ಗಮನಸೆಳೆದಿದ್ದಾರೆ.
ಮಂಗಳೂರು ಹುಡುಗ ರುಶಭ್ ರಾವ್ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025ರ “ಪ್ರಿನ್ಸ್” ಪ್ರಶಸ್ತಿ ಗೆದ್ದು ಜಾಗತಿಕ ವೇದಿಕೆಯತ್ತ ಹೆಜ್ಜೆ ಇರಿಸಿ ಗಮನಸೆಳೆದಿದ್ದಾರೆ.

ಮಂಗಳೂರು ನಗರದ ಕುಲಶೇಖರ ನಿವಾಸಿಯಾದ ಕೇವಲ 8 ವರ್ಷದ ರುಶಭ್ ರಾವ್ ಅವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರತಿನಿಧಿಸುತ್ತಾ , ಮೇ 25, 2025 ರಂದು ಗೋವಾದಲ್ಲಿ ಆಯೋಜಿಸಲಾದ "ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025" ಸ್ಪರ್ಧೆಯಲ್ಲಿ “ಪ್ರಿನ್ಸ್ ಆಫ್ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್” ಎಂಬ ಗೌರವಾನ್ವಿತ ಪ್ರಶಸ್ತಿಯನ್ನು ಗೆದ್ದು, ಮಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.

ಲೂರ್ಡ್ಸ್ ಸೆಂಟ್ರಲ್ ಶಾಲೆ, ಬಿಜೈ , ಮಂಗಳೂರು ಇಲ್ಲಿನ ಮೂರನೇ ತರಗತಿಯ ವಿದ್ಯಾರ್ಥಿಯಾದ ರುಶಭ್, ತನ್ನ ಅಪ್ರತಿಮ ಪ್ರತಿಭೆ ಮತ್ತು ಆತ್ಮವಿಶ್ವಾಸದಿಂದ ವೇದಿಕೆಯಲ್ಲಿ ಕಂಗೊಳಿಸಿದ್ದಾನೆ. ಅವರು (KUWSDB) ಸಹಾಯಕ ಎಂಜಿನಿಯರ್ ಆಗಿರುವ ರಕ್ಷಿತ್ ರಾವ್ ಮತ್ತು ಅಶ್ವಿನಿ ದಂಪತಿಯ ಪುತ್ರ.

ಆರು ವರ್ಷದ ವಯಸ್ಸಿನಲ್ಲಿ ಮಾಡೆಲಿಂಗ್‌ಗೆ ಪ್ರವೇಶಿಸಿದ್ದ ರುಶಭ್, ಇತ್ತೀಚೆಗೆ ಉತ್ತಮ ನೃತ್ಯಕೌಶಲ್ಯ ಮತ್ತು ಅಭಿನಯದಿಂದ ಗುರುತಿಸಿಕೊಂಡಿದ್ದಾನೆ. ಅವರು ಈಗಾಗಲೇ ಮೂರು ತುಳು ಚಲನಚಿತ್ರಗಳು ಮತ್ತು ಒಂದು ಕನ್ನಡ ಧಾರಾವಾಹಿಯಲ್ಲಿ ಬಾಲನಟನಾಗಿ ಯಶಸ್ವಿಯಾಗಿ ಅಭಿನಯಿಸಿದ್ದಾರೆ. ಈ ಮೂಲಕ ಅವರು ಕಿರುತೆರೆಯಲ್ಲಿಯೂ ತಮ್ಮ ಪ್ರಭಾವ ಬೀರುವುದರಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಾರಿ ಗೋವದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡು ಮಾತ್ರವಲ್ಲದೇ, ಇನ್ನು ಮೂರು ಪ್ರಮುಖ ಉಪಶೀರ್ಷಿಕೆಗಳನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ:

• "ಪ್ರಿನ್ಸ್ ಆಫ್ ಕರ್ನಾಟಕ"

• "ಸೂಪರ್ ಟ್ಯಾಲೆಂಟ್" (ಪ್ರತಿಭಾ ಪ್ರದರ್ಶನ ವಿಭಾಗದಲ್ಲಿ ನೃತ್ಯ)

• "ಬೆಸ್ಟ್ ಕಾಸ್ಟ್ಯೂಮ್" (ಅತ್ಯುತ್ತಮ ಉಡುಪು)

ಈ ಎಲ್ಲಾ ಯಶಸ್ಸಿನ ಹಿಂದೆ ಒಂದು ತಂಡವೆ ಇದೆ. ,ಮಂಗಳೂರಿನ ಫ್ಯಾಷನ್ ನಿರ್ದೇಶಕಿ ಯಶಸ್ವಿನಿ ದೇವಡಿಗ ಅವರ ಮಾರ್ಗದರ್ಶನದಲ್ಲಿ ರುಶಭ್ ಈ ಸ್ಪರ್ಧೆಗೆ ತಯಾರಾದರೆ, ಆರ್ಯನ್ಸ್ ಡಾನ್ಸ್ ಸ್ಟುಡಿಯೋದ ನೃತ್ಯ ಗುರುಗಳಾದ ನವೀನ್ ಶೆಟ್ಟಿ ಅವರ ನೃತ್ಯ ತರಬೇತಿ ಪ್ರತಿಭಾ ಪ್ರದರ್ಶನದಲ್ಲಿ ಮಿಂಚುವಂತೆ ಮಾಡಿದದ್ದು, ಸ್ಪರ್ಧೆಯ ಮುಖ್ಯ ಆಕರ್ಷಣೆಯಾಗಿತ್ತು. ರುಶಭ್‌ನ ಅಲಂಕರಿಸಿದ ವೇಷಭೂಷಣಗಳಿಗೆ ವರ್ಷಾ ಆಚಾರ್ಯ ಅವರು (ಕಾಸ್ಟ್ಯೂಮ್ ಡಿಸೈನ್) ವಿನ್ಯಾಸ ನೀಡಿದ್ದು, ಅವರು "ಬೆಸ್ಟ್ ಕಾಸ್ಟ್ಯೂಮ್" ಶೀರ್ಷಿಕೆಯನ್ನು ಗೆಲ್ಲಲು ಕಾರಣವಾಯಿತು.

ಈ ಸಾಧನೆಯ ಬೆನ್ನಲ್ಲೇ ರುಶಭ್, ಅಂತರಾಷ್ಟ್ರೀಯ ವೇದಿಕೆಗೆ ಹೆಜ್ಜೆ ಇಡುವ ತಯಾರಿಯಲ್ಲಿ ನಿಂತಿದ್ದಾರೆ. ಅವರು ಆಗಸ್ಟ್ 13 ರಿಂದ 17, 2025 ರ ವರೆಗೆ ವಿಯಟ್ನಾಂನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.