ಮಂಗಳೂರು ವಿಶ್ವವಿದ್ಯಾನಿಲಯ ಮಾಮ್ ಇನ್‌ಸ್ಪೈರ್ ಪ್ರಶಸ್ತಿಗೆ ಅರ್ಜಿ ಆಹ್ವಾನ; ಯಾರೆಲ್ಲಾ ಅಪ್ಲೈ ಮಾಡಬಹುದು ನೋಡಿ
MAAM Inspire Award: ಮಾಮ್ ಇನ್‌ಸ್ಪೈರ್ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಯಾವುದೇ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಸಾಧಕ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ವಿವರಗಳು ಈ ಸುದ್ದಿಯಲ್ಲಿದೆ.
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆಯಾದ ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (MAAM) ವತಿಯಿಂದ ನೀಡಲಾಗುವ 2023-24ನೇ ಸಾಲಿನ ಮಾಮ್ ಇನ್‌ಸ್ಪೈರ್ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳ ಯಾವುದೇ ಪದವಿ ವಿಭಾಗ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುತ್ತದೆ. ವಿಜೇತರಿಗೆ 5 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುತ್ತದೆ.
2023-24ರಲ್ಲಿ ಯಾವುದೇ ಪದವಿಯ ಅಧ್ಯಯನ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಅಧ್ಯಯನ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.
ಪದವಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- 2023ರ ಜೂನ್‌ನಿಂದ 2024ರ ಮೇ ಅಂತ್ಯದ ಒಳಗೆ ಕನಿಷ್ಠ 8 ಲೇಖನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು.
- ರೇಡಿಯೋ, ಟಿವಿ ಕಾರ್ಯಕ್ರಮಗಳು ಪ್ರಸಾರವಾಗಿರಬೇಕು.
- ಶೈಕ್ಷ ಣಿಕ ವಿಷಯಗಳಲ್ಲಿ ಶೇ.60ರಷ್ಟು ಅಂಕ ಗಳಿಸಿರಬೇಕು.
- ಮಾಧ್ಯಮ ಕ್ಷೇತ್ರದ ಬಗ್ಗೆ ಆಸಕ್ತರಾಗಿರಬೇಕು. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರಬೇಕು.
- ಬ್ಲಾಗ್ ಬರಹ, ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸಿರಬೇಕು.
ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು
ಸ್ನಾತಕೋತ್ತರ ವಿಭಾಗದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪದವಿ ವಿದ್ಯಾರ್ಥಿಗಳಿಗಿರುವ ಮಾನದಂಡಗಳು ಇಲ್ಲಿಯೂ ಅನ್ವಯಿಸುತ್ತವೆ. ಇದಕ್ಕೆ ಹೆಚ್ಚುವರಿಯಾಗಿ…
- ಕನಿಷ್ಠ 12 ಲೇಖನ ಅಥವಾ ನುಡಿಚಿತ್ರಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು.
- ಶೈಕ್ಷ ಣಿಕ ವಿಷಯಗಳಲ್ಲಿ ಶೇ 55ರಷ್ಟು ಅಂಕ ಗಳಿಸಿರಬೇಕು.
- ಛಾಯಾಗ್ರಹಣ, ಸಾಕ್ಷ್ಯಚಿತ್ರ ನಿರ್ಮಾಣ, ಡಿಜಿಟಲ್/ನವ ಮಾಧ್ಯಮ/ ಸಿನಿಮಾ/ ಒಟಿಟಿ ಕಂಟೆಂಟ್, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದು.
- ಸಾರ್ವಜನಿಕ ಸಂಪರ್ಕ ಮತ್ತು ಪರಿಣಾಮಕಾರಿ ಕಾರ್ಯತಂತ್ರ, ಅತ್ಯುತ್ತಮ ಜಾಹೀರಾತು ವಿನ್ಯಾಸ, ಹೊಸ ಪರಿಕಲ್ಪನೆಗಳು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು.
- ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವುದು, ಅಧ್ಯಯನ ವರದಿಗಳು (ಶೈಕ್ಷಣಿಕ ವರ್ಷದ ಪ್ರೌಢಪ್ರಬಂಧ ಹೊರತುಪಡಿಸಿ) ಪ್ರಕಟವಾಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಎಲ್ಲ ಸಾಧನೆಗಳ ದಾಖಲೆಗಳನ್ನು ತಮ್ಮ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಿಸಿ, ಸ್ವವಿರವುಳ್ಳ ಪತ್ರದ ಸಹಿತ 2024ರ ಅಕ್ಟೋಬರ್ 12ರ ಒಳಗೆ ಮಾಮ್ ಸಂಘಟನೆಯ ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಡಿಜಿಟಲ್‌ರೂಪದಲ್ಲಿ ಒಂದೇ ಪಿಡಿಎಫ್ ಫೈಲ್‌ನಲ್ಲಿ ಹಾಕಿ ಇಮೇಲ್‌ಮೂಲಕ ಕಳುಹಿಸಬೇಕು.
ಇಮೇಲ್ ವಿಳಾಸ: reachtomaam@gmail.com
(ಹೆಚ್ಚಿನ ಮಾಹಿತಿಗಾಗಿ ಸಂಘಟನೆಯ ಅಧ್ಯಕ್ಷ ನವೀನ್ ಅಮ್ಮೆಂಬಳ- 9449588440, ಸಂಚಾಲಕ ಕೃಷ್ಣಮೋಹನ ತಲೆಂಗಳ- 9481976969 ಇವರನ್ನು ಸಂಪರ್ಕಿಸಬಹುದು.)
ಮಂಗಳೂರಿನ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | Breaking News: ಕರ್ನಾಟಕ ಪಿಎಸ್ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ