ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ 30 ಲಕ್ಷ ದರೋಡೆ, ಅಂತಾರಾಜ್ಯ ದರೋಡೆಕೋರನ ಬಂಧಿಸಿದ ವಿಟ್ಲ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ 30 ಲಕ್ಷ ದರೋಡೆ, ಅಂತಾರಾಜ್ಯ ದರೋಡೆಕೋರನ ಬಂಧಿಸಿದ ವಿಟ್ಲ ಪೊಲೀಸರು

ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ 30 ಲಕ್ಷ ದರೋಡೆ, ಅಂತಾರಾಜ್ಯ ದರೋಡೆಕೋರನ ಬಂಧಿಸಿದ ವಿಟ್ಲ ಪೊಲೀಸರು

ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ವಿಟ್ಲ ಬೋಳಂತೂರಿನ‌ ಉದ್ಯಮಿಯ ಮನೆಯಲ್ಲಿ ದರೋಡೆ ಮಾಡಿದ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರಿಂದ ಅಂತಾರಾಜ್ಯ ದರೋಡೆಕೋರನ ಬಂಧಿಸಲಾಗಿದೆ. ಕಾರು, ನಗದು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ 30 ಲಕ್ಷ ದರೋಡೆ, ಅಂತಾರಾಜ್ಯ ದರೋಡೆಕೋರನ ಬಂಧಿಸಿದ ವಿಟ್ಲ ಪೊಲೀಸರು
ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ 30 ಲಕ್ಷ ದರೋಡೆ, ಅಂತಾರಾಜ್ಯ ದರೋಡೆಕೋರನ ಬಂಧಿಸಿದ ವಿಟ್ಲ ಪೊಲೀಸರು

ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಗೆ ದಾಳಿ ನಡೆಸಿ 30 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿದ್ದ ಆರು ಅಪರಿಚಿತರ ಪೈಕಿ ಒಬ್ಬ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 3 ರಂದು ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಈ ಘಟನೆ ನಡೆದಿತ್ತು. ಅನಿಲ್‌ ಫರ್ನಾಂಡಿಸ್‌ (49) ಎಂಬಾತ ಬಂಧನವಾಗಿದೆ. ಈತ ಕೇರಳದ ಕೊಲ್ಲಂ ಜಿಲ್ಲೆಯ ತ್ರಿಕ್ಕಡವೂರ್‌ ನಿವಾಸಿ.

6 ಜನ ಅಪರಿಚಿತರು ತಾವು ಇಡಿ ಅಧಿಕಾರಿಗಳೆಂದು ಹೇಳಿ ಸಿಂಗಾರಿ ಬೀಡಿ ಉದ್ಯಮಿಯ ಮನೆಯ ಶೋಧ ನಡೆಸಿದ್ದರು. ಸುಮಾರು 30 ಲಕ್ಷ ನಗದು ದೋಚಿ, ಇದಕ್ಕೆ ಸಂಬಂಧಿಸಿ ದಾಖಲೆ ನೀಡುವಂತೆ ಸೂಚಿಸಿ ಮಂಗಳೂರಿನ ಕಚೇರಿಗೆ ಭೇಟಿ ನೀಡುವಂತೆ ಹೇಳಿದ್ದರು. ಹಣ ಪಡೆದುಕೊಂಡು ಹೋದ ಬಳಿಕ ಮೊಬೈಲ್ ನಂಬರ್​ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದರು. ಈ ಆರೋಪಿಗಳ ಪತ್ತೆಗೆ ಪೊಲೀಸ್ ಅಧೀಕ್ಷಕ ಯತೀಶ್ ಎನ್ ಅವರ ಆದೇಶದ ಮೇರೆಗೆ 4 ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.

ಕೇರಳ ರಾಜ್ಯದ ಈ ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು, 5 ಲಕ್ಷ ರೂಪಾಯಿ ನಗದು ಹಾಗೂ ನಕಲಿ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ ನಂಬರ ಪ್ಲೇಟ್‌ನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆಗೆ ತನಿಖೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ, ಅಪರಾಧ ಪ್ರಕರಣಗಳಲ್ಲಿ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ವಿಶೇಷ ತನಿಖಾ ತಂಡಗಳು ಕಾರ್ಯನಿರ್ವಹಿಸಿರುತ್ತಿವೆ.

Whats_app_banner