ಕನ್ನಡ ಸುದ್ದಿ  /  Karnataka  /  Mangaluru Auto Rickshaw Blast: Mangaluru Blast Suspect Mohammed Shariq Has Is Links

Mangaluru auto rickshaw blast: ಆಟೋ ರಿಕ್ಷಾದಲ್ಲಿ ಬಾಂಬ್‌ ಸ್ಫೋಟ, ಪ್ರಯಾಣಿಕನ ಹೆಸರು ಶಾರೀಕ್‌, ಈ ಹಿಂದೆಯೂ ಉಗ್ರ ಕೃತ್ಯ ಎಸಗಿದ್ದ!

ಈತನ ಹೆಸರು ಮಹಮ್ಮದ್‌ ಶಾರೀಕ್‌ (24). ಈತ ತೀರ್ಥಹಳ್ಳಿಯವನಾಗಿದ್ದು, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಜತೆ ಸಂಪರ್ಕ ಹೊಂದಿರುವ ಆರೋಪವೂ ಈತನ ಮೇಲಿದೆ.

Mangaluru auto rickshaw blast: ಆಟೋ ರಿಕ್ಷಾದಲ್ಲಿ ಬಾಂಬ್‌ ಸ್ಫೋಟ, ಪ್ರಯಾಣಿಕನ ಹೆಸರು ಶಾರೀಕ್‌, ಈ ಹಿಂದೆಯೂ ಉಗ್ರ ಕೃತ್ಯ ಎಸಗಿದ್ದ!
Mangaluru auto rickshaw blast: ಆಟೋ ರಿಕ್ಷಾದಲ್ಲಿ ಬಾಂಬ್‌ ಸ್ಫೋಟ, ಪ್ರಯಾಣಿಕನ ಹೆಸರು ಶಾರೀಕ್‌, ಈ ಹಿಂದೆಯೂ ಉಗ್ರ ಕೃತ್ಯ ಎಸಗಿದ್ದ!

ಮಂಗಳೂರು: ನಿನ್ನೆ ಸಂಜೆ ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಬಂಧಪಟ್ಟಂತೆ ರಿಕ್ಷಾ ಬಾಂಬರ್‌ ಹೆಸರನ್ನು ಪೊಲೀಸರು ಖಚಿತಗೊಳಿಸಿದ್ದಾರೆ. ಈತನ ಹೆಸರು ಮಹಮ್ಮದ್‌ ಶಾರೀಕ್‌ (24). ಈತ ತೀರ್ಥಹಳ್ಳಿಯವನಾಗಿದ್ದು, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಜತೆ ಸಂಪರ್ಕ ಹೊಂದಿರುವ ಆರೋಪವೂ ಈತನ ಮೇಲಿದೆ.

ಪೊಲೀಸರು ಶಾರೀಕ್‌ ಫೋಟೊಗಳನ್ನು ಪರಿಶೀಲಿಸಿದ್ದಾರೆ ಮತ್ತು ಶಾರೀಕ್‌ನ ಕುಟುಂಬವು ಆಸ್ಪತ್ರೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮಹಮ್ಮದ್‌ ಶಾರೀಕ್‌ ಎಂದು ಫೋನ್‌ ಮೂಲಕ ಗುರುತಿಸಿದ್ದಾರೆ. ಆತನ ಕುಟುಂಬದವರು ಆಸ್ಪತ್ರೆಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ಚೂರಿ ಇರಿತದಲ್ಲಿಯೂ ಶಾರೀಕ್‌ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಾವರ್ಕರ್‌ ಫೋಟೊ ಹಾಕಿದ ವಿಷಯಕ್ಕೆ ಸಂಬಂಧಪಟ್ಟಂತೆ ಚೂರಿ ಇರಿತ ಘಟನೆ ನಡೆದಿತ್ತು. ಆ ಸಂದರ್ಭದಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಜತೆ ನಂಟು ಹೊಂದಿರುವ ಶಂಕಿತ ಭಯೋತ್ಪಾದನಾ ಘಟಕದ ಕುರಿತು ಮಾಹಿತಿ ಕಲೆ ಹಾಕಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಮುನೀರ್‌ ಅಹಮ್ಮದ್‌ (22) ಮತ್ತು ಸೈಯದ್‌ ಯಾಸಿನ್‌ (21) ಎಂಬವರನ್ನು ಬಂಧಿಸಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಇವರಿಬ್ಬರಿಗೆ ಬಾಂಬ್‌ ತಯಾರಿಕೆ, ಉಗ್ರ ಚಟುವಟಿಕೆ ಇತ್ಯಾದಿಗಳ ಕುರಿತು ಶಾರೀಕ್‌ ತರಬೇತಿ ನೀಡಿದ್ದನು. ಪಿಡಿಎಫ್‌ ಫೈಲ್‌ಗಳು, ವಿಡಿಯೋಗಳು ಇತ್ಯಾದಿಗಳನ್ನು ಶಾರೀಕ್‌ ಇವರಿಗೆ ಕಳುಹಿಸಿದ್ದ. ಐಇಡಿ ಮೂಲಕ ಬಾಂಬ್‌ ತಯಾರಿಕೆ ತರಬೇತಿಯನ್ನೂ ನೀಡಿದ್ದ. ಆದರೆ, ಪೊಲೀಸರು ಆತನ ನಿವಾಸಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಪರಾರಿಯಾಗಿದ್ದ. ಇಲ್ಲಿಯವರೆಗೂ ಆತ ನಾಪತ್ತೆಯಾಗಿದ್ದ. ಇದೀಗ ರಿಕ್ಷಾ ಬಾಂಬ್‌ ಮೂಲಕ ಪತ್ತೆಯಾಗಿದ್ದಾನೆ.

ಮಹಮ್ಮದ್‌ ಶಾರೀಕ್‌ ಮತ್ತು ಮಾಝ್‌ ಅಹ್ಮದ್‌ರನ್ನು ಮಂಗಳೂರು ನಗರ ಪೊಲೀಸರು ಮಂಗಳೂರಿನಲ್ಲಿ ಗೋಡೆಯಲ್ಲಿ ಲಷ್ಕರ್‌ ಇ ತಯ್ಬಾ ಮತ್ತು ತಾಲಿಬಾನ್‌ಗೆ ಬೆಂಬಲ ಸೂಚಿಸಿ ಬರೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿದ್ದರು. ಬಳಿಕ ಇವರನ್ನು ಬೇಲ್‌ ಮೂಲಕ ಬಿಡುಗಡೆಗೊಳಿಸಲಾಗಿತ್ತು. ಈ ಪ್ರಕರಣದಲ್ಲಿಯೂ ಶಾರೀಕ್‌ ಮುಖ್ಯ ಆರೋಪಿಯಾಗಿದ್ದ ಎಂದು ವರದಿಗಳು ತಿಳಿಸಿವೆ.

ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿ ಶಾರೀಕ್ ಐಇಡಿಯನ್ನು ನಿರ್ದಿಷ್ಟ ಗುರಿಯೊಂದಿಗೆ ಅಳವಡಿಸಲು ಉದ್ದೇಶಿಸಿದ್ದ. ಆದರೆ ಆಟೋ ರಿಕ್ಷಾದಲ್ಲೇ ಸ್ಫೋಟಗೊಂಡಿದೆ. ವಿಧಿವಿಜ್ಞಾನ ತಂಡ ತನಿಖೆ ಪ್ರಾರಂಭಿಸಿದ್ದು, ಪ್ರೆಷರ್ ಕುಕ್ಕರ್ ನ ಒಳಗೆ ಸರ್ಕ್ಯೂಟ್ ಮತ್ತು ಟೈಮರ್ ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

"ಈಗಾಗಲೇ ರಾಷ್ಟ್ರೀಯ ತನಿಖಾ ದಳ ಹಾಗೂ ತನಿಖಾ ದಳ ಸ್ಥಳಕ್ಕೆ ತೆರಳಿದ್ದು, ಕರ್ನಾಟಕ ಪೊಲೀಸರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿಯು ಆಸ್ಪತ್ರೆಯಲ್ಲಿದ್ದು, ನಂತರ ಆ ವ್ಯಕ್ತಿಯಿಂದ ಮಾಹಿತಿ ಪಡೆಯಲಾಗುವುದು. ಆ ವ್ಯಕ್ತಿಯು ಕೊಯಂಬತ್ತೂರು ಸೇರಿದಂತೆ ಹತ್ತು ಹಲವಾರು ಸ್ಥಳಗಳಲ್ಲಿ ಓಡಾಡಿದ್ದು, ವ್ಯಕ್ತಿಗೆ ಭಯೋತ್ಪಾದನೆಯ ಸಂಪರ್ಕವಿದ್ದು, ಇದು ಒಂದು ಭಯೋತ್ಪಾದಕ ಘಟನೆ ಇರಬಹುದು ಎಂಬು ಮೇಲ್ನೋಟಕ್ಕೆ ಕಂಡುಬರುತ್ತಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಪಿಎಫ್ಐಗೂ, ಈ ಘಟನೆಗೂ ಸಂಬಂಧ ಇರುವ ಬಗ್ಗೆ ಮಾಹಿತಿಯೂ ತನಿಖೆಯ ನಂತರ ತಿಳಿಯಲಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

IPL_Entry_Point