Mangaluru News: ಕಳವು ಕೇಸ್ ದಾಖಲಾದ ಮೂರೇ ಗಂಟೆಯೊಳಗೆ ಅರೆಸ್ಟ್: ಮಂಗಳೂರು ಸಿಟಿ ಪೊಲೀಸರ ಕಾರ್ಯಾಚರಣೆ
ಮಂಗಳೂರಿನ ಅತ್ತಾವರದ ಬ್ರಿಜೇಶ್ ಅಪಾರ್ಟ್ ಮೆಂಟ್ ನ ಮನೆಯಲ್ಲಿ ಕಳ್ಳತನ ನಡೆಸಿ ದೆಹಲಿಗೆ ಪರಾರಿಯಾಗಲು ಯತ್ನಿಸಿದ್ದ ದೆಹಲಿ ಮತ್ತು ಪಶ್ಚಿಮ ಬಂಗಾಳ ಮೂಲದ ಆರೋಪಿಗಳನ್ನು ಪ್ರಕರಣ ದಾಖಲಾದ ಮೂರು ಗಂಟೆಯ ಒಳಗಡೆ ಬಂಧನ ಮಾಡಲಾಗಿದೆ. ಬಂಧಿತರಿಂದ ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು: ಭಾರೀ ಕಳ್ಳತನ ಮಾಡಿ ಬೀಚ್ ಬಳಿ ಸುತ್ತಲು ಹೋದ ಕಳ್ಳರು ದುಷ್ಕೃತ್ಯ ನಡೆಸಿದ ಮೂರೇ ಗಂಟೆಯಲ್ಲಿ ಸಿಕ್ಕಿಬಿದ್ದಿದ್ದಾರೆ !
ದೂರು ಕೊಟ್ಟು ವರ್ಷಾನುಗಟ್ಟಲೇ ಬಳಿಕವೂ ಮನೆ, ಅಂಗಡಿಗಳಲ್ಲಿ ಕಳವಾದ ಸ್ವತ್ತುಗಳು ಸಿಗಲು ಪರದಾಟ ನಡೆಸಬೇಕಾದ ಘಟನೆಗಳು ಹಲವು. ಆದರೆ ಮಂಗಳೂರು ಸಿಟಿ ಪೊಲೀಸರು ಕಳವು ನಡೆದ ಕುರಿತು ದೂರು ನೀಡಿದ ಮೂರು ಗಂಟೆಯೊಳಗೇ ಆಪಾದಿತರನ್ನು ಹಿಡಿದು ಹೆಡೆಮುರಿ ಕಟ್ಟಿಹಾಕಿದ ಘಟನೆ ಇದು.
ಮಂಗಳೂರಿನ ಅತ್ತಾವರದ ಬ್ರಿಜೇಶ್ ಅಪಾರ್ಟ್ ಮೆಂಟ್ ನ ಮನೆಯಲ್ಲಿ ಕಳ್ಳತನ ನಡೆಸಿ ದೆಹಲಿಗೆ ಪರಾರಿಯಾಗಲು ಯತ್ನಿಸಿದ್ದ ದೆಹಲಿ ಮತ್ತು ಪಶ್ಚಿಮ ಬಂಗಾಳ ಮೂಲದ ಆರೋಪಿಗಳನ್ನು ಪ್ರಕರಣ ದಾಖಲಾದ ಮೂರು ಗಂಟೆಯ ಒಳಗಡೆ ಬಂಧನ ಮಾಡಲಾಗಿದೆ. ಬಂಧಿತರಿಂದ ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೇಗೆ ಕಾರ್ಯಾಚರಣೆ
ಪಶ್ಚಿಮ ದೆಹಲಿಯ ಜಹಂಗೀರ ಪುರಿ ಉತ್ತರದ ಕುಶಲ್ ಸಿನಿಮಾ ಹಾಲ್ ಹತ್ತಿರದ ನಿವಾಸಿ ಮೊಹಮ್ಮದ್ ಅಶೀಪ್ ಯಾನೆ ಆಶೀಷ್ (23) ಪಶ್ಚಿಮ ದೆಹಲಿಯ ಜಹಂಗೀರ ಪುರಿ ಉತ್ತರದ ನಗ ನಿಗಮ್ ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರದ ನಿವಾಸಿ ಶೇಕ್ ಮೈದುಲ್ (25) ಪಶ್ಚಿಮ ದೆಹಲಿಯ ಜಹಾಂಗೀರ ಪುರಿಯ ಕುಶಾಲ್ ಚೌಕ್ ಹತ್ತಿರದ ನಿವಾಸಿ ವಕೀಲ್ ಅಹಮ್ಮದ್ (34) ಪಶ್ಚಿಮ ಬಂಗಾಲದ ಮೈದನಾಪುರ ಜಿಲ್ಲೆಯ ನಂದಿಗ್ರಾಮ ಪೂರ್ವದ ಜಲಪಾಯಿ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ ದ ನಿವಾಸಿ ರಫೀಕ್ ಖಾನ್ (24) ಬಂಧಿತ ಆರೋಪಿಗಳು.
ಇವರು ಜೂನ್ 15 ರ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಬ್ರಿಜೇಶ್ ಅಪಾರ್ಟ್ ಮೆಂಟ್ ನ ಮನೆಯ ಎದುರು ಬಾಗಿಲುಗಳನ್ನು ಮುರಿದು ಕಪಾಟಿನಲ್ಲಿದ್ದ ವಿವಿಧ ನಮೂನೆಯ ಚಿನ್ನಾಭರಣ ನಗದು ಹಣ ಸೇರಿ ರೂ 4,45,000 ಮೌಲ್ಯದ ಸ್ವತ್ತುಗಳನ್ನು ಕಳವು ಮಾಡುತ್ತಾರೆ. ಈ ಬಗ್ಗೆ ವಿಜಯಪುರ ಜಿಲ್ಲೆಯ ಪೂಜಾ ಎಂಬವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಅದರಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಕಾರ್ಯಾಚರಣೆ ಆರಂಭಗೊಳ್ಳುತ್ತದೆ.
ಎಲ್ಲಿದ್ದರು ಕಳ್ಳರು?
ಸಾಮಾನ್ಯವಾಗಿ ಕಳವು ನಡೆಸಿದ ವ್ಯಕ್ತಿ ಕೂಡಲೇ ಊರು ಬಿಟ್ಟು ಹೋಗುತ್ತಾನೆ ಅಥವಾ ತಣ್ಣಗೆ ಅಲ್ಲೇ ಸುಳಿದಾಡಿಕೊಂಡು ಇರುತ್ತಾನೆ. ಹೊರರಾಜ್ಯ, ಜಿಲ್ಲೆಯವರಾದರೆ, ಟೂರಿಸ್ಟ್ ಜಾಗಗಳಲ್ಲಿ ಅಲೆದಾಡಿಕೊಂಡಿರುತ್ತಾರೆ. ಈ ಘಟನೆಯಲ್ಲೂ ಹಾಗೆಯೇ ಆಯಿತು.ಅದೇ ದಿನ ಸಂಜೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಮನೋಹರ್ ಪ್ರಸಾದ್ ಹಾಗೂ ಪೊಲೀಸ್ ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರ ಹಾಗೂ ಅಪರಾಧ ಪತ್ತೆ ಸಿಬ್ಬಂದಿ ಮಂಗಳೂರು ನಗರದ ಪಣಂಬೂರು ಬೀಚ್ ಬಳಿ ಸಂಶಯಾಸ್ಪದ ರೀತಿಯಲ್ಲಿದ್ದ ನಾಲ್ವರು ಯುವಕರನ್ನು ವಶಕ್ಕೆ ಪಡೆಯುತ್ತಾರೆ. ಠಾಣೆಗೆ ಕರೆತಂದು ಪೊಲೀಸ್ ನಿರೀಕ್ಷಕರಾದ ಮಂಜುನಾಥ ಎಂ ಮುಂದೆ ಹಾಜರುಪಡಿಸಿ ಕೂಲಂಕುಷವಾಗಿ ವಿಚಾರಿಸಿದಾಗ ಅವರು ನಗರದ ಅತ್ತಾವರದಲ್ಲಿರುವ ಬ್ರಿಜೇಶ್ ಅಪಾರ್ಟ್ ಮೆಂಟ್ ನ ಎರಡು ಮನೆಗಳ ಬೀಗ ಮುರಿದು ಕಳವು ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.
ಕಳವು ಆದ ಚಿನ್ನಾಭರಣ, ನಗದು ಹಣ ಹಾಗೂ ಕೃತ್ಯ ನಡೆಸಲು ಉಪಯೋಗಿಸಿದ ಆಯುಧಗಳಾದ 2 ಕಟ್ಟರ್ ಹಾಗೂ 2 ಸ್ಕ್ರೂ ಡ್ರೈವರ್ ಮತ್ತು 1 ಚೂಪಾದ ಕಬ್ಬಿಣದ ರಾಡ್ ಹಾಗೂ 7 ಮೊಬೈಲ್ ಫೋನುಗಳನ್ನು ವಶಪಡಿಸಲಾಗಿದೆ.
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಎಂ. ಪೊಲೀಸ್ ಉಪನೀಕ್ಷಕರುಗಳಾದ ಮನೋಹರ್ ಪ್ರಸಾದ್ ಪಿ, ಅನಂತ ಮುರ್ಡೇಶ್ವರ್, ಶೀತಲ್ ಅಲಗೂರು ಜ್ಯೋತಿ ಜಿ. ಹಾಗೂ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಪ್ರಕಾಶ್ ನಾಯ್ಕ ವಿ, ಲಕ್ಷ್ಮಣ ಸಾಲೋಟಗಿ, ಭಾಸ್ಕರ್ ಹಾಲಾಡಿ, ಸ್ವಾಮಿ ಎಸ್, ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.
ಸಿಸಿ ಕ್ಯಾಮರಾ ಇಲ್ಲದಿರುವ ಮನೆ ಟಾರ್ಗೆಟ್
ಆರೋಪಿಗಳು ದೆಹಲಿ ಹಾಗೂ ಪಶ್ಚಿಮ ಬಂಗಾಳ ಮೂಲದವರಾಗಿದ್ದು ತನಿಖೆಯ ವೇಳೆ ಮಧ್ಯಾಹ್ನ 1ರಿಂದ 3 ಗಂಟೆಯ ಅವಧಿಯಲ್ಲಿ ಸಿ ಸಿ ಕ್ಯಾಮರಾ ಇಲ್ಲದೇ ಇರುವ ಬೀಗ ಹಾಕಿರುವ ಮನೆ ಹಾಗೂ ಅಪಾರ್ಟಮೆಂಟ್ ಗಳನ್ನು ಗುರಿಯಾಗಿಸಿಕೊಂಡು ಕಳವು ನಡೆಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿರಿ..
ವಿಭಾಗ