ಮಂಗಳೂರಿನಲ್ಲೊಂದು ಅಮಾನವೀಯ ಘಟನೆ; ವೃದ್ಧ ಮಾವನಿಗೆ ಥಳಿಸಿದ ಸೊಸೆ, ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ; ವಿಡಿಯೊ ವೈರಲ್‌-mangaluru crime news daughter in law beat up father in law inhuman act in mangalore was captured on cc camera hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರಿನಲ್ಲೊಂದು ಅಮಾನವೀಯ ಘಟನೆ; ವೃದ್ಧ ಮಾವನಿಗೆ ಥಳಿಸಿದ ಸೊಸೆ, ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ; ವಿಡಿಯೊ ವೈರಲ್‌

ಮಂಗಳೂರಿನಲ್ಲೊಂದು ಅಮಾನವೀಯ ಘಟನೆ; ವೃದ್ಧ ಮಾವನಿಗೆ ಥಳಿಸಿದ ಸೊಸೆ, ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ; ವಿಡಿಯೊ ವೈರಲ್‌

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಮನೆಯವರೇ ಹೊಡೆದು, ಬಡಿದು ಹಿಂಸೆ ನೀಡುವ ಘಟನೆಗಳು ಹೆಚ್ಚುತ್ತಿವೆ. ಇದೀಗ ಸೊಸೆಯೊಬ್ಬಳು ವೃದ್ಧ ಮಾವನಿಗೆ ವಾಕಿಂಗ್‌ ಸ್ಟಿಕ್ಟ್‌ನಿಂದ ಹೊಡೆದು, ಹಿಂಸಿಸಿದ ವಿಡಿಯೊವೊಂದು ವೈರಲ್‌ ಆಗಿದೆ. ಮಂಗಳೂರಿನಲ್ಲಿ ನಡೆದ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಮಂಗಳೂರಿನಲ್ಲೊಂದು ಅಮಾನವೀಯ ಘಟನೆ; ವೃದ್ಧ ಮಾವನಿಗೆ ಥಳಿಸಿದ ಸೊಸೆ
ಮಂಗಳೂರಿನಲ್ಲೊಂದು ಅಮಾನವೀಯ ಘಟನೆ; ವೃದ್ಧ ಮಾವನಿಗೆ ಥಳಿಸಿದ ಸೊಸೆ

ಮಂಗಳೂರು: ಇತ್ತೀಚೆಗಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ಹೆತ್ತ ತಾಯಿಯೇ ಮಗುವಿಗೆ ಹೊಡೆದು ಬಡಿದು ಹಿಂಸೆ ನೀಡಿರುವ ಘಟನೆ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯ ನೆನಪು ಮಾಸುವ ಮುನ್ನವೇ ಇದೀಗ ಸೊಸೆಯೊಬ್ಬಳು ವಯಸ್ಸಾದ ಮಾವನಿಗೆ ಹಿಗ್ಗಾಮುಗ್ಗಾ ಹೊಡೆದು ಹಿಂಸೆ ನೀಡಿರುವ ದೃಶ್ಯಗಳು ವೈರಲ್‌ ಆಗಿದೆ. ಈ ಘಟನೆ ನಡೆದಿರುವುದು ಮಂಗಳೂರಿನಲ್ಲಿ. ಆಕೆ ಹೊಡೆದಿರುವುದು ಮಾತ್ರವಲ್ಲ, ವಯಸ್ಸಾದ ಮಾವನನ್ನು ನೆಲಕ್ಕೆ ತಳ್ಳಿ ನೋವು ನೀಡಿದ್ದಾಳೆ. 

ವಯೋವೃದ್ಧ ಮಾವನಿಗೆ ಸೊಸೆ ಅಮಾನವೀಯವಾಗಿ ಥಳಿಸಿರುವ ರಾಕ್ಷಸೀ ಕೃತ್ಯ ಮಂಗಳೂರಿನ ಕುಲಶೇಖರದಲ್ಲಿ ಬೆಳಕಿಗೆ ಬಂದಿದೆ. ಇದೀಗ ಆರೋಪಿ ಸೊಸೆಯನ್ನು ಬಂಧಿಸಲಾಗಿದೆ.

ಪದ್ಮನಾಭ ಸುವರ್ಣ (87) ಸೊಸೆಯಿಂದಲೇ ಥಳಿತಕ್ಕೊಳಗಾದವರು. ಉಮಾಶಂಕರಿ ಎಂಬಾಕೆಯೇ ಮಾವನಿಗೆ ಮನಸೋ ಇಚ್ಛೆ ಥಳಿಸಿದ ಸೊಸೆ.

ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಸಿಬ್ಬಂದಿಯಾಗಿರುವ ಉಮಾಶಂಕರಿ ಮಾವನಿಗೆ ವಾಕಿಂಗ್ ಸ್ಟಿಕ್‌ನಿಂದ ಥಳಿಸಿದ್ದಾಳೆ. ಪದ್ಮನಾಭ ಸುವರ್ಣ ಅವರು ಹೊಡೆಯದಿರುವಂತೆ ತಡೆಯಲು ಬಂದಾಗ ಅವರನ್ನು ತಳ್ಳಿದ್ದಾಳೆ. ಪರಿಣಾಮ ಪದ್ಮನಾಭ ಸುವರ್ಣ ಅವರು, ಸೋಫಾದ ಮೇಲೆಯೇ ಬಿದ್ದು ನೋವಿನಿಂದ ಅಳುತ್ತಿರುವ ಧ್ವನಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಮಾಶಂಕರಿ ಪತಿ ಪ್ರೀತಂ ಸುವರ್ಣ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಅವರು ವಿದೇಶದಲ್ಲಿದ್ದುಕೊಂಡೇ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಸೊಸೆಯ ರಾಕ್ಷಸಿ ಕೃತ್ಯ ಬೆಳಕಿಗೆ ಬಂದಿದೆ. ಈ ಘಟನೆ ಮಾರ್ಚ್ 9ರಂದು ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಸದ್ಯ ಗಾಯಾಳು ಪದ್ಮನಾಭ ಸುವರ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪತಿ ಪ್ರೀತಂ ಸುವರ್ಣರ ಸೂಚನೆಯನ್ವಯ ಪದ್ಮನಾಭ ಸುವರ್ಣರ ಪುತ್ರಿ ಪ್ರಿಯಾ ಸುವರ್ಣ ದೂರು ನೀಡಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಈ ವಿಡಿಯೊ ಇದೀಗ ಸಾಕಷ್ಟು ವೈರಲ್‌ ಆಗಿದ್ದು, ಎಲ್ಲೆಡೆ ಆಕ್ರೋಶ್‌ ವ್ಯಕ್ತವಾಗುತ್ತಿದೆ. ಅಲ್ಲದೇ ಆರೋಪಿ ಕಠಿಣ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.