ಬಂಟ್ವಾಳ ತಾಲೂಕು ಕಾಂಬೋಡಿಯ ಇರಾಕೋಡಿಯಲ್ಲಿ ಪಿಕಪ್ ಚಾಲಕನ ಬರ್ಬರ ಹತ್ಯೆ, ಜತೆಗಿದ್ದಾತನ ಮೇಲೂ ದಾಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಬಂಟ್ವಾಳ ತಾಲೂಕು ಕಾಂಬೋಡಿಯ ಇರಾಕೋಡಿಯಲ್ಲಿ ಪಿಕಪ್ ಚಾಲಕನ ಬರ್ಬರ ಹತ್ಯೆ, ಜತೆಗಿದ್ದಾತನ ಮೇಲೂ ದಾಳಿ

ಬಂಟ್ವಾಳ ತಾಲೂಕು ಕಾಂಬೋಡಿಯ ಇರಾಕೋಡಿಯಲ್ಲಿ ಪಿಕಪ್ ಚಾಲಕನ ಬರ್ಬರ ಹತ್ಯೆ, ಜತೆಗಿದ್ದಾತನ ಮೇಲೂ ದಾಳಿ

ಬಂಟ್ವಾಳ ತಾಲೂಕು ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಮಂಗಳವಾರ ಅಪರಾಹ್ನ ಪಿಕಪ್ ಚಾಲಕನ ಬರ್ಬರ ಹತ್ಯೆ ನಡೆದಿದೆ. ಆತನ ಜತೆಗಿದ್ದವನ ಮೇಲೂ ದಾಳಿಯಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಬಂಟ್ವಾಳ ತಾಲೂಕು ಕಾಂಬೋಡಿಯ ಇರಾಕೋಡಿಯಲ್ಲಿ ಪಿಕಪ್ ಚಾಲಕನ ಬರ್ಬರ ಹತ್ಯೆ ನಡೆದಿದೆ.
ಬಂಟ್ವಾಳ ತಾಲೂಕು ಕಾಂಬೋಡಿಯ ಇರಾಕೋಡಿಯಲ್ಲಿ ಪಿಕಪ್ ಚಾಲಕನ ಬರ್ಬರ ಹತ್ಯೆ ನಡೆದಿದೆ.

ಮಂಗಳೂರು: ಪಿಕಪ್ ಚಾಲಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಮಂಗಳವಾರ (ಮೇ 27) ಮಧ್ಯಾಹ್ನ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಿಂದೀಚೆಗೆ ಎರಡು ಹತ್ಯೆ ಪ್ರಕರಣಗಳು ನಡೆದಿದ್ದು, ಇದೀಗ ಕುರಿಯಾಳ ಸಮೀಪ ನಡೆದದ್ದು ಮೂರನೇ ಪ್ರಕರಣ. ಹತ್ಯೆಗೆ ಕಾರಣವೇನು ಎಂಬುದು ಗೊತ್ತಾಗಿಲ್ಲ.

ಬಂಟ್ವಾಳ ತಾಲೂಕು ಕೊಳತ್ತಮಜಲು ನಿವಾಸಿ ಪಿಕಪ್ ಚಾಲಕನ ಹನೀಫ ಎಂಬಾತನ ಸಹೋದರ ರಹೀಂ ಸಾವಿಗೀಡಾದ ವ್ಯಕ್ತಿ. ಈತ ಇರಾಕೋಡಿ ಎಂಬಲ್ಲಿ ಮರಳು ಅನ್ ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಪರಾರಿಯಾಗಿದ್ದಾರೆ. ರಹೀಮ್ ಜೊತೆ ಇನ್ನೊಬ್ಬ ಶಾಫಿ ಎಂಬಾತನೂ ಇದ್ದು ಆತನ ಮೇಲೆಯೂ ದಾಳಿ ಮಾಡಲಾಗಿದೆ. ಆತನಿಗೆ ಕೈಗೆ ಗಾಯ ವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಬೇಟಿ ನೀಡಿದ್ದು, ಉನ್ನತ ಅಧಿಕಾರಿಗಳೂ ಧಾವಿಸಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.