ಮಂಗಳೂರು: AI ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ BE6 ಟೆಸ್ಟ್‌ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: Ai ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ Be6 ಟೆಸ್ಟ್‌ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು

ಮಂಗಳೂರು: AI ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ BE6 ಟೆಸ್ಟ್‌ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು

Mahindra BE6 Test Drive: ಸ್ಪರ್ಧಾತ್ಮಕ ದರದಲ್ಲಿ ಗರಿಷ್ಠ ಐಷಾರಾಮಿ ಫೀಚರ್ಸ್‌ ಹೊಂದಿರುವ ಮಹೀಂದ್ರಾ BE6 ಕಾರಿಗೆ ಗ್ರಾಹಕರು ಫಿದಾ ಆಗುತ್ತಿರುವುದು ಕಂಡುಬಂದಿದೆ. ಮಂಗಳೂರಿನ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು BE6 ಟೆಸ್ಟ್ ಡ್ರೈವ್ ಅನುಭವ ಹಂಚಿಕೊಂಡಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರಿನ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು ಅವರು ಮಹೀಂದ್ರಾ BE6 ಟೆಸ್ಟ್ ಡ್ರೈವ್ ಅನುಭವ ಹಂಚಿಕೊಂಡಿದ್ದಾರೆ.
ಮಂಗಳೂರಿನ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು ಅವರು ಮಹೀಂದ್ರಾ BE6 ಟೆಸ್ಟ್ ಡ್ರೈವ್ ಅನುಭವ ಹಂಚಿಕೊಂಡಿದ್ದಾರೆ.

Mahindra BE6 Test Drive: ಮಹೀಂದ್ರಾದ ಹೊಸ ವಿದ್ಯುಚ್ಚಾಲಿತ ವಾಹನ BE 6, X EV 9 ಮಾರುಕಟ್ಟೆಗೆ ಬರುವ ಮೊದಲೇ ದೊಡ್ಡ ಕ್ರೇಝ್ ಸೃಷ್ಟಿಸಿದೆ. AI ಆಧಾರಿತ 80ಕ್ಕೂ ಅಧಿಕ ಫೀಚರ್‌ಗಳು, ಸ್ಪರ್ಧಾತ್ಮಕ ದರ, ಭಾರತದಲ್ಲೇ ಡಿಸೈನ್ ಆಗಿರುವ ಮೇಕ್ ಇನ್ ಇಂಡಿಯಾ ಫೀಲಿಂಗ್…

ಮಹೀಂದ್ರಾ ವಾಹನಗಳ ಕಟ್ಟಾಭಿಮಾನಿ ಮಂಗಳೂರಿನ ದಂತವೈದ್ಯ ಡಾ. ಮುರಲೀ ಮೋಹನ ಚೂಂತಾರು ಈ ವಾಹನವನ್ನು ಈಗಾಗಲೇ ಬುಕ್ ಮಾಡಿದ್ದು, ಟೆಸ್ಟ್ ಡ್ರೈವ್ ಹೋಗಿಬಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಆನಂದ ಮಹೀಂದ್ರಾ ಕಟ್ಟಾಭಿಮಾನಿ; 20 ವರ್ಷಗಳಿಂದ ಮಹೀಂದ್ರಾ ಗ್ರಾಹಕ

ನಾನು ಆನಂದ ಮಹೀಂದ್ರಾ ಅವರ ಕಟ್ಟಾಭಿಮಾನಿ. ಅವರು ಮಹೀಂದ್ರಾ ವಾಹನಗಳನ್ನು ವಿನ್ಯಾಸಗೊಳಿಸುವ ವಿಧಾನ ಹಾಗೂ ಜನರ ಹಾಗೂ ಗ್ರಾಹಕರ ಅಪೇಕ್ಷೆ ಹಾಗೂ ಸೂಚನೆಗಳನ್ನು ಸ್ವೀಕರಿಸುವ ಮೂಲಕ ಹೊಸ ವಾಹನಗಳನ್ನು ಹಾಗೂ ಪ್ರಾಡಕ್ಟ್ ಗಳನ್ನು ಹೊರತರುವ ವೈಖರಿಗೆ ನಾನು ಫಿದಾ ಆಗಿದ್ದೇನೆ ಎಂದು ಡಾ. ಮುರಲೀ ಮೋಹನ ಚೂಂತಾರು ಹೇಳಿಕೊಂಡಿದ್ದಾರೆ.

ಕಳೆದ 20 ವರ್ಷಗಳಿಂದ ನಾನು ಮಹೀಂದ್ರಾ ವಾಹನಗಳನ್ನೇ ಉಪಯೋಗಿಸುತ್ತಿದ್ದು, ಸರಿಸುಮಾರು 5 ಲಕ್ಷ ಕಿಲೋಮೀಟರ್ ಚಾಲನೆ ಮಾಡಿದ್ದೇನೆ. ಅವುಗಳಲ್ಲಿ Scorpio CRDE, Scorpio MHAWK, XUV 500,THAR ವಾಹನಗಳು ಸೇರಿವೆ.

ಮಹೀಂದ್ರಾದ BE 6 ಮತ್ತು X EV 9 ಟೆಸ್ಟ್ ಡ್ರೈವ್

ಈ ಹಿನ್ನೆಲೆಯಲ್ಲಿ ನನಗೆ ಮಹೀಂದ್ರಾದ ಹೊಸ ವಿದ್ಯುಚ್ಚಾಲಿತ ವಾಹನ BE 6 ಮತ್ತು X EV 9 ಚಲಾಯಿಸುವ ಅವಕಾಶ ದೊರಕಿತು. ಮಂಗಳೂರಿನಿಂದ ಹಟ್ಟಿಯಂಗಡಿಯವರೆಗೆ ಹೋಗಿ ಅಲ್ಲಿ ವಿನಾಯಕನ ದರ್ಶನ ಪಡೆದು, ಅಲ್ಲಿಂದ ಮಂಗಳೂರಿಗೆ ಮರಳುವವರೆಗೆ ನನಗೆ ಈ ವಾಹನ ಬೆನ್ಝ್ ಕಾರಿನಲ್ಲಿ ಸಂಚರಿಸಿದ ಅನುಭವ ನೀಡಿತು. ಸುಮಾರು 200 ಕಿ.ಮೀ ನಾನು ಟೆಸ್ಟ್ ಡ್ರೈವ್ ಮಾಡಿದ್ದು, ಇದರಲ್ಲಿ ಅಡಕವಾಗಿರುವ ಹೊಸ ಫೀಚರ್ ಗಳಿಗೆ ಮಾರುಹೋಗಿದ್ದೇನೆ. ಯಾವಾಗ ವಾಹನ ಹೊರಬರುತ್ತದೆ ಎಂದು ಕಾಯುವಷ್ಟರ ಮಟ್ಟಿಗೆ ಈ ವಾಹನ ಕ್ರೇಝ್ ಹುಟ್ಟಿಸಿದೆ.ಸುಮಾರು 80ಕ್ಕೂ ಅಧಿಕ ಫೀಚರ್ ಗಳು ಇದರಲ್ಲಿವೆ. ಅದರಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ MAIA ಅದ್ಭುತವಾಗಿದೆ ಎನ್ನುತ್ತಾರೆ ಡಾ. ಚೂಂತಾರು.

INGLO ಪ್ಲಾಟ್ ಫಾರ್ಮ್: ಮಹೀಂದ್ರಾ ಇವಿ ವಾಹನಗಳು ಭಾರತೀಯ ಮೂಲದ ಗ್ಲೋಬಲ್ ಎಕ್ಸೆಲೆನ್ಸ್ (ಐಎನ್ ಜಿಎಲ್ ಒ) ಪ್ಲಾಟ್ ಫಾರ್ಮ್ ಮೂಲಕ ಮಾಡಲಾಗಿದೆ. ಬ್ರೇಕ್ ಬೈ ವೈರ್ ತಂತ್ರಜ್ಞಾನ ಸಹಿತ ಹಲವು ಸ್ಮಾರ್ಟ್ ಫೀಚರ್ ಗಳು ಇದರಲ್ಲಿವೆ.

ಕಳೆದ ಎಂಟು ವರ್ಷಗಳಲ್ಲಿ ನನ್ನ ಬಳಿ Mercedes Benz E class ವಾಹನವಿದೆ. ಈ ವಾಹನವನ್ನೂ BE 6 ಅನ್ನೂ ಹತ್ತಿರವಿಟ್ಟರೆ, ಮಹೀಂದ್ರಾ BE6 ಸೂಜಿಗಲ್ಲಿನಂತೆ ಸೆಳೆಯುತ್ತದೆ ಎಂದು ಮಂಗಳೂರಿನ ಡಾ ಮುರಲೀ ಮೋಹನ ಚೂಂತಾರು ಹೇಳಿಕೊಂಡಿದ್ಧಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner