ಕನ್ನಡ ಸುದ್ದಿ  /  Karnataka  /  Mangaluru News 12k Ltr Diesel Stolen From Petronet Mhb Ltd Mangalore Bangalore Petroleum Pipe Line Nr Puduvettu Hsm

Mangaluru Crime: ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನ; 12 ಸಾವಿರ ಲೀಟರ್ ಡೀಸೆಲ್ ಕಳವು

ಧರ್ಮಸ್ಥಳ - ಪುದುವೆಟ್ಟು ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನಕೊರೆದು 12 ಸಾವಿರ ಲೀಟರ್ ಡೀಸೆಲ್ ಕಳವು ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದರ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನಕೊರೆದು 12 ಸಾವಿರ ಲೀಟರ್ ಡೀಸೆಲ್ ಕಳವು ಮಾಡಲಾಗಿದೆ ಎಂದು ಹೇಳಲಾದ ಸ್ಥಳ (ಎಡ ಚಿತ್ರ). ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಪೆಟ್ರೋಲಿಯಂ ಘಟಕ (ಬಲ ಚಿತ್ರ).
ಧರ್ಮಸ್ಥಳ ಸಮೀಪ ಪೆಟ್ರೋನೆಟ್‌ ಎಂಎಚ್‌ಬಿ ಪೈಪ್‌ಲೈನ್‌ಗೆ ಕನ್ನಕೊರೆದು 12 ಸಾವಿರ ಲೀಟರ್ ಡೀಸೆಲ್ ಕಳವು ಮಾಡಲಾಗಿದೆ ಎಂದು ಹೇಳಲಾದ ಸ್ಥಳ (ಎಡ ಚಿತ್ರ). ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಪೆಟ್ರೋಲಿಯಂ ಘಟಕ (ಬಲ ಚಿತ್ರ).

ಮಂಗಳೂರು: ಪುದುವೆಟ್ಟುವಿನಲ್ಲಿ ಪೆಟ್ರೋಲಿಯಂ ಪೈಫ್ ಲೈನ್ ಗೆ ಕನ್ನ ಕೊರೆದು ಲಕ್ಷಾಂತರ ಮೌಲ್ಯದ ಡೀಸೆಲ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ಕಂಪೆನಿಯವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪೆಟ್ರೋನೆಟ್ ಎಂ ಹೆಚ್ ಬಿ ಲಿಮಿಟೆಡ್ ನ ನೆರಿಯದ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳೂರು ಹಾಸನ ಬೆಂಗಳೂರು ಪೆಟ್ರೋನೆಟ್ ಪೈಪ್ ಮೂಲಕ ಪೆಟ್ರೋಲಿಯಂ ವಸ್ತುಗಳು ಸಾಗಾಟವಾಗುತ್ತಿದ್ದು ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ಘಟನೆ ನಡೆದಿದೆ.

ಸ್ಥಳೀಯರ ಸಹಕಾರದೊಂದಿಗೆ ದೊಡ್ಡ ಮಟ್ಟದ ಡೀಸೆಲ್‌ ಕಳ್ಖತನ ನಡೆದಿದೆ ಎಂದು ಅನುಮಾನಿಸಲಾಗಿದೆ‌. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ಕುರಿತು ಕೇರಳ ಆಲಪ್ಪುಳ ಜಿಲ್ಲೆ ಮಾವೇಲಿಕ್ಕರ ಗ್ರಾಮದ ರಾಜನ್‌ ಜಿ ಎಂಬವರ ದೂರಿನಂತೆ ಪ್ರಕರಣ ದಾಖಲಾಗಿದೆ. ಅವರು ಪೆಟ್ರೊನೆಟ್‌ ಎಮ್‌ ಹೆಚ್‌ ಬಿ ಲಿಮಿಟೆಡ್‌ ನೆರಿಯಾದ ಸ್ಟೇಶನ್‌ ಇನ್‌ಚಾರ್ಜ್‌ ಆಗಿದ್ದಾರೆ.

ಪೆಟ್ರೋನೆಟ್ ಎಂಎಚ್‌ಬಿ ಕಂಪನಿ ನೀಡಿರುವ ದೂರಿನಲ್ಲಿ ಏನಿದೆ

ಮಂಗಳೂರು ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್‌ ಪೈಪ್‌ ಮೂಲಕ ಡಿಸೇಲ್‌ ಸರಬರಾಜು ಆಗುತ್ತಿದೆ. ಈ ನಡುವೆ, ಮಾರ್ಚ್ 16 ರಾತ್ರಿಯಿಂದ ಮಾ.19 ರಂದು ರಾತ್ರಿಯ ಮಧ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿಂದ ಹಾದು ಹೋಗುವ ಡಿಸೇಲ್‌ ಪೈಪ್‌ ಲೈನ್‌ ಕೊರೆದು ಡೀಸೆಲ್ ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಪೆಟ್ರೋನೆಟ್ ಎಂಎಚ್‌ಬಿ ಕಂಪನಿ ಪರವಾಗಿ ರಾಜನ್ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಎರಡೂವರೆ ಇಂಚು ಅಗಲದ ಹೆಚ್‌ಡಿಪಿಇ ಪೈಪ್‌ಗೆ ರಂಧ್ರ ಕೊರೆದು ಡೀಸೆಲ್ ಕಳವು ಮಾಡಲಾಗಿದೆ. ಅಂದಾಜು 12,000 ಲೀಟರ್ ಕಳವು ಆಗಿರುವ ಶಂಕೆ ಇದೆ. ಇದರ ಮೌಲ್ಯ 9,60,000 ರೂಪಾಯಿ. ಈ ರೀತಿ ರಂಧ್ರ ಕೊರೆದವರು ಅಪಾಯಕಾರಿ ಎಂಬುದರ ಅರಿವು ಇದ್ದೇ ಮಾಡಿದಂತೆ ಇದೆ. ಬೆಂಕಿ ಅಥವಾ ದಹನಕಾರಿ ವಸ್ತು ಎಂಬ ಅರಿವು ಇದ್ದು ಮಾಡಿರುವ ಕೃತ್ಯವಾದ ಕಾರಣ ಕಳ್ಳರನ್ನು ಪತ್ತೆಹಚ್ಚಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ವಿನಂತಿಸಲಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ ಮತ್ತು ಪೆಟ್ರೋನೆಟ್ ಕಾಯ್ದೆ ಪ್ರಕಾರವೂ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಓದಬಹುದಾದ ಕ್ರಿಕೆಟ್‌ ಸ್ಟೋರಿಗಳು

1) ಬೆಂಗಳೂರಲ್ಲಿ ಮಾ 25, 29, ಏ2 ರಂದು ಐಪಿಎಲ್ ಪಂದ್ಯ; ತಡರಾತ್ರಿಯೂ ಇರಲಿದೆ ನಮ್ಮ ಮೆಟ್ರೋ, ಟಿಕೆಟ್ ದರ, ಸಮಯದ ವಿವರ ಹೀಗಿದೆ

2) ಆರ್‌ಸಿಬಿ vs ಸಿಎಸ್‌ಕೆ; ಐಪಿಎಲ್‌ ರೋಚಕ ಕದನದಲ್ಲಿ ಈ 5 ಆಟಗಾರರತ್ತ ಅಭಿಮಾನಿಗಳ ಚಿತ್ತ

4) ಡಬಲ್ ಸಂಭ್ರಮಕ್ಕಿದೆ ಅವಕಾಶ; ‘ಈ ಸಲ ಕಪ್ ನಮ್ದು’ ಎಂದು ಆರ್​​ಸಿಬಿ ಪುರುಷರ ತಂಡಕ್ಕೆ ಚಿಯರ್​ ಮಾಡಿದ ಎಲ್ಲಿಸ್ ಪೆರ್ರಿ

5) ಸಿಎಸ್‌ಕೆ ನಾಯಕನಾಗಿ ಎಂಎಸ್‌ ಧೋನಿ ಗೆದ್ದ ಆ ಐದು ಕಪ್‌ಗಳು; ಅದೃಷ್ಟದ ನಾಯಕನಿಗೆ ಸರಿಸಾಟಿ ಯಾರು?