ಮಂಗಳೂರು ಬೈಕ್ ಕಾರು ಡಿಕ್ಕಿಯಾಗಿ 20 ವರ್ಷದ ವಿದ್ಯಾರ್ಥಿ ಸಾವು; ವಿಪರೀತ ತಲೆನೋವು ಎಂದು ಮಲಗಿದಲ್ಲೇ ಮೃತಪಟ್ಟ 24 ವರ್ಷದ ದಂತ ವೈದ್ಯೆ-mangaluru news 24 year old dentist swathi shetty died due to severe headache karnataka crime news hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಬೈಕ್ ಕಾರು ಡಿಕ್ಕಿಯಾಗಿ 20 ವರ್ಷದ ವಿದ್ಯಾರ್ಥಿ ಸಾವು; ವಿಪರೀತ ತಲೆನೋವು ಎಂದು ಮಲಗಿದಲ್ಲೇ ಮೃತಪಟ್ಟ 24 ವರ್ಷದ ದಂತ ವೈದ್ಯೆ

ಮಂಗಳೂರು ಬೈಕ್ ಕಾರು ಡಿಕ್ಕಿಯಾಗಿ 20 ವರ್ಷದ ವಿದ್ಯಾರ್ಥಿ ಸಾವು; ವಿಪರೀತ ತಲೆನೋವು ಎಂದು ಮಲಗಿದಲ್ಲೇ ಮೃತಪಟ್ಟ 24 ವರ್ಷದ ದಂತ ವೈದ್ಯೆ

ಮಂಗಳೂರಿನಲ್ಲಿ ಕೆಲಸಕ್ಕೆ ಸೇರಬೇಕಾಗಿದ್ದ 24 ವರ್ಷದ ದಂತವೈದ್ಯೆ ವಿಪರೀತ ತಲೆನೋವು ಎಂದು ಮಲಗಿದಲ್ಲೇ ನಿಗೂಢವಾಗಿ ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೈಕ್ ಕಾರು ಡಿಕ್ಕಿಯಾಗಿ 20 ವರ್ಷದ ವಿದ್ಯಾರ್ಥಿಯ ಸಾವು ಸಂಭವಿಸಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ವಿಪರೀತ ತಲೆ ನೋವು ಎಂದು ಮಲಗಿದಲ್ಲೇ ನಿಗೂಢವಾಗಿ ಮೃತಪಟ್ಟ 24 ವರ್ಷದ ದಂತ ವೈದ್ಯೆ. (ಸಾಂಕೇತಿಕ ಚಿತ್ರ)
ಮಂಗಳೂರು: ವಿಪರೀತ ತಲೆ ನೋವು ಎಂದು ಮಲಗಿದಲ್ಲೇ ನಿಗೂಢವಾಗಿ ಮೃತಪಟ್ಟ 24 ವರ್ಷದ ದಂತ ವೈದ್ಯೆ. (ಸಾಂಕೇತಿಕ ಚಿತ್ರ) (canva)

ಮಂಗಳೂರು: ತಾಯಿ ಬಳಿ ಫೋನ್ ನಲ್ಲಿ ನನಗೆ ವಿಪರೀತ ತಲೆನೋವು ಎಂದು ಹೇಳಿದ್ದ ವೈದ್ಯಕೀಯ ಪದವೀಧರೆ ಸ್ವಾತಿ ಶೆಟ್ಟಿ (24) ಮಂಗಳೂರಿನ ಪಾಂಡೇಶ್ವರದ ಪೇಯಿಂಗ್ ಗೆಸ್ಟ್ ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಆಳ್ವರಬೆಟ್ಟು ನಿವಾಸಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡರೂ ಆಗಿರುವ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಹಾಗೂ ಜ್ಯೋತಿ ಶೆಟ್ಟಿ ದಂಪತಿಯ ಪುತ್ರಿ, ದಂತ ವೈದ್ಯೆ ಸ್ವಾತಿ ಶೆಟ್ಟಿ ಮಂಗಳವಾರ ಸಾವನ್ನಪ್ಪಿದವರು.

ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ, ಮಂಗಳವಾರದಿಂದ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ವೃತ್ತಿಗೆ ದಾಖಲಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರವರೆಗೆ ಆಳ್ವರಬೆಟ್ಟು ಮನೆಯಲ್ಲಿ ತಂಗಿದ್ದರು. ಬಳಿಕ ಸೋಮವಾರ ಸಂಜೆ ಮನೆಯಿಂದ ತೆರಳಿದ್ದರು. ದಂತ ವೈದ್ಯೆಯಾಗಿ ವೃತ್ತಿ ಆರಂಭಿಸುವ ಸಲುವಾಗಿ ಪಾಂಡೇಶ್ವರದ ಪೇಯಿಂಗ್ ಗೆಸ್ಟ್ ಕೊಠಡಿಯೊಂದರಲ್ಲಿ ಸೋಮಾರ ಸಂಜೆಯಿಂದ ಸ್ವಾತಿ ಉಳಿದುಕೊಂಡಿದ್ದರು. ಅದೇ ದಿನ ರಾತ್ರಿ ತಾಯಿ, ತಂದೆ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದರು. ತಾಯಿ ಜೊತೆ ಮಾತನಾಡುವ ವೇಳೆ ವಿಪರೀತ ತಲೆನೋವು ಇದೆ ಎಂದು ಹೇಳಿದ್ದರು. ಕೊಠಡಿಯಲ್ಲಿ ಜೊತೆಗಿರುವ ಸಹಪಾಠಿ ಈಕೆಗೆ ತಲೆನೋವು ಇದೆ ಎಂದು ಎಚ್ಚರಿಸಲಿಲ್ಲ. ಬೆಳಗ್ಗೆ ದೇಹ ತಣ್ಣಗಾಗಿದ್ದನ್ನು ಕಂಡು, ಪಿಜಿ ಸೂಪರ್ ವೈಸರ್ ಕೂಡಲೇ ಆಂಬುಲೆನ್ಸ್ ತರಿಸಿ, ವೆನ್ಲಾಕ್ ಗೆ ದಾಖಲಿಸುವ ಹೊತ್ತಿಗೆ ಸ್ವಾತಿ ಶೆಟ್ಟಿ ಅಸು ನೀಗಿದ್ದರು. ಇದೀಗ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ವಿಶ್ರಾಂತಿಗೆಂದು ಮಲಗಿದ್ದ ಶಾಲಾ ಬಸ್ ಚಾಲಕ ಹೃದಯಾಘಾತದಿಂದ ಸಾವು

ಮಂಗಳೂರಿನ ಕಾಲೇಜೊಂದರ ಸಮೀಪ ವಿಶ್ರಾಂತಿಗೆಂದು ಮಲಗಿದ್ದ ಶಾಲಾ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಡೆದಿದೆ. ಬೆಳ್ತಂಗಡಿಯ ಶಶಿಧರ ಗೌಡ (58) ಸಾವನ್ನಪ್ಪಿದವರು. ವಿಪರೀತ ಸೆಖೆಯ ಹಿನ್ನೆಲೆಯಲ್ಲಿ ಅವರು ಮಧ್ಯಾಹ್ನ ಊಟ ಮುಗಿಸಿ, ಬಸ್ ನಲ್ಲೇ ವಿಶ್ರಾಂತಿಗಾಗಿ ಮಲಗಿದ್ದರು. ಈ ಸಂದರ್ಭ ಅವರು ಸಾವನ್ನಪ್ಪಿದ್ದಾರೆ. ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಯ ಶಾಲಾ ಬಸ್ ಚಾಲಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದ ಅವರು, ಮಂಗಳೂರಿನ ಬೆಸೆಂಟ್ ಕಾಲೇಜಲ್ಲಿ 10ನೇ ತರಗತಿ ಮಕ್ಕಳ ಪರೀಕ್ಷೆ ಮೌಲ್ಯಮಾಪನ ಮಾಡಲು ಶಾಲಾ ಸಂಸ್ಥೆಯ ಶಿಕ್ಷಕರೊಂದಿಗೆ ತಾಲೂಕಿನ ಶಿಕ್ಷಕರನ್ನು ಮಂಗಳೂರಿಗೆ ಕರೆದೊಯ್ದಿದ್ದರು. ಮಧ್ಯಾಹ್ನ ಊಟ ಮುಗಿಸಿ, ಬಸ್ ನಲ್ಲಿ ಮಲಗಿದ್ದ ಸಂದರ್ಭ ಅವರು ಸಾವನ್ನಪ್ಪಿದ್ದಾರೆ. ಸಂಜೆ ಶಿಕ್ಷಕರು ಬಂದು ಬಸ್ ಹತ್ತಿ ನೋಡಿದಾಗ ಮಲಗಿದ್ದ ಸ್ಥಿತಿಯಲ್ಲಿದ್ದ ಶಶಿಧರ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂದರ್ಭ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಬೈಕಿಗೆ ಕಾರು ಡಿಕ್ಕಿಯಾಗಿ ವಿದ್ಯಾರ್ಥಿ ಸಾವು

ಮಂಗಳೂರು ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಎದುರು ನಡೆದ ಅಪಘಾತದಲ್ಲಿ ಬೈಕ್ ಗೆ ಕಾರು ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ಮೂಲದವರಾಗಿರುವ ಸಾವ್ಯೋ ಮಹೇಶ್ (20) ಸಾವನ್ನಪ್ಪಿದ ವಿದ್ಯಾರ್ಥಿ. ಇನ್ನೋರ್ವ ಸಹಪಾಠಿ ಪ್ರಣಾಮ್ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭ, ಬಿ.ಸಿ.ರೋಡ್ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾಲೇಜಿನಲ್ಲಿ ಟ್ಯೂಷನ್ ತರಗತಿ ಮುಗಿಸಿ, ಮನೆಗೆ ತೆರಳುತ್ತಿದ್ದ ವ ೇಳೆ ಅಪಾಯಕಾರಿಯಾಗಿರುವ ಕಾಲೇಜಿನ ಎದುರಿನ ಡಿವೈಡರ್ ಬಳಿ ಯೂಟರ್ನ್ ಪಡೆಯುವ ಜಾಗದಲ್ಲಿ ಕಾರು ಡಿಕ್ಕಿಯಾಗಿದೆ. ಇವರು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ರೊಬೊಟಿಕ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)