ಕನ್ನಡ ಸುದ್ದಿ  /  Karnataka  /  Mangaluru News 25 Year Old Anil John Sequeira Becomes Youngest Civil Judge Of Karnataka Dakshina Kannada News Hsm

25ನೇ ವಯಸ್ಸಿಗೆ ನ್ಯಾಯಾಧೀಶರಾದ ಅನಿಲ್ ಜಾನ್ ಸಿಕ್ವೇರಾ: ಕರ್ನಾಟಕದ ಕಿರಿಯ ಸಿವಿಲ್​ ಜಡ್ಜ್​ ಇವರು

Anil John Sequeira: ಬಂಟ್ವಾಳ ತಾಲೂಕಿನ ಅನಿಲ್ ಜಾನ್ ಸಿಕ್ವೇರಾ ಅವರು ತಮ್ಮ 25ನೇ ವಯಸ್ಸಿನಲ್ಲಿ ಕರ್ನಾಟಕ ಸಿವಿಲ್ ಕಿರಿಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. (ವರದಿ: ಹರೀಶ ಮಾಂಬಾಡಿ)

ಅನಿಲ್ ಜಾನ್ ಸಿಕ್ವೇರಾ
ಅನಿಲ್ ಜಾನ್ ಸಿಕ್ವೇರಾ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಬಲ್ಯ ನಿವಾಸಿ ಮಂಗಳೂರಿನಲ್ಲಿ ನ್ಯಾಯವಾದಿಯಾಗಿ ಪ್ರಾಕ್ಟೀಸ್ ಮಾಡುತ್ತಿರುವ ಅನಿಲ್ ಜಾನ್ ಸಿಕ್ವೇರಾ ಅವರು ತಮ್ಮ 25ನೇ ವಯಸ್ಸಿನಲ್ಲಿ ಕರ್ನಾಟಕ ಸಿವಿಲ್ ಕಿರಿಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಬರಿಮಾರಿನ ಎವರೆಸ್ಟ್ ಸಿಕ್ವೇರಾ ಹಾಗೂ ಐವಿ ಸಿಕ್ವೇರಾ ದಂಪತಿಯ ಪುತ್ರನಾಗಿರುವ ಅವರು ಬರಿಮಾರು ಸಂತ ಜೋಸೆಫರ ಅನುದಾನಿತ ಶಾಲೆಯಲ್ಲಿ ಪ್ರಾಥಮಿಕ, ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಪ್ರೌಢ, ಪುತ್ತೂರು ಸಂತ ಫಿಲೋಮಿನಾ ಪ.ಪೂ.ಕಾಲೇಜಿನಲ್ಲಿ ಪಿಯುಸಿ ಹಾಗೂ ಮಂಗಳೂರು ಎಸ್.ಡಿ.ಎಂ.ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದಿದ್ದಾರೆ.

ಕಳೆದ 2 ವರ್ಷಗಳಿಂದ, ಪ್ರಾರಂಭದಲ್ಲಿ ಮಂಗಳೂರಿನ ನ್ಯಾಯವಾದಿ ವರದರಾಜ ಅವರ ಬಳಿ, ಪ್ರಸ್ತುತ ನ್ಯಾಯವಾದಿಗಳಾದ ಪ್ರವೀಣ್ ಡಿಸೋಜ, ನವೀನ್ ಪಾಯಿಸ್ ಅವರ ಬಳಿ ಪ್ರಾಕ್ಟೀಸ್ ಮಾಡುತ್ತಿದ್ದರು. ಕಳೆದ ನವೆಂಬರ್ ತಿಂಗಳಲ್ಲಿ ಅವರು ಸಿವಿಲ್​ ನ್ಯಾಯಾಧೀಶರ ಹುದ್ದೆಗೆ ಮುಖ್ಯಪರೀಕ್ಷೆ ಬರೆದಿದ್ದರು.

ಮಂಗಳೂರಿಗೂ ಬರಲಿದೆ ಕಾಸರಗೋಡು-ತಿರುವನಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌; ಈ ರೈಲಿನ ಸಂಚಾರ ಮಾರ್ಗ, ವೇಳಾಪಟ್ಟಿಯ ವಿವರ ಇಲ್ಲಿದೆ

ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಇಲ್ಲಿದೆ ಶುಭಸುದ್ದಿ. ಇನ್ನು ಮುಂದೆ ನೀವೂ ಕೂಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಚಾರ ಮಾಡಬಹುದು. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಭಾರತೀಯ ರೈಲ್ವೆ ಇಲಾಖೆ ತಿರುವನಂತಪುರ-ಕಾಸರಗೋಡು ಮಾರ್ಗದ 20632/20631 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮಾರ್ಗವನ್ನು ಇನ್ನು ಮುಂದೆ ಮಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂಬುದನ್ನು ತಿಳಿಸಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್​ ಮಾಡಿ