ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: ಉಳ್ಳಾಲ ಬೀಚ್‌ನಲ್ಲಿ ಸಮುದ್ರಪಾಲಾಗುತ್ತಿದ್ದ ಆಂಧ್ರ ಮೂಲದ ಐವರು ಮಹಿಳೆಯರ ರಕ್ಷಣೆ, 57 ವರ್ಷದ ಮಹಿಳೆ ಸಾವು

ಮಂಗಳೂರು: ಉಳ್ಳಾಲ ಬೀಚ್‌ನಲ್ಲಿ ಸಮುದ್ರಪಾಲಾಗುತ್ತಿದ್ದ ಆಂಧ್ರ ಮೂಲದ ಐವರು ಮಹಿಳೆಯರ ರಕ್ಷಣೆ, 57 ವರ್ಷದ ಮಹಿಳೆ ಸಾವು

ಮಂಗಳೂರು: ಉಳ್ಳಾಲ ಬೀಚ್‌ನಲ್ಲಿ ಸಮುದ್ರಪಾಲಾಗುತ್ತಿದ್ದ ಆಂಧ್ರ ಮೂಲದ ಐವರು ಮಹಿಳೆಯರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, 57 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಉಳ್ಳಾಲ ಬೀಚ್‌ನಲ್ಲಿ ಸಮುದ್ರಪಾಲಾಗುತ್ತಿದ್ದ ಆಂಧ್ರ ಮೂಲದ ಐವರು ಮಹಿಳೆಯರ ರಕ್ಷಣೆ ಮಾಡಲಾಗಿದ್ದು, 57 ವರ್ಷದ ಮಹಿಳೆ ಪರಿಮಿ ರತ್ನ ಕುಮಾರಿ ಎಂಬುವವರ ಸಾವು ಸಂಭವಿಸಿದೆ.
ಮಂಗಳೂರು: ಉಳ್ಳಾಲ ಬೀಚ್‌ನಲ್ಲಿ ಸಮುದ್ರಪಾಲಾಗುತ್ತಿದ್ದ ಆಂಧ್ರ ಮೂಲದ ಐವರು ಮಹಿಳೆಯರ ರಕ್ಷಣೆ ಮಾಡಲಾಗಿದ್ದು, 57 ವರ್ಷದ ಮಹಿಳೆ ಪರಿಮಿ ರತ್ನ ಕುಮಾರಿ ಎಂಬುವವರ ಸಾವು ಸಂಭವಿಸಿದೆ.

ಮಂಗಳೂರು: ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲ್ಪೆ ಬೀಚ್‌ನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಪ್ರವಾಸಿಗರ ವಿಹಾರವನ್ನು ನಿಷೇಧಿಸಲಾಗಿದೆ. ಆಳ ಸಮುದ್ರ ಮೀನುಗಾರಿಕೆಯನ್ನೂ ನಿಷೇಧಿಸಲಾಗಿದೆ. ಆದಾಗ್ಯೂ ಬೀಚ್‌ನಲ್ಲಿ ಹಿಂದೆ ಮುಂದೆ ನೋಡದೆ ಸಮುದ್ರಕ್ಕೆ ಹಾರುವವರು, ಲೈಫ್ ಗಾರರ್ಡ್‌ಗಳ ಮಾತನ್ನು ಧಿಕ್ಕರಿಸುವವರೂ ಇದ್ದಾರೆ. ಇದೀಗ ಉಳ್ಳಾಲ ಸಮುದ್ರತೀರಕ್ಕೆ ವಿಹಾರಕ್ಕೆ ಬಂದಿದ್ದ ಆಂಧ್ರ ಪ್ರದೇಶ ಮೂಲದ ಆರು ಮಹಿಳೆಯರಲ್ಲಿ ಒಬ್ಬಾಕೆ ಸಮುದ್ರಪಾಲಾಗಿ ಸಾವನ್ನಪ್ಪಿದ್ದು ಉಳಿದ ಐವರನ್ನ ಸ್ಥಳೀಯರು ರಕ್ಷಿಸಿದ್ದಾರೆ‌.

ಟ್ರೆಂಡಿಂಗ್​ ಸುದ್ದಿ

ಧಾರ್ಮಿಕ ತಾಣಗಳಿಗೆ ಬಂದಿದ್ದ ತಂಡ ಆಂಧ್ರ ಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್ ಪ್ರಸನ್ನ ಎಂಬವರ ಪತ್ನಿ ಪರಿಮಿ ರತ್ನ ಕುಮಾರಿ (57) ಸಾವನ್ನಪ್ಪಿದವರು.

ಉಳ್ಳಾಲ ಬೀಚ್‌ನಲ್ಲಿ ಏನು ನಡೆಯಿತು

ಉಳ್ಳಾಲ ಬೀಚಲ್ಲಿ ನಿನ್ನೆ ಸಂಜೆ ಪರಿಮಿ ರತ್ನ ಕುಮಾರಿ ಅವರು ಸ್ನೇಹಿತೆಯರಾದ ವೆನ್ನ ವಿಜಯ ಲಕ್ಷ್ಮಿ, ಸ್ವಾತಿ, ಸುನಂದ, ಅರುಣ ಮತ್ತು ಸುಮಾ ಅವರೊಂದಿಗೆ ವಿಹರಿಸುತ್ತಿದ್ದರು. ಈ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ಆರು ಮಹಿಳೆಯರನ್ನು ಎಳೆದೊಯ್ದಿತ್ತು.

ಸ್ಥಳೀಯರು ತಕ್ಷಣ ಆರು ಮಂದಿಯನ್ನ ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಪರಿಮಿ ರತ್ನ ಕುಮಾರಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು,ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಹೈದರಾಬಾದ್ ನಿಂದ 6 ಮಂದಿ ಮಹಿಳೆಯರು ಜೂ.6 ಕ್ಕೆ ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿದ್ದರು. ಅಲ್ಲಿ ಪ್ರವಾಸ ಮುಗಿಸಿದ ಬಳಿಕ ಇನೋವಾ ಕಾರಿನಲ್ಲಿ ಜೂ.7 ಕ್ಕೆ ಕೊಡಗಿಗೆ ತಲುಪಿತ್ತು.

ಜೂ.9 ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನ ನಡೆಸಿ, ನಿನ್ನೆ ಬೆಳಿಗ್ಗೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಮದ್ಯಾಹ್ನ ಸೋಮೇಶ್ವರ ಸೋಮನಾಥನ ದರ್ಶನ ಪಡೆದು ಸಂಜೆ ಉಳ್ಳಾಲ ಸಮುದ್ರ ತೀರ ವಿಹಾರಕ್ಕೆ ಬಂದಿದ್ದರು. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಟಿ20 ವರ್ಲ್ಡ್‌ಕಪ್ 2024