ಕನ್ನಡ ಸುದ್ದಿ  /  Karnataka  /  Mangaluru News A 12 Feet Long King Cobra Was Captured By Herpetologist Snake Kiran In Bantwal News In Kannada Hsm

Mangaluru News: ಕೊನೆಗೂ ಸೆರೆಸಿಕ್ಕಿತು 12 ಅಡಿ ಉದ್ದದ ಕಾಳಿಂಗ

ಬಂಟ್ವಾಳ ತಾಲೂಕಿನ ಪಂಜಿಕಲ್ಲು ಪ್ರದೇಶದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಸರ್ಪವನ್ನು ವಗ್ಗದ ಸ್ನೇಕ್ ಕಿರಣ್ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.

ಕೊನೆಗೂ ಸೆರೆಸಿಕ್ಕಿತು 12 ಅಡಿ ಉದ್ದದ ಕಾಳಿಂಗ
ಕೊನೆಗೂ ಸೆರೆಸಿಕ್ಕಿತು 12 ಅಡಿ ಉದ್ದದ ಕಾಳಿಂಗ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪರಿಸರದ ಪಂಜಿಕಲ್ಲು ಎಂಬ ಹಳ್ಳಿಯ ಸುತ್ತಮುತ್ತಲಿನ ಜನರಿಗೆ ಕಳೆದ ಎರಡು ತಿಂಗಳಿಂದ ನಿದ್ದೆಗೆಡಿಸಿದ್ದ ಕಾಳಿಂಗ ಸರ್ಪವೊಂದು ಕೊನೆಗೂ ಸೆರೆಯಾಗಿದೆ. ಅದನ್ನು ಉರಗತಜ್ಞ ಸ್ನೇಕ್ ಕಿರಣ್ ಹಿಡಿದು ಸುರಕ್ಷಿತವಾದ ಜಾಗಕ್ಕೆ ಬಿಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಳೆದ ಎರಡು ತಿಂಗಳಿನಿಂದ ಪಂಜಿಕಲ್ಲು ಪರಿಸರದಲ್ಲಿ ಭೀತಿ ಹುಟ್ಟಿಸಿದ್ದ ಕಾಳಿಂಗ ಸರ್ಪ ಎಲ್ಲರಲ್ಲಿ ಹೆದರಿಕೆ ಹುಟ್ಟಿಸಿತ್ತು. ಬಂಟ್ವಾಳ ತಾಲೂಕಿನ ಪಂಜಿಕಲ್ಲು ಪ್ರದೇಶದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಸರ್ಪವನ್ನು ವಗ್ಗದ ಸ್ನೇಕ್ ಕಿರಣ್ ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಪಂಜಿಕಲ್ಲು ಗ್ರಾಮದ ಇನಿಲಕೋಡಿ ನಾರಾಯಣ ಬಂಗೇರ ಮನೆಯ ಅಂಗಳದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ರೋಹಿಣಿ ಎಂಬವರು ತೋಟಕ್ಕೆ ಹೋಗಿ ವಾಪಾಸು ಮನೆಗೆ ಬರುವ ಸಂದರ್ಭದಲ್ಲಿ ಇವರಿಗೆ ಗೊತ್ತಿಲ್ಲದಂತೆ ಕಾಳಿಂಗ ಸರ್ಪಕ್ಕೆ ತುಳಿದಿದ್ದರು. ಆದರೆ ಕ್ಷಣಾರ್ಧದಲ್ಲಿ ಗಮನಕ್ಕೆ ಬಂದು ಅಪಾಯದಿಂದ ಪಾರಾಗಿದ್ಧಾರೆ. ಕೂಡಲೇ ಮನೆಯವರು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ.

ಆಪರೇಶನ್ ಕಾಳಿಂಗ

ಸ್ಥಳಕ್ಕೆ ಬಂದ ಕಿರಣ್ ಅವರು ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಹಕಾರದಿಂದ ಕಳಿಂಗ ಸರ್ಪವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಕಾರ್ಯಾಚರಣೆಯಲ್ಲಿ ಸಿರಿಲ್ ಆಚಾರಿಪಾಲಿಕೆ, ಧೀರಜ್ ನಾವುರ,ಅರಣ್ಯ ಸಿಬ್ಬಂದಿ ಸ್ಮಿತಾ ಹಾಗೂ ಜಯರಾಮ್ ಸಹಕರಿಸಿದರು. ಕಳೆದ ಎಂಟು ವರ್ಷಗಳ ಹಿಂದೆ ಬಿಸಿರೋಡಿನ ಹರಿಕೃಷ್ಣ ಬಂಟ್ವಾಳ ಅವರ ಮನೆಯಲ್ಲಿ ಕಾಳಿಂಗ ಸರ್ಪ ಹಾವು ಕಂಡು ಬಂದಿತ್ತು. ಆ ಸಂದರ್ಭ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಎರಡನೇ ಬಾರಿ ಬಂಟ್ವಾಳದಲ್ಲಿ ಕಾಳಿಂಗ ಸರ್ಪ ಕಾಣಸಿಕ್ಕಿದ್ದು, ಎರಡು ತಿಂಗಳಿನಿಂದ ಗ್ರಾಮದ ಜನರ ನಿದ್ದೆಗೆಡಿಸಿತ್ತು. ಗ್ರಾಮದ ವಿವಿಧ ಕಡೆಗಳಲ್ಲಿ ಕಾಣಸಿಕ್ಕಿದ್ದು, ಗ್ರಾಮಸ್ಥರು ಬಹಳಷ್ಟು ಹೆದರಿಕೊಂಡಿದ್ದರು. ಬೃಹತ್ ಗಾತ್ರದಕಾಳಿಂಗ ಸರ್ಪದ ಓಡಾಟ ಭಯ ಹುಟ್ಟಿಸಿತ್ತು. ಇದೀಗ ಜನ ಕೊಂಚ ನೆಮ್ಮದಿಯಿಂದ ಇದ್ದಾರೆ.