Coconut: ರೋಗಬಾಧೆ, ಭಾರೀ ಮಳೆಯಿಂದ ಇಳುವರಿ ಗಣನೀಯ ಇಳಿಕೆ; ತೆಂಗಿನಕಾಯಿ ಬೆಲೆಯಲ್ಲಿ ದಾಖಲೆಯ ಏರಿಕೆ-mangaluru news coconut prices soar to rs 50 per kg amid significant yield reduction prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Coconut: ರೋಗಬಾಧೆ, ಭಾರೀ ಮಳೆಯಿಂದ ಇಳುವರಿ ಗಣನೀಯ ಇಳಿಕೆ; ತೆಂಗಿನಕಾಯಿ ಬೆಲೆಯಲ್ಲಿ ದಾಖಲೆಯ ಏರಿಕೆ

Coconut: ರೋಗಬಾಧೆ, ಭಾರೀ ಮಳೆಯಿಂದ ಇಳುವರಿ ಗಣನೀಯ ಇಳಿಕೆ; ತೆಂಗಿನಕಾಯಿ ಬೆಲೆಯಲ್ಲಿ ದಾಖಲೆಯ ಏರಿಕೆ

Coconut price: ರೋಗಬಾಧೆ, ಭಾರೀ ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಇಳುವರಿ ಗಣನೀಯವಾಗಿ ಇಳಿಕೆ ಕಂಡಿದ್ದು, ತೆಂಗಿನಕಾಯಿ ಬೆಲೆ ಕೆಜಿಗೆ 50 ರೂಪಾಯಿ ತಲುಪಿ ದಾಖಲೆ ಬರೆದಿದೆ.

ರೋಗಬಾಧೆ, ಭಾರೀ ಮಳೆಯಿಂದ ಇಳುವರಿ ಗಣನೀಯ ಇಳಿಕೆ; ತೆಂಗಿನಕಾಯಿ ಬೆಲೆ ಕೆಜಿಗೆ 50 ರೂಪಾಯಿ
ರೋಗಬಾಧೆ, ಭಾರೀ ಮಳೆಯಿಂದ ಇಳುವರಿ ಗಣನೀಯ ಇಳಿಕೆ; ತೆಂಗಿನಕಾಯಿ ಬೆಲೆ ಕೆಜಿಗೆ 50 ರೂಪಾಯಿ

ಮಂಗಳೂರು: ತೆಂಗಿನಕಾಯಿ ಇಳುವರಿ ಶೇ 50ರಷ್ಟು ಕುಸಿತಗೊಂಡಿದೆ. ಇದರ ನಡುವೆ 1 ಕೆಜಿ ತೆಂಗಿನಕಾಯಿ ಬೆಲೆ ಇದೇ ಮೊದಲ ಬಾರಿಗೆ 50 ರೂಪಾಯಿ ತಲುಪಿದೆ. ಅತಿಯಾದ ಮಳೆ, ರೋಗ ಬಾಧೆ ಕಾರಣ ಮತ್ತು ಕಾಡು ಪ್ರಾಣಿಗಳ ಉಪಟಳ ಹೆಚ್ಚಳದ ಕಾರಣ ಇಳುವರಿ ಕುಸಿದಿದೆ. ಕರಾವಳಿ ಭಾಗದಲ್ಲಿ 42 ರೂಪಾಯಿ ಇದ್ದಿದ್ದೇ ಈವರೆಗಿನ ಗರಿಷ್ಠ ಬೆಲೆಯಾಗಿದೆ. ಜನವರಿಯಿಂದ ಬೇಡಿಕೆ ಮತ್ತಷ್ಟು ಹೆಚ್ಚಾಗುವ ಕಾರಣ ಬೆಲೆ 60 ರೂಪಾಯಿ ತಲುಪಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ.

ತೆಂಗಿನಕಾಯಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 15 ದಿನಗಳ ಹಿಂದೆಯಷ್ಟೇ ಕೆಜಿ ತೆಂಗಿನಕಾಯಿಗೆ 28 ರಿಂದ 30 ರೂಪಾಯಿ ಇತ್ತು. ಆದರೆ ಇದು ಇದು ಹಬ್ಬದ ಸೀಸನ್ ಆಗಿರುವ ಕಾರಣ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದರ ಜೊತೆಗೆ ಎಣ್ಣೆ ಮಿಲ್​ಗಳಿಂದಲೂ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಈ 15 ದಿನಗಳಲ್ಲೇ 20 ರೂಪಾಯಿವರೆಗೂ ಏರಿಕೆ ಕಂಡಿದೆ. ಕಳೆದ 20 ವರ್ಷಗಳಲ್ಲಿ ತೆಂಗಿನಕಾಯಿ ಬೆಲೆ ಏರಿದ್ದು ಇದೇ ಮೊದಲು. ಹೀಗಾಗಿ ವ್ಯಾಪಾರಿಗಳು, ಎಣ್ಣೆ ಮಿಲ್ ಮಾಲೀಕರು ತೋಟಗಾರರ ತೋಟಕ್ಕೆ ತೆರಳಿ ಬುಕ್​ ಮಾಡಿಕೊಳ್ತಿದ್ದಾರೆ.

ಇನ್ನಷ್ಟು ಬೆಲೆ ಏರಿಕೆ ಸಾಧ್ಯತೆ

ಪ್ರಸ್ತುತ ಬೇಡಿಕೆಗೆ ತಕ್ಕಂತೆ ಇಳುವರಿ ಇಲ್ಲ. ಹೀಗಾಗಿ ಮುಂದಿನ ನಾಲ್ಕೈದು ತಿಂಗಳಲ್ಲಿ ಬೆಲೆ ದುಪ್ಪಟ್ಟಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ಒಂದು ಕಾಯಿಗೆ 30 ರಿಂದ 40 ರೂಪಾಯಿ ಸಿಕ್ಕರಷ್ಟೇ ಬೆಳೆಗಾರರಿಗೆ ಲಾಭ. ಕರಾವಳಿ ಭಾಗದ ಜಿಲ್ಲೆಗಳಲ್ಲಿ 80 ಸಾವಿರ ಹೆಕ್ಟೇರ್ ಭೂಮಿಯಲ್ಲಿ ತೆಂಗಿನ ಬೆಳೆ ಇದೆ. ಅಂದಾಜು ಒಂದೂವರೆ ಲಕ್ಷ (ಅರ್ಧ ಎಕರೆಗಿಂತ ಹೆಚ್ಚಿರುವವರು) ಬೆಳೆಗಾರರು ಇದ್ದಾರೆ. ಉಡುಪಿ ಜಿಲ್ಲೆಯಲ್ಲೇ ಸುಮಾರು 60 ಸಾವಿರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 80 ಸಾವಿರಕ್ಕೂ ಮಿಕ್ಕಿ ತೆಂಗು ಬೆಳೆಗಾರರು ಇದ್ದಾರೆ.

ತೆಂಗಿನಕಾಯಿ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?

ಈ ಬಾರಿ ಸುರಿದ ಅತಿಯಾದ ಮಳೆ ಕಾರಣ ಎಲೆ ಕಾಯಿಗಳು ದೊಡ್ಡ ಪ್ರಮಾಣದಲ್ಲಿ ಉದುರಿವೆ. ಶೇಕಡಾ 30ರಷ್ಟು ಇಳುವರಿ ಕಡಿಮೆ ಆಗಿದೆ. ಹೀಗಾಗಿ ಮುಂದಿನ ನಾಲ್ಕೈದು ತಿಂಗಳ ತನಕ ಪರಿಣಾಮ ಬೀರುವ ಸಾಧ್ಯತೆ ಇದೆ. ಕರಾವಳಿ ಜೊತೆಗೆ ಮಲೆನಾಡು, ಕೇರಳ, ಮಹಾರಾಷ್ಟ್ರ ಸೇರಿ ಇಡೀ ಪಶ್ಚಿಮ ಕರಾವಳಿಯಾದ್ಯಂತ ಇಳುವರಿ ಕುಸಿದಿದೆ.

ಕೋತಿಗಳು ಸೇರಿದಂತೆ ಕಾಡು ಪ್ರಾಣಿಗಳ ಉಪಟಳವೂ ತೆಂಗಿನಕಾಯಿ ಇಳುವರಿ ಕುಂಠಿತಕ್ಕೆ ಕಾರಣವಾಗಿದೆ.

ಆರೋಗ್ಯ ವರ್ಧಕ ಎಣ್ಣೆಗಳ ಬಳಕೆಗೆ ಬೇಡಿಕೆ ಅಪಾರ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲೂ ತೆಂಗಿನ ಎಣ್ಣೆಗೆ ಉತ್ಪಾದನೆಯೂ ಏರಿಕೆ ಕಂಡಿದೆ. ಇದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ಬೇಸಿಗೆಯಲ್ಲೂ ಎಳೆನೀರಿಗೆ ಭಾರೀ ಬೇಡಿಕೆ ಇತ್ತು. ಒಂದು ಕಾಯಿಗೆ 40 ರಿಂದ 50 ರೂಪಾಯಿವರೆಗೂ ಇತ್ತು. ತಂಪು ಪಾನೀಯಗಳಿಗಿಂತ ಎಳನೀರಿಗೆ ಬೇಡಿಕೆ ಜಾಸ್ತಿ ಇರುವ ಕಾರಣ ಬೆಲೆ ಹೆಚ್ಚಾಗಿದೆ.

ಇತ್ತೀಚೆಗೆ ಹೊಸ ತೋಟವನ್ನು ಯಾರೂ ಮಾಡಿಲ್ಲ. ಮರದಿಂದ ಮರಕ್ಕೆ ತೆಂಗಿನ ಕಾಯಿ ತೆಗೆಸುವುದು ಹಾಗೂ ಖರ್ಚು ವೆಚ್ಚ ಮೂರು ಪಟ್ಟು ಅಧಿಕವಾಗಿದೆ.

ಮಲೆನಾಡು, ಕರಾವಳಿ ಭಾಗದಲ್ಲಿ ರೋಗ ಬಾಧೆಗಳು ಹೆಚ್ಚಾಗಿದ್ದು, ನುಸಿಬಾಧೆ, ಗರಿ ತಿನ್ನುವ ಹುಳ ಬಾಧೆಗಳಿಂದ ಶೇ 10ರಷ್ಟು ಇಳುವರಿ ಕುಸಿದಿದೆ.

ಜುಲೈ-ಆಗಸ್ಟ್‌ನಲ್ಲಿ 90-100 ರೂಪಾಯಿ ಇದ್ದ ಒಂದು ಕೆಜಿ ಕೊಬ್ಬರಿ ಬೆಲೆ, ಪ್ರಸ್ತುತ 150-160 ರೂಪಾಯಿಗೆ ಏರಿಕೆಯಾಗಿದೆ. ಕೊಬ್ಬರಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ 3-4 ಸಾವಿರ ರೂಪಾಯಿ ಇದ್ದರೆ, ಈಗ 15-16 ಸಾವಿರ ರೂಪಾಯಿ ಮಾರುಕಟ್ಟೆ ದರವೇ ಇದೆ.

mysore-dasara_Entry_Point