ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆಯನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಗುರುತಿಸಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅವರ ಮನೆಗೆ ತಲುಪಿಸಿದ್ದಾರೆ. ಇದರೊಂದಿಗೆ, ಮಹಿಳೆ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆಗೆ ನೆರವಾದ ಭದ್ರತಾ ಸಿಬ್ಬಂದಿ ಅವರನ್ನು ಮತ್ತೆ ಮನೆಯವರೊಂದಿಗೆ ಒಗ್ಗೂಡಿಸಿದ್ದಾರೆ.
ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆಗೆ ನೆರವಾದ ಭದ್ರತಾ ಸಿಬ್ಬಂದಿ ಅವರನ್ನು ಮತ್ತೆ ಮನೆಯವರೊಂದಿಗೆ ಒಗ್ಗೂಡಿಸಿದ್ದಾರೆ.

ಮಂಗಳೂರು: ಮಹಿಳೆಯೊಬ್ಬರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಗೊಂದಲಕ್ಕೊಳಗಾಗಿ ಮನೆಯವರನ್ನೂ ಕಾಣದೆ ಗಾಬರಿಯಾದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಬಳಿಕ ನಿಲ್ದಾಣದ ಅಧಿಕಾರಿಗಳು ಅವರನ್ನು ಸುರಕ್ಷಿತವಾಗಿ ಮನೆಯವರೊಂದಿಗೆ ಸೇರಿಸಲು ಕ್ರಮ ಕೈಗೊಂಡರು.

ಟ್ರೆಂಡಿಂಗ್​ ಸುದ್ದಿ

ಮಂಗಳೂರು ನಿಲ್ದಾಣದ ಭದ್ರತಾ ಮೇಲ್ವಿಚಾರಕರು, ಸಿಐಎಸ್ ಎಫ್ ಹಾಗೂ ನಿಲ್ದಾಣದಲ್ಲಿದ್ದ ಸಾರ್ವಜನಿಕ ಸಂಪರ್ಕ ಸಿಬಂದಿ ಮತ್ತು ನಿಲ್ದಾಣಕ್ಕೆ ಸಂಬಂಧಿಸಿದ ಭದ್ರತಾ ಸಿಬಂದಿ ಬಜಪೆ ಪೊಲೀಸರ ಸಹಯೋಗದೊಂದಿಗೆ ಅವರನ್ನು ಮನೆಯವರಿಗೆ ಒಪ್ಪಿಸಿದರು.

ಹೇಗೆ ಬಂದಿದ್ದರು ಮಹಿಳೆ; ಗೊಂದಲಕ್ಕೆ ಒಳಗಾಗಿದ್ದು ಹೇಗೆ

ಮಂಗಳೂರಿನ ಕದ್ರಿಯಲ್ಲಿ ಈ ಮಹಿಳೆ ಆಟೊರಿಕ್ಷಾವನ್ನು ಗೊತ್ತು ಮಾಡಿ ವಿಮಾನ ನಿಲ್ದಾಣಕ್ಕೆ ಹೋಗಬೇಕು ಎಂದಿದ್ದಾರೆ. ಹೀಗೆ ಆಟೊದಲ್ಲಿ ಅವರು ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ಇದೇ ಹೊತ್ತಿಗೆ ಮಹಿಳೆಯ ಕುಟುಂಬ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ. ಇತ್ತ ವಿಮಾನ ನಿಲ್ದಾಣದಲ್ಲಿ ಮಹಿಳೆ ಆಗಮಿಸಿದ ಬಳಿಕ ಆಕೆಯ ಚಲನವಲನಗಳನ್ನು ನೋಡಿದಾಗ, ಭದ್ರತಾ ಸಿಬಂದಿ ಪ್ರಶ್ನಿಸಿದ್ದಾರೆ. ಆದರೆ ಅವರ ಬಳಿ ಸಮರ್ಪಕವಾಗಿ ಉತ್ತರಿಸದೆ, ನನ್ನನ್ನು ಕರೆದುಕೊಂಡು ಹೋಗಲು ಬರುತ್ತಾರೆ ಎಂದಷ್ಟೇ ಹೇಳಿದ್ದಾರೆ.

ಹೀಗೆ ಮಹಿಳೆ ಹೇಳುತ್ತಿರುವುದನ್ನು ಕಂಡ ಭದ್ರತಾ ಸಿಬಂದಿಗೆ ಏನೋ ಸಮಸ್ಯೆಯಾಗಿದೆ ಎಂದು ಗೊತ್ತಾಗಿದೆ. ಮಹಿಳೆ ಇಲ್ಲಿಗೆ ಬಂದ ಮೇಲೆ ಗೊಂದಲಕ್ಕೊಳಗಾಗಿದ್ದಾರೆ ಎಂದು ಅವರು ಊಹಿಸಿದ್ದು, ಕೂಡಲೇ ಮಹಿಳೆಯ ನಿಗಾ ಇಟ್ಟಿದ್ದಾರೆ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಟರ್ಮಿನಲ್ ಮ್ಯಾನೇಜರ್ ಸಹಿತ ಸೆಕ್ಯೂರಿಟಿ ವಿಭಾಗದ ಅಧಿಕಾರಿಗಳು ಸಹಿತ ವಿಮಾನ ನಿಲ್ದಾಣದ ಅಧಿಕಾರಿಗಳ ತಂಡ ಮಹಿಳೆ ಮೇಲೆ ನಿಗಾ ಇಟ್ಟಿದ್ದಾರೆ. ಮಹಿಳಾ ಅಧಿಕಾರಿಯೊಬ್ಬರು ಈ ಮಹಿಳೆ ಜೊತೆ ಸಂವಹನ ನಡಸಿದ್ದಾರೆ. ನೀರು ಆಹಾರವನ್ನು ನೀಡಿ ಸಂತೈಸಿದ್ದಾರೆ. ಬಳಿಕ ಬಜಪೆ ಪೊಲೀಸ್ ಠಾಣೆಯಿಂದ ಮಾಹಿತಿ ಮೇರೆಗೆ ಪೊಲೀಸರ ಆಗಮಿಸಿದ್ದು, ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಅದಾಗಲೇ ಮಹಿಳೆ ನಾಪತ್ತೆಯ ದೂರು ಬಂದ ಹಿನ್ನೆಲೆಯಲ್ಲಿ ಇದೇ ಮಹಿಳೆ ಎಂದು ಗೊತ್ತಾದ ಕಾರಣ ಮನೆಯವರಿಗೂ ಮಾಹಿತಿ ನೀಡಲಾಗಿದೆ.

ಕೂಡಲೇ ಮನೆಯವರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಹಿಳೆಯನ್ನು ಪೊಲೀಸರ ಅನುಮತಿಯನ್ನು ಪಡೆಯುವ ಪ್ರಕ್ರಿಯೆ ನಡೆಸಿದ ಬಳಿಕ ಕರೆದೊಯ್ದಿದ್ದಾರೆ. ಹೀಗೆ ವಿಮಾನ ನಿಲ್ದಾಣ ಸಿಬಂದಿಯ ನಿಗಾ ದಿಂದ ಮಹಿಳೆಯೊಬ್ಬರು ಸುರಕ್ಷಿತವಾಗಿ ಮನೆ ಸೇರುವಂತಾಗಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024