CT Ravi: ಮೈಂಡ್ ಹ್ಯಾಕ್ ಮಾಡಲಾಗಿದೆ ಎಂದೂ ಕಾಂಗ್ರೆಸ್ ಹೇಳಬಹುದು; ಮಂಗಳೂರಲ್ಲಿ ಸಿಟಿ ರವಿ ವ್ಯಂಗ್ಯ
CT Ravi on Congress: ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಂದೆ ಕಾಂಗ್ರೆಸ್ ನವರು ನಮ್ಮ ಮೈಂಡ್ ಹ್ಯಾಕ್ ಮಾಡಲಾಗಿದೆ. ಆದ್ದರಿಂದ ನಾವು ಹುಚ್ಚುಚ್ಚು ಹೇಳಿಕೆ ಕೊಡುತ್ತಿದ್ದೇವೆ ಎಂಬ ರೀತಿಯಲ್ಲಿ ಹೇಳಿಕೆ ನೀಡಬಹುದು ಎಂದು ವ್ಯಂಗ್ಯವಾಡಿದರು.
ಮಂಗಳೂರು: ಮುಂದೆ ಕಾಂಗ್ರೆಸ್ ನಮ್ಮ ಮೈಂಡ್ ಹ್ಯಾಕ್ ಆಗಿದೆಯೆಂದು ಹುಚ್ಚು ಹೇಳಿಕೆ ನೀಡಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಇಂದು (ಜೂನ್ 21, ಗುರುವಾರ) ಮಂಗಳೂರಿನಲ್ಲಿ ಹೇಳಿದ್ದಾರೆ.
ವೆಬ್ಸೈಟ್ ಹ್ಯಾಕ್ ಮಾಡಲಾಗಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಂದೆ ಕಾಂಗ್ರೆಸ್ ನವರು ನಮ್ಮ ಮೈಂಡ್ ಹ್ಯಾಕ್ ಮಾಡಲಾಗಿದೆ. ಆದ್ದರಿಂದ ನಾವು ಹುಚ್ಚುಚ್ಚು ಹೇಳಿಕೆ ಕೊಡುತ್ತಿದ್ದೇವೆ ಎಂಬ ರೀತಿಯಲ್ಲಿ ಹೇಳಿಕೆ ನೀಡಬಹುದು ಎಂದು ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿಯವರು ನೂರಾರು ಯೋಜನೆ ಕೊಟ್ಟಿದ್ದಾರೆ. ಆದರೆ ಚುನಾವಣೆಗೆಂದು ಯೋಜನೆ ಘೋಷಣೆ ಮಾಡಿಲ್ಲ. ಗೆದ್ದ ಬಳಿಕ ಜನರ ಅವಶ್ಯಕತೆ ಗುರುತಿಸಿ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲೇ ಡಂಗುರ ಹೊಡೆದಿದ್ದಾರೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಇತ್ತು. ಆದರೆ ಆಗ ಸಿದ್ದರಾಮಯ್ಯ ಮೋದಿ ಅಕ್ಕಿ ಕೊಟ್ಟರು ಅಂತ ಹೇಳಿದ್ರಾ?. ಆಗಲೂ ನಾನು ಕೊಟ್ಟೆ ಎಂದೇ ಹೇಳಿದ್ದರು. ಯಾವುದೇ ರಾಜ್ಯಗಳಿಗೆ ಕೇಂದ್ರ ಅಕ್ಕಿ ಕೊಟ್ಟಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಗರೀಬಿ ಕಲ್ಯಾಣ್ ಯೋಜನೆಗೆ ಬಳಸಿ ಉಳಿದರೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವಿ ಅಂದಿದ್ದಾರೆ ಎಂದು ಹೇಳಿದರು.
ಪ್ರಧಾನಿ ಸಾಧನೆ ಕಣ್ಣಿಗೆ ಕಾಣಿಸುತ್ತಿದೆ:
ಪ್ರಧಾನಿ 9 ವರ್ಷದ ಸಾಧನೆ ಅವಲೋಕನ ಮುನ್ನದ ರಾಜಕೀಯ ಪರಿಸ್ಥಿತಿ ಅವಲೋಕಿಸಿದಾಗ ಮಾತ್ರ ಬದಲಾವಣೆ ಗೋಚರ ಆಗುತ್ತದೆ. 2004 ರಿಂದ 2014 ವರೆಗೆ ಮನಮೋಹನ್ ಸಿಂಗ್ ಅಧಿಕಾರ ಇದ್ದಾಗ ಪ್ರತಿನಿತ್ಯ ಹಗರಣ ಸುದ್ದಿಯಾಗುತ್ತಿದ್ದವು. ಆದರೆ ಮೋದಿ ಕಾಲದಲ್ಲಿ ಹಗರಣ ಸುದ್ದಿಯಾಗುವುದಿಲ್ಲ, ಯೋಜನೆಗಳು ಸುದ್ದಿಗಳಾಗಿದೆ ಎಂದು ಹೇಳಿದರು.
ತೆರಿಗೆಯಲ್ಲಿ ಜಿಎಸ್ಟಿ ಮೂಲಕ ಸುಧಾರಣೆ ಮಾಡಿ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಲಾಯಿತು. ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆ ಮಾಡಲಾಯಿತು. ಒನ್ ನೇಷನ್ ಒನ್ ರೇಷನ್ ಮೂಲಕ ಪಡಿತರ ಕ್ಷೇತ್ರದ ಸುಧಾರಣೆ. ಆರ್ಟಿಕಲ್ 370 ರದ್ದುಪಡಿಸುವ ಮೂಲಕ ಕ್ರಾಂತಿಕಾರಿ ಸುಧಾರಣೆ, ರಿಯಲ್ ಎಸ್ಟೇಟ್ ಸುಧಾರಣೆಗೆ ರೇರಾ ತರಲಾಯಿತು ಎಂದರು.
1986 ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರ 100 ರೂಪಾಯಿ ಕೊಟ್ಟರೆ ಜನರಿಗೆ 15 ರೂಪಾಯಿ ತಲುಪುತ್ತದೆ ಎಂದರು. ಆದರೆ ಮೋದಿ ಸರಕಾರದಲ್ಲಿ ವಿವಿಧ ಯೋಜನೆಗಳ 30 ಲಕ್ಷ ಕೋಟಿ ಹಣವನ್ನು ಜನರಿಗೆ ನೇರವಾಗಿ ಹಂಚಲಾಯಿತು. ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲಾಗಿದೆ. 11 ಕೋಟಿ ಶೌಚಾಲಯ , 11 ಕೋಟಿ ಗ್ಯಾಸ್ ಕನೆಕ್ಷನ್, 74 ಇದ್ದ ಏರ್ ಪೋರ್ಟ್ ನ್ನು 149 ಮಾಡಲಾಯಿತು. 7 ಹೊಸ ಐಐಟಿ ಸ್ಥಾಪನೆ , 7 ಹೊಸ ಐಐಎಂ, 15 ಹೊಸ ಏಮ್ಸ್ , 390 ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಯಿತು. 100 ಲಕ್ಷ ಕೋಟಿ ಹೂಡಿ ಮೂಲಭೂತ ಅಭಿವೃದ್ಧಿ ಮಾಡಲಾಗಿದೆ ನಮ್ಮ ಜಿಡಿಪಿ 7.2 ನಲ್ಲಿದೆ. ಯಾವುದೇ ರಾಷ್ಟ್ರ ಇದನ್ನು ದಾಖಲಿಸಿಲ್ಲ. ವರ್ಲ್ಡ್ ಲಾರ್ಜೆಸ್ಟ್ ಎಕಾನಮಿಯಲ್ಲಿ 5 ನೇ ಸ್ಥಾನದಲ್ಲಿದೆ. ಅಮೆರಿಕದ ಅಧ್ಯಕ್ಷ ಅಟೋಗ್ರಾಫ್ ಕೇಳುವಷ್ಟು ಮೋದಿಗೆ ಗೌರವ ಸಿಗುತ್ತಿದೆ ಎಂದರು.
ಫ್ರೀ ಸ್ಕೀಂ ಬೇಕಿತ್ತಾ?
ಮೊದಲು ಆಮ್ ಆದ್ಮಿ ಪಾರ್ಟಿ ಇಂತಹ ಫ್ರೀ ಸ್ಕೀಂ ಆರಂಭಿಸಿತು. ಆ ಬಳಿಕ ಅದನ್ನು ಕಾಂಗ್ರೆಸ್ ಜೋಡಿಸಿಕೊಂಡಿತು. ನಮ್ಮ ಸರ್ಕಾರ ಆತ್ಮನಿರ್ಭರ ಯೋಜನೆ ಮೂಲಕ ಸ್ವಾವಲಂಬಿ ಬದುಕಿಗೆ ನೆರವನ್ನು ನೀಡುತ್ತಿದೆ. ನಮ್ಮ ಮತ ಕಡಿಮೆಯಾಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. 2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಇದೇ ಜನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರು. ಆಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ನಾವು ಗೆಲ್ಲಲ್ಲ ಅಂದಿದ್ದರು. ಆದರೆ ಜನ ಲೋಕಸಭೆಗೆ ಬಿಜೆಪಿಗೆ ಓಟ್ ಹಾಕಿ ಗೆಲ್ಲಿಸಿದರು. ದೇಶ ಗೆಲ್ಲಬೇಕು ಅನ್ನೋರು ಮೋದಿಯವರನ್ನು ಗೆಲ್ಲಿಸುತ್ತಾರೆ. ದೇಶ ಹಾಳಾಗಬೇಕು ಅನ್ನುವವರು, ತುಕಡೆ ಗ್ಯಾಂಗ್ ಗಳು ದೇಶ ಸೋಲಬೇಕು ಎನ್ನುತ್ತಾರೆ ಎಂದರು.
ಪ್ರತಾಪ್ ಸಿಂಹ ಹೇಳಿಕೆಗೆ ನೋ ಕಮೆಂಟ್ಸ್
ಹೊಂದಾಣಿಕೆ ರಾಜಕೀಯದ ಬಗ್ಗೆ ಸಂಸದ ಪ್ರತಾಪ್ ಸಿಂಹ ನೀಡಿದ ಹೇಳಿಕೆಗೆ ನೋ ಕಾಮೆಂಟ್ಸ್ ಎಂದುತ್ತಿರಿಸಿದ ಅವರು ನಾವು ರಾಜ್ಯದ ಸೋಲು ಒಪ್ಪಿಕೊಳ್ಳುತ್ತೇವೆ, ಆದರೆ ಹೀನಾಯ ಅಲ್ಲ ಎಂದು ಹೇಳಿದರು.
ವರದಿ: ಹರೀಶ ಮಾಂಬಾಡಿ, ಮಂಗಳೂರು