ಕನ್ನಡ ಸುದ್ದಿ  /  ಕರ್ನಾಟಕ  /  ಮುಂಗಾರು ಮಳೆ; ದಕ್ಷಿಣ ಕನ್ನಡದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆ, ನಾಳೆ ಶಾಲೆಗಳಿಗಷ್ಟೇ ಅಲ್ಲ, ಪಿಯು ಕಾಲೇಜುಗಳಿಗೂ ರಜೆ

ಮುಂಗಾರು ಮಳೆ; ದಕ್ಷಿಣ ಕನ್ನಡದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆ, ನಾಳೆ ಶಾಲೆಗಳಿಗಷ್ಟೇ ಅಲ್ಲ, ಪಿಯು ಕಾಲೇಜುಗಳಿಗೂ ರಜೆ

ಮುಂಗಾರು ಮಳೆ; ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂಕುಸಿತ ಸಹಿತ ಸಮಸ್ಯೆಗಳು ತಲೆದೋರಿವೆ. ಆದ್ದರಿಂದ ನಾಳೆ (ಜೂನ್ 28) ಶಾಲೆಗಳಿಗಷ್ಟೇ ಅಲ್ಲ, ಪಿಯು ಕಾಲೇಜುಗಳಿಗೂ ರಜೆಯನ್ನು ಜಿಲ್ಲಾಡಳಿತ ಘೋಷಿಸಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮುಂಗಾರು ಮಳೆ; ದಕ್ಷಿಣ ಕನ್ನಡದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆ, ನಾಳೆ ಶಾಲೆಗಳಿಗಷ್ಟೇ ಅಲ್ಲ, ಪಿಯು ಕಾಲೇಜುಗಳಿಗೂ ರಜೆ ಘೋ‍ಷಣೆಯಾಗಿದೆ. ಉಕ್ಕಿ ಹರಿದ ಕುಮಾರಧಾರಾ ನದಿ (ಎಡಚಿತ್ರ), ಪುತ್ತೂರಿನಲ್ಲಿ ಕುಸಿದುಬಿದ್ದ ಮನೆಯ ಗೋಡೆ (ಬಲಚಿತ್ರ).
ಮುಂಗಾರು ಮಳೆ; ದಕ್ಷಿಣ ಕನ್ನಡದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆ, ನಾಳೆ ಶಾಲೆಗಳಿಗಷ್ಟೇ ಅಲ್ಲ, ಪಿಯು ಕಾಲೇಜುಗಳಿಗೂ ರಜೆ ಘೋ‍ಷಣೆಯಾಗಿದೆ. ಉಕ್ಕಿ ಹರಿದ ಕುಮಾರಧಾರಾ ನದಿ (ಎಡಚಿತ್ರ), ಪುತ್ತೂರಿನಲ್ಲಿ ಕುಸಿದುಬಿದ್ದ ಮನೆಯ ಗೋಡೆ (ಬಲಚಿತ್ರ).

ಮಂಗಳೂರು: ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂಕುಸಿತ ಸಹಿತ ಸಮಸ್ಯೆಗಳು ತಲೆದೋರಿವೆ. ಈ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಜಿಲ್ಲಾಧಿಕಾರಿ ಗುರುವಾರ ದಕ್ಷಿಣ ಕನ್ನಡದ ಶಾಲೆಗಳಿಗೆ ರಜೆ ಘೋಷಿಸಿದ್ದರು. ಅದರಂತೆ ಇಂದು ಶಾಲೆಗಳು ಬಂದ್ ಆಗಿದ್ದವು.

ಇದೀಗ ಮತ್ತೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜೂನ್ 28ರಂದು ಅಂದರೆ ಶುಕ್ರವಾರವೂ ಶಾಲೆ, ಹೈಸ್ಕೂಲು, ಅಂಗನವಾಡಿ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ್ದು, ಇವುಗಳಲ್ಲದೆ, ಪದವಿಪೂರ್ವ ಕಾಲೇಜು (12ನೇ ತರಗತಿವರೆಗೆ) ತರಗತಿಗಳಿಗೂ ರಜೆ ಘೋಷಿಸಲಾಗಿದೆ.

ಸಂಭಾವ್ಯ ಅಪಾಯ ಪರಿಗಣಿಸಿ ಮುನ್ನೆಚ್ಚರಿಕೆ

ಈ ಸಂದರ್ಭ ಸಂಭಾವ್ಯ ಪ್ರವಾಹ, ಭೂಕುಸಿತ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಹಸೀಲ್ದಾರ್ ಸಹಿತ ಪ್ರತಿಯೊಂದು ತಾಲೂಕುಗಳಲ್ಲೂ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಬ್ರಹ್ಮಣ್ಯದಲ್ಲಿ ಕುಮಾರದಾರಾ ಸಹಿತ ಬೆಳ್ತಂಗಡಿ, ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಯ ಮಟ್ಟವೂ ಜಾಸ್ತಿಯಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದು, ನದಿಗಳ, ತೋಡುಗಳ, ಮತ್ತು ವಿದ್ಯುತ್ ಕಂಬ, ತಂತಿ ಬಳಿ ಹೋಗದಂತೆ ಎಚ್ಚರವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ಅನುಲಕ್ಷಿಸಿ ಮತ್ತಷ್ಟು ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಅಪಾಯಕಾರಿ ಸನ್ನಿವೇಶಗಳಿಂದ ದೂರವಿರಿ ಎಂದು ಪದೇ ಪದೇ ಜಿಲ್ಲಾಧಿಕಾರಿ ಕಚೇರಿಯಿಂದ ಸೂಚನೆಗಳನ್ನು ನೀಡಲಾಗುತ್ತಿದೆ.

ಟೋಲ್ ಫ್ರೀ ಸಂಖ್ಯೆ ದಿನದ 24 ತಾಲೂ ಇರಲಿದ್ದು ,1077 ಮತ್ತು 0824-2442590 ಸಂಖ್ಯೆಗೆ ಅಪಾಯವಾದಲ್ಲಿ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)