Mangaluru News: ಮಂಜುನಾಥ ಧರ್ಮ ಮತ್ತು ನ್ಯಾಯ ಕೊಡುತ್ತಾನೆ; ಧರ್ಮಸ್ಥಳದ ಮೇಲೆ ಭಾರ ಹಾಕಿದ ಗಾಲಿ ಜನಾರ್ದನ ರೆಡ್ಡಿ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಮಂಜುನಾಥ ಧರ್ಮ ಮತ್ತು ನ್ಯಾಯ ಕೊಡುತ್ತಾನೆ; ಧರ್ಮಸ್ಥಳದ ಮೇಲೆ ಭಾರ ಹಾಕಿದ ಗಾಲಿ ಜನಾರ್ದನ ರೆಡ್ಡಿ

Mangaluru News: ಮಂಜುನಾಥ ಧರ್ಮ ಮತ್ತು ನ್ಯಾಯ ಕೊಡುತ್ತಾನೆ; ಧರ್ಮಸ್ಥಳದ ಮೇಲೆ ಭಾರ ಹಾಕಿದ ಗಾಲಿ ಜನಾರ್ದನ ರೆಡ್ಡಿ

ಸಿಬಿಐ ವಿಶೇಷ ನ್ಯಾಯಾಲಯದ ಆದೇಶದ ಬೆನ್ನಲ್ಲೇ ರೆಡ್ಡಿ ಧರ್ಮಸ್ಥಳ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಮಂಜುನಾಥಸ್ವಾಮಿ ದರ್ಶನ ಪಡೆದ ರೆಡ್ಡಿ ಜೊತೆ ಪತ್ನಿ ಅರುಣಾಲಕ್ಷ್ಮೀ, ಮಗಳು ಬ್ರಹ್ಮಿಣಿ ರೆಡ್ಡಿ, ಅಳಿಯ ರಾಜೀವ್ ಮತ್ತು ಕುಟುಂಬದ ಇತರ ಸದಸ್ಯರು ಇದ್ದರು.

ಧರ್ಮಸ್ಥಳದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು.
ಧರ್ಮಸ್ಥಳದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು.

ಮಂಗಳೂರು: ಧರ್ಮಸ್ಥಳದ ಮಂಜುನಾಥನನ್ನೇ ನಂಬಿದ್ದೇನೆ. ಮಂಜುನಾಥ ನನಗೆ ಧರ್ಮ ಹಾಗೂ ನ್ಯಾಯ ಕೊಡುವ ವಿಶ್ವಾಸವಿದೆ.

ಇದು ಗಣಿ ಹಗರಣದಲ್ಲಿ ಸಿಲುಕಿರುವ ಮಾಜಿ ಸಚಿವ ಹಾಗೂ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ನುಡಿ.

ಧರ್ಮಸ್ಥಳಕ್ಕೆ ಮಂಗಳವಾರ ಗಾಲಿ ಜನಾರ್ದನ ರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ಆರು ವರ್ಷಗಳಿಂದ ನಾನು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಲು ಸಾಧ್ಯವಾಗಿರಲಿಲ್ಲ. ಇಂದು ದರ್ಶನ ಪಡೆದಿದ್ದೇನೆ. ನಿನ್ನೆ ಸಿಬಿಐ ವಿಶೇಷ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಮಾರಾಟ ಮಾಡದಂತೆ ಆದೇಶ ನೀಡಿದೆ. ಧರ್ಮಸ್ಥಳ ಮಂಜುನಾಥ ಧರ್ಮ ಮತ್ತು ನ್ಯಾಯ ಕೊಡುತ್ತಾನೆ ಎಂಬ ವಿಶ್ವಾಸವಿದೆ ಎಂದರು.

ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಶಾಸಕ ಜನಾರ್ದನ ರೆಡ್ಡಿ ಮತ್ತು ಪತ್ನಿ ಅರುಣಾ ರೆಡ್ಡಿಗೆ ಸೇರಿದ ಕೆಲ ಸ್ಥಿರಾಸ್ತಿ ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಕೇಸ್ ಮುಗಿಯುವವರೆಗೆ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಜನಾರ್ದನ ರೆಡ್ಡಿ ದಂಪತಿಗೆ ಸೇರಿದ ಒಟ್ಟು 124 ಆಸ್ತಿಗಳ (ಜನಾರ್ದನ ರೆಡ್ಡಿ ಅವರ ಆರು ಆಸ್ತಿಗಳು ಮತ್ತು ಲಕ್ಷ್ಮಿ ಅರುಣಾ ಹೆಸರಿನಲ್ಲಿ 118 ಆಸ್ತಿಗಳು.) ಜಪ್ತಿ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಲಾ ತಿದ್ದುಪಡಿ ಕಾಯ್ದೆಯಡಿಯಲ್ಲಿ ಅರುಣಾಗೆ ಸೇರಿದ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ಆದರೆ ಸಿಬಿಐ ಪಟ್ಟಿ ಮಾಡಿರುವ ಆರರಲ್ಲಿ ಒಂದು ಆಸ್ತಿ ರೆಡ್ಡಿ ಹೆಸರಿನಲ್ಲಿ ಇಲ್ಲದ ಕಾರಣ ರೆಡ್ಡಿ ಹೆಸರಿನಲ್ಲಿದ್ದ ಐದು ಆಸ್ತಿಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.

ಸಿಬಿಐ ವಿಶೇಷ ನ್ಯಾಯಾಲಯದ ಆದೇಶದ ಬೆನ್ನಲ್ಲೇ ರೆಡ್ಡಿ ಧರ್ಮಸ್ಥಳ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದ ರೆಡ್ಡಿ ಜೊತೆ ಪತ್ನಿ ಅರುಣಾಲಕ್ಷ್ಮೀ, ಮಗಳು ಬ್ರಹ್ಮಿಣಿ ರೆಡ್ಡಿ, ಅಳಿಯ ರಾಜೀವ್ ಮತ್ತು ಕುಟುಂಬದ ಇತರ ಸದಸ್ಯರು ಇದ್ದರು. ರಾತ್ರಿ ದೇವಾಲಯದ ವಸತಿಗೃಹಕ್ಕೆ ಆಗಮಿಸಿದ್ದ ರೆಡ್ಡಿ, ಮಂಜುನಾಥ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ನೋಡಿ..

Whats_app_banner