ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ತಮ್ಮನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಅಣ್ಣ, 18 ದಿನ ಹಿಂದೆ ಹೂತ ಮೃತದೇಹ ಮೇಲಕ್ಕೆತ್ತಿ ಮರುತನಿಖೆ
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ತಮ್ಮನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಅಣ್ಣ, 18 ದಿನ ಹಿಂದೆ ಹೂತ ಮೃತದೇಹ ಮೇಲಕ್ಕೆತ್ತಿ ಮರುತನಿಖೆ

ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ತಮ್ಮನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಅಣ್ಣ, 18 ದಿನ ಹಿಂದೆ ಹೂತ ಮೃತದೇಹ ಮೇಲಕ್ಕೆತ್ತಿ ಮರುತನಿಖೆ

ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ತಮ್ಮನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಅಣ್ಣ, ಮರು ತನಿಖೆಗೆ ಆಗ್ರಹಿಸಿದ್ದರು. ಇದರಂತೆ, 18 ದಿನಗಳ ಹಿಂದೆ ಹೂತ ಮೃತದೇಹ ಮೇಲಕ್ಕೆತ್ತಿ ಪೊಲೀಸರು ಮರುತನಿಖೆ ಶುರುಮಾಡಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ಅಣ್ಣ ತಮ್ಮನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಕಾರಣ 18 ದಿನ ಹಿಂದೆ ಹೂತ ಮೃತದೇಹ ಮೇಲಕ್ಕೆತ್ತಿ ಪೊಲೀಸರು ಮರುತನಿಖೆ ಶುರುಮಾಡಿದ್ದಾರೆ.
ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ಅಣ್ಣ ತಮ್ಮನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ಕಾರಣ 18 ದಿನ ಹಿಂದೆ ಹೂತ ಮೃತದೇಹ ಮೇಲಕ್ಕೆತ್ತಿ ಪೊಲೀಸರು ಮರುತನಿಖೆ ಶುರುಮಾಡಿದ್ದಾರೆ.

ಮಂಗಳೂರು: ಮೃತ ವ್ಯಕ್ತಿಯ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಮರು ತನಿಖೆಗೆ ಅಣ್ಣ ದೂರು ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಮಂಜೇಶ್ವರ-ವಿಟ್ಲ ಪೊಲೀಸರು ಆರೋಗ್ಯಾಧಿಕಾರಿಗಳ ಸಮ್ಮುಖ ಕನ್ಯಾನ ಮಸೀದಿಯ ದಫನ ಭೂಮಿಯಿಂದ ಮೃತದೇಹ ಮೇಲಕ್ಕೆತ್ತಿದ್ದಾರೆ. ಶವ ಮೇಲಕ್ಕೆತ್ತಿ ಮರುತನಿಖೆ ನಡೆಸುತ್ತಿರುವ ಸಿನಿಮೀಯ ಘಟನೆ ಇತ್ತೀಚಿನ ದಿನಗಳಲ್ಲಿ ವಿರಳವಾಗಿದ್ದು, ಇದೀಗ ಈ ಪ್ರಕರಣ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ನಿವಾಸಿ ಅಶ್ರಫ್ (44) ಮಂಜೇಶ್ವರ ಠಾಣಾ ವ್ಯಾಪ್ತಿಯ ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಪತ್ನಿಯ ಜೊತೆ ವಾಸವಿದ್ದು ಗೂಡಂಗಡಿ ವ್ಯವಹಾರ ನಡೆಸುತ್ತಿದ್ದರು.

ಮೇ 5ರಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದ ಅಶ್ರಫ್ ಅವರು ಮರುದಿನ ಅಂದರೆ ಮೇ 6ರಂದು ಮೃತಪಟ್ಟಿದ್ದರು. ಆದರೆ ತರಾತುರಿಯಲ್ಲಿ ಪತ್ನಿ ಕಡೆಯವರು ಅಶ್ರಫ್ ಮೃತದೇಹವನ್ನು ಕನ್ಯಾನದ ಬಂಡಿಯ ರಹ್ಮಾನಿಯಾ ಜುಮ್ಮಾ ಮಸೀದಿ ಆವರಣದ ದಫನ ಭೂಮಿಗೆ ತಂದು ಅಂತ್ಯಕ್ರಿಯೆ ನಡೆಸಿದ್ದರು.

ಕನ್ಯಾನ ಅಶ್ರಫ್ ಸಾವಿನ ಪ್ರಕರಣ; ಅನುಮಾನ ವ್ಯಕ್ತಪಡಿಸಿದ ಅಣ್ಣ ಇಬ್ರಾಹಿಂ

ಮೃತರ ಅಣ್ಣ ಮಹಾರಾಷ್ಟ್ರದ ಪೂನಾದಲ್ಲಿದ್ದ ಇಬ್ರಾಹಿಂ ಅವರು ತಮ್ಮನ ಸಾವು ಸಹಜ ಸಾವಲ್ಲ ಎಂದು ಬಲವಾದ ಅನುಮಾನ ವ್ಯಕ್ತಪಡಿಸಿ ಮಂಜೇಶ್ವರ ಪೊಲೀಸರಿಗೆ ಮೂರು ತನಿಖೆ ಮಾಡುವಂತೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಡೆದ ಮಂಜೇಶ್ವರ ಪೊಲೀಸರು ಮಂಗಳೂರು ಯೇನಪೋಯ ಆಸ್ಪತ್ರೆಯ ಫಾರೆನ್ಸಿಕ್ ತಜ್ಞರು, ಬಂಟ್ವಾಳ ತಹಶೀಲ್ದಾರ್ ಮತ್ತು ವಿಟ್ಲ ಪೊಲೀಸರ ಸಹಕಾರದಲ್ಲಿ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದಿಂದ ಅಶ್ರಫ್ ಅವರ ಮೃತದೇಹವನ್ನು ಮೇಲಕ್ಕೆತ್ತಿ ದ್ದಾರೆ. ಸುದ್ಧಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು ಅಶ್ರಫ್ ಸಾವಿನ ಸತ್ಯಾಂಶ ತನಿಖೆಯಲ್ಲಿ ಬಯಲಾಗಬೇಕಿದೆ.

ಪುತ್ತೂರಿನ ಬನ್ನೂರಿನಲ್ಲಿ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಸೊತ್ತು ಕಳವು

ಪುತ್ತೂರಿನ ಬನ್ನೂರಿನಲ್ಲಿ ಮನೆಯೊಂದರಿಂದ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋದ ಕುರಿತು ಮನೆ ಮಾಲಕಿ ವಿಜಯಶ್ರೀ ಐ.ಭಟ್ ಅವರು ದೂರು ನೀಡಿದಂತೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ ಅವರು ಮೇ 10ರಂದು ತನ್ನ ಮಗಳು ಹಾಗೂ ಗಂಡನೊಂದಿಗೆ, ಮಗನ ಮನೆಗೆ ಹೋಗಿ, ಅಲ್ಲಿಂದ ಮರುದಿನ ಮೈಸೂರಿಗೆ ತೆರಳಿದ್ದು, ಮೇ 17ರಂದು ಅವರ ಮಗ ಬಂದಿದ್ದು, 18ರಂದು ಮನೆ, ಗೇಟಿಗೆ ಬೀಗ ಹಾಕಿ ಹೋಗಿರುತ್ತಾರೆ. ಮೇ. 23ರಂದು ನೆರೆಮನೆಯ ಮಹಿಳೆ, ಮನೆಯೊಡತಿಗೆ ಕರೆಮಾಡಿ, ಮನೆಯ ಬಾಗಿಲು ತೆರೆದುಕೊಂಡಿರುದಾಗಿ ಮಾಹಿತಿ ನೀಡಿರುತ್ತಾರೆ. ಕೂಡಲೇ ತನ್ನ ಮಗನಿಗೆ ಮಾಹಿತಿ ನೀಡಿ ಮನೆಯವರು ಬಂದು ಪರಿಶೀಲಿಸಿದಾಗ, ಮನೆಯ ಮುಖ್ಯದ್ವಾರದ ಲಾಕ್ ಅನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಬಲಾತ್ಕಾರವಾಗಿ ಮೀಟಿ ಮುರಿದು ಮನೆಯ ಒಳಪ್ರವೇಶಿಸಿರುವಂತೆ ಕಂಡುಬಂದಿದ್ದು, ಮನೆಯೊಳಗಿದ್ದ ರೂ.62,700 ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ ರೂ.3,17,400 ಮೌಲ್ಯದ ಚಿನ್ನದ ಆಭರಣಗಳು ಹಾಗು ನಗದು ಹಣ ರೂ.8000 ಕಳವಾಗಿರುವುದು ಕಂಡುಬಂದಿರುತ್ತದೆ. ಕಳುವಾದ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ರೂ. 3,88,100 ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಬಿ.ಸಿ.ರೋಡಿನಲ್ಲಿ ಬಸ್ ಗೆ ಕಾಯುತ್ತಿದ್ದ ಮಹಿಳೆ ಬ್ಯಾಗ್ ನಿಂದ ಕಳವು

ಬಿ.ಸಿ.ರೋಡ್ ನ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ಮಹಿಳೆಯ ಬ್ಯಾಗ್ ನಿಂದ 2 ಲಕ್ಷ ರೂ ಮೌಲ್ಯದ ಚಿನ್ನ ಕಳವಾಗಿದೆ. ಈ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ತಂಗಡಿ ತಾಲೂಕು ಕಲ್ಮಂಜ ನಿವಾಸಿ ಶಶಿಕಲಾ ಅವರು ಶಾಲೆಗೆ ರಜೆಯ ಹಿನ್ನೆಲೆಯಲ್ಲಿ ಮಗುವಿನ ಜೊತೆ ಗೋಳ್ತಮಜಲು ಗ್ರಾಮದ ನೆಟ್ಲದಲ್ಲಿರುವ ತಾಯಿ ಮನೆಗೆ ಬಂದಿದ್ದರು.

ಗುರುವಾರ ಮತ್ತೆ ವಾಪಸು ಪತಿ ಜೊತೆ ಬೆಳ್ತಂಗಡಿಗೆ ತೆರಳುವ ಉದ್ದೇಶದಿಂದ ಬಿಸಿರೋಡಿಗೆ ಬಂದಿದ್ದು, ಬಸ್ ನಿಲ್ದಾಣದ ಸಮೀಪದ ಅಂಗಡಿಯೊಂದರಿಂದ ತಿನಿಸನ್ನು ಪಡೆದುಕೊಂಡು ಬೆಳ್ತಂಗಡಿಗೆ ಪ್ರಯಾಣಿಸುವುದಕ್ಕೆ ಬಸ್ ಹತ್ತುವ ವೇಳೆ ಬ್ಯಾಗ್ ನೊಳಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನ ಕಳವಾಗಿದೆ. ಮಗುವಿನ ಜೊತೆ ಗಂಡ ಬಸ್ ಹತ್ತಿದ್ದು, ಅವರ ಹಿಂದೆ ಶಶಿಕಲಾ ಅವರು ಬಸ್ ಹತ್ತುವ ಸಮಯದಲ್ಲಿ ಹಿಂಬದಿಯಿಂದ ಬ್ಯಾಗ್ ನೊಳಗಿದ್ದ ಚಿನ್ನದ ಪಾಕೆಟ್ ನ್ನು ಕಳವು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಬಿ.ಸಿರೋಡ್ ಖಾಸಗಿ ಬಸ್ ನಿಲ್ದಾಣದ ಬಳಿ ಬೆಳ್ತಂಗಡಿ ಧರ್ಮಸ್ಥಳ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುವ ಸಮಯ 10,30ರ ವೇಳೆ ಬ್ಯಾಗ್ ನಲ್ಲಿದ್ದ ಸುಮಾರು 45 ಗ್ರಾಂ ವಿವಿಧ ಶೈಲಿಯ ಮತ್ತು ವಿವಿಧ ಮಾದರಿಯ ಹಳೆಯ ಚಿನ್ನಾಭರಣಗಳು ಕಾಣೆಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner