ಕನ್ನಡ ಸುದ್ದಿ  /  Karnataka  /  Mangaluru News Ganesh Chaturthi Celebration By Christians In Mangaluru Ganesh Festival Hindu Ritual News In Kannada Arc

Mangaluru News: ಸೌಹಾರ್ದತೆಗೆ ಸಾಕ್ಷಿಯಾದ ಸಂಘನಿಕೇತನದ ಗಣೇಶೋತ್ಸವ; ಕ್ರೈಸ್ತ ಬಾಂಧವರಿಂದ ವಿಘ್ನನಿವಾರಕನಿಗೆ ಪೂಜೆ

ಹಿಂದೂಗಳು ಶ್ರದ್ಧಾಭಕ್ತಿಯಿಂದ ಪೂಜಿಸುವ ಗಣಪತಿ ದೇವರಿಗೆ ಕ್ರೈಸ್ತ ಬಾಂಧವರು ಪೂಜೆ ಸಲ್ಲಿಸಿದ ಘಟನೆ ಮಂಗಳೂರಿನ ಸಂಘನಿಕೇತನದಲ್ಲಿ ನಡೆದಿದೆ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆಯ ಗಣೇಶೋತ್ಸವದ ಭೇಟಿ ಕಾರ್ಯಕ್ರಮವನ್ನು 2007ರಿಂದ ನಡೆಸಿಕೊಂಡು ಬರುತ್ತಿದೆ.

ಸೌಹಾರ್ದತೆಗೆ ಸಾಕ್ಷಿಯಾದ ಸಂಘನಿಕೇತನದ ಗಣೇಶೋತ್ಸವ; ಕ್ರೈಸ್ತ ಬಾಂಧವರಿಂದ ವಿಘ್ನನಿವಾರಕನಿಗೆ ಪೂಜೆ
ಸೌಹಾರ್ದತೆಗೆ ಸಾಕ್ಷಿಯಾದ ಸಂಘನಿಕೇತನದ ಗಣೇಶೋತ್ಸವ; ಕ್ರೈಸ್ತ ಬಾಂಧವರಿಂದ ವಿಘ್ನನಿವಾರಕನಿಗೆ ಪೂಜೆ

ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರಿನ ಕೇಂದ್ರಸ್ಥಾನ ಸಂಘನಿಕೇತನ. ಮಂಗಳೂರಿನ ಮಣ್ಣಗುಡ್ಡೆ ಬಳಿ ಇದೆ. ಇಲ್ಲಿ ಕ್ರೈಸ್ತ ಬಾಂಧವರು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ಮಂಗಳೂರಿನ ಸೌಹಾರ್ದತೆಯನ್ನು ಎತ್ತಿ ಹಿಡಿದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಾಗೆ ನೋಡಿದರೆ, ಕರಾವಳಿ ಕೋಮುಸೂಕ್ಷ್ಮ ಪ್ರದೇಶವೆಂದು ಬ್ರ್ಯಾಂಡ್ ಆಗಿದೆ. ಕೆಲ ಅಹಿತಕರ ಘಟನೆಗಳಿಂದ ಈ ಹೆಸರು ಬಂದಿದೆ. ಆದರೆ ಇಲ್ಲಿ ಸಾಕಷ್ಟು ಕೋಮುಸಾಮರಸ್ಯದ ಪ್ರಸಂಗಗಳು ನಡೆಯುತ್ತಲೇ ಇರುತ್ತದೆ. ಆದರೂ ಕೋಮುಸೂಕ್ಷ್ಮವೆಂಬ ಹಣೆಪಟ್ಟಿಯಿಂದ ಇಲ್ಲಿನ ಸೌಹಾರ್ದತೆ ಬೆಳಕಿಗೆ ಬರುವುದೇ ಇಲ್ಲ. ಸಂಘನಿಕೇತನದ ಗಣೇಶೋತ್ಸವ ಇಂತಹ ಕೋಮುಸೌಹಾರ್ದತೆಗೆ ಸಾಕ್ಷಿಯಾಗಿದೆ.

ಹಿಂದೂಗಳು ಶ್ರದ್ಧಾಭಕ್ತಿಯಿಂದ ಪೂಜಿಸುವ ಗಣಪತಿ ದೇವರಿಗೆ ಕ್ರೈಸ್ತ ಬಾಂಧವರು ಪೂಜೆ ಸಲ್ಲಿಸಿದ ಘಟನೆ ಮಂಗಳೂರಿನ ಸಂಘನಿಕೇತನದಲ್ಲಿ ನಡೆದಿದೆ. ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸದಸ್ಯರು ಸಾಮರಸ್ಯ ಹಾಗೂ ಸೌಹಾರ್ದತೆಯ ಗಣೇಶೋತ್ಸವದ ಭೇಟಿ ಕಾರ್ಯಕ್ರಮವನ್ನು 2007ರಿಂದ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ಬಾರಿಯೂ ಈ ವೇದಿಕೆಯ ಸದಸ್ಯರು ಸಂಘನಿಕೇತನಕ್ಕೆ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಆರ್. ಎಸ್ ಎಸ್ ದಕ್ಷಿಣ ಪ್ರಾಂತ‌ ಸರಸಂಘ ಚಾಲಕ ಡಾ ವಾಮನ್‌ ಶಣೈ, ಕ್ತೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಿಲೀನೊ ಈ ಕುರಿತು ಸಂತಸ ಹಂಚಿಕೊಂಡರು. ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಈ ಬಾರಿ 76ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯುತ್ತಿದೆ. ಈ ಗಣಪನ ಭೇಟಿಗೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಗಣ್ಯ ಕ್ರೈಸ್ತ ಬಾಂಧವರು ಭೇಟಿ ನೀಡಿ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಸಂಘನಿಕೇತನದಿಂದ ಕೈಸ್ತ ಬಾಂಧವರಿಗೆ ಪ್ರಸಾದ ವಿತರಣೆ ಮಾಡಲಾಯಿ‌ತು. ಆ ಬಳಿಕ ಗಣೇಶೋತ್ಸವದ ಆಯೋಜಕರು ಹಾಗೂ ಕ್ರೈಸ್ತ ಬಾಂಧವರು ಜೊತೆಯಾಗಿ ಕುಳಿತು ಉಪಹಾರ ಸೇವಿಸಿದರು. ಕರಾವಳಿಯಲ್ಲಿ ಕೋಮುಸೌಹಾರ್ದತೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ.