ಮಂಗಳೂರು: ಉಳಾಯಿಬೆಟ್ಟು ಪೆರ್ಮಂಕಿ ಪದವಿನ ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆ ದರೋಡೆ, ಇರಿದು, ಬೆದರಿಸಿದ 8-9 ಜನರ ಗ್ಯಾಂಗ್‌
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: ಉಳಾಯಿಬೆಟ್ಟು ಪೆರ್ಮಂಕಿ ಪದವಿನ ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆ ದರೋಡೆ, ಇರಿದು, ಬೆದರಿಸಿದ 8-9 ಜನರ ಗ್ಯಾಂಗ್‌

ಮಂಗಳೂರು: ಉಳಾಯಿಬೆಟ್ಟು ಪೆರ್ಮಂಕಿ ಪದವಿನ ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆ ದರೋಡೆ, ಇರಿದು, ಬೆದರಿಸಿದ 8-9 ಜನರ ಗ್ಯಾಂಗ್‌

ಮಂಗಳೂರು ಹೊರವಲಯದ ಉಳಾಯಿಬೆಟ್ಟು ಪೆರ್ಮಂಕಿ ಪದವಿನ ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕೋಟ್ಯಾನ್ ಮತ್ತು ಮನೆಯವರನ್ನು ಇರಿದು, ಬೆದರಿಸಿದ 8-9 ಜನರ ಗ್ಯಾಂಗ್‌ ಈ ಕೃತ್ಯವೆಸಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಉಳಾಯಿಬೆಟ್ಟು ಪೆರ್ಮಂಕಿ ಪದವಿನ ಉದ್ಯಮಿ ಪದ್ಮನಾಭ ಕೋಟ್ಯಾನ್ (ಒಳ ಚಿತ್ರದಲ್ಲಿರುವವರು) ಮನೆ ದರೋಡೆ ನಡೆದಿದೆ. 8-9 ಜನರ ಗ್ಯಾಂಗ್‌ ಅವರನ್ನು  ಇರಿದು, ಬೆದರಿಸಿ ಈ ಕೃತ್ಯವೆಸಗಿದೆ.
ಮಂಗಳೂರು: ಉಳಾಯಿಬೆಟ್ಟು ಪೆರ್ಮಂಕಿ ಪದವಿನ ಉದ್ಯಮಿ ಪದ್ಮನಾಭ ಕೋಟ್ಯಾನ್ (ಒಳ ಚಿತ್ರದಲ್ಲಿರುವವರು) ಮನೆ ದರೋಡೆ ನಡೆದಿದೆ. 8-9 ಜನರ ಗ್ಯಾಂಗ್‌ ಅವರನ್ನು ಇರಿದು, ಬೆದರಿಸಿ ಈ ಕೃತ್ಯವೆಸಗಿದೆ.

ಮಂಗಳೂರು: ನಗರದ ಹೊರವಲಯದಲ್ಲಿರುವ ಉಳಾಯಿಬೆಟ್ಟು ಪೆರ್ಮಂಕಿ ಪದವಿನ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಅಪರಿಚಿತರ ತಂಡವೊಂದು ಉದ್ಯಮಿಗೆ ಚೂರಿಯಿಂದ ಇರಿದ್ದದಲ್ಲದೆ ಚಿನ್ನಾಭರಣ, ನಗದು ದೋಚಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಕಲ್ಲುಕೋರೆ ಮಾಲೀಕ, ಉದ್ಯಮಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಪದ್ಮನಾಭ ಕೋಟ್ಯಾನ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರು ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯರಾಗಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ಶಶಿಪ್ರಭಾ ಕೋಟ್ಯಾನ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಪ್ರಸ್ತುತ ನೀರುಮಾರ್ಗ ವಕೀಲರು, ನೋಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಾಕಿಂಗ್ ಮಾಡುತ್ತಿದ್ದಾಗ ದಾಳಿ

ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಸುಮಾರು 10 ಮಂದಿಯ ತಂಡ ಉಳಾಯಿಬೆಟ್ಟು ಪೆರ್ಮಂಕಿ ಪದವಿನಲ್ಲುರುವ ಕೋಟ್ಯಾನ್ ಮನೆಯ ಕಂಪೌಂಡ್ ಹಾರಿ ಒಳನುಗ್ಗಿ ಈ ಕೃತ್ಯ ಎಸಗಿದೆ. ಈ ಸಂದರ್ಭ ಕೋಟ್ಯಾನ್ ಅವರು ಅಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದರು. ಆಗ ಅವರ ಮೇಲೆ ತಂಡ ಏಕಾಏಕಿ ದಾಳಿ ಮಾಡಿದೆ. ಪದ್ಮನಾಭ ಕೋಟ್ಯಾನ್ ಅವರಿಗೆ ಚೂರಿಯಿಂದ ಕೈಗೆ, ಕಾಲಿಗೆ ಇರಿದು ಗಾಯಗೊಳಿಸಿದೆ. ಘಟನೆಯಿಂದ ಕೋಟ್ಯಾನ್ ಆಘಾತಗೊಂಡಿದ್ದಾರೆ.

ಇದೇ ವೇಳೆ ಅಪರಿಚಿತರ ತಂಡವು, ಮನೆಯೊಳಗೆ ನುಗ್ಗಿದೆ. ಮುಸುಕುಧಾರಿಗಳಾಗಿದ್ದ ತಂಡ ಪದ್ಮನಾಭ ಕೋಟ್ಯಾನ್ ಅವರ ಪತ್ನಿ ಶಶಿಪ್ರಭಾ ಕೋಟ್ಯಾನ್ ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಚೂರಿಯಿಂದ ಬೆದರಿಸಿದೆ. ಬಳಿಕ ಪುತ್ರ ಪ್ರಥಮ್ ಮೇಲೆಯೂ ಹಲ್ಲೆಗೆ ಯತ್ನಿಸಿದೆ. ಈ ಸಂದರ್ಭ ತಂಡದ ಸದಸ್ಯರು ಮನೆಯ ಕಪಾಟಿನ ಕೀ ಕೇಳಿದ್ದಾರೆ. ಇದರಿಂದ ಹೆದರಿದ ಪ್ರಥಮ್, ಮನೆಯ ಕೀ ಕೊಟ್ಟಿದ್ದಾರೆ. ದರೋಡೆಕೋರರು ಮನೆಯಲ್ಲಿದ್ದ ಚಿನ್ನಾಭರಣ, ನಗದನ್ನು ದೋಚಿದ್ದಾರೆ. ಬಳಿಕ ಮನೆಯ ಫಾರ್ಚೂನರ್ ಕಾರನ್ನು ಸುಮಾರು 1ಕಿಲೋ ಮೀಟರ್ ದೂರಕ್ಕೆ ಕೊಂಡೋಗಿ ಬಳಿಕ ರಸ್ತೆ ಬದಿ ನಿಲ್ಲಿಸಿದ್ದಾರೆ. ಅದಾದ ನಂತರ ದರೋಡೆಕೋರರು ಇನೋವಾ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಅರೆಬರೆ ಹಿಂದಿ ಮಾತನಾಡುತ್ತಿದ್ದ ಆಗಂತುಕರು

ದರೋಡೆಕೋರರು ಸುಮಾರು 10 ಮಂದಿ ಇದ್ದು, ಎಲ್ಲರೂ ಹಿಂದಿ ಮಾತನಾಡುತ್ತಿದ್ದರು. ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಪೆರ್ಮಂಕಿ ಪದವಿನಲ್ಲಿ ಉದ್ಯಮಿಯ ಮನೆಯಿದ್ದು, ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದು ಮಾತ್ರವಲ್ಲದೆ ಕೆಲಸದವರೂ ಇದ್ದರು. ಆದರೆ ದರೋಡೆಕೋರರು ಏಕಾಏಕಿ ದಾಳಿ ಮಾಡಿದ ಕಾರಣ ಎಲ್ಲರೂ ಅಸಹಾಯಕರಾಗಿದ್ದರು. ಮುಸುಕುಧಾರಿಗಳಾಗಿದ್ದ ದರೋಡೆಕೋರರು ಬರುವಾಗ ಮನೆಯ ಸ್ಕೆಚ್ ಹಿಡಿದುಕೊಂಡೇ ಬಂದಿದ್ದರು ಎನ್ನಲಾಗಿದೆ.

ಪೊಲೀಸರು ಹೇಳಿರುವುದೇನು

ಶುಕ್ರವಾರ (ಜೂನ್ 21) ರಾತ್ರಿ 7.45-8.10 ರ ನಡುವೆ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಉಳ್ಳಾಯಬೆಟ್ಟು ಎಂಬಲ್ಲಿ ತಮ್ಮ ಜಮೀನಿನ ಪಕ್ಕದಲ್ಲಿ ವಾಸಿಸುವ ಪದ್ಮನಾಭ ಕೋಟ್ಯಾನ್ (ಪಿಡಬ್ಲ್ಯುಡಿ ಗುತ್ತಿಗೆದಾರ) ಅವರ ಮನೆಯಲ್ಲಿ ಒಂದು ಡಕಾಯಿತಿ ನಡೆದಿದೆ. ಶರ್ಟ್ ಮತ್ತು ಪ್ಯಾಂಟ್ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ 8-9 ಮಂದಿ ಮನೆಯೊಳಗೆ ನುಗ್ಗಿ ಮನೆಯವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ.

ಅವರು ಕುಟುಂಬವನ್ನು ಬೆಡ್‌ಶೀಟ್‌ನಿಂದ ಕಟ್ಟಿಹಾಕಿದರು ಮತ್ತು ಅವರಿಗೆ ನಗದು ಮಾತ್ರ ಬೇಕಾಗಿರುವುದರಿಂದ ಸಹಕರಿಸಲು ಹೇಳಿದರು. ಹಣಕ್ಕಾಗಿ ಇಡೀ ಮನೆಯನ್ನು ಶೋಧಿಸಿ ಮನೆಯಲ್ಲಿ ಸಿಕ್ಕ ನಗದು ಮತ್ತು ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾರೆ.

ಮನೆಯಿಂದ ಸ್ವಲ್ಪ ದೂರದಲ್ಲಿ ಸಿಕ್ಕ ಮಾಲೀಕರ ವಾಹನವನ್ನೂ ಕೈಬಿಟ್ಟು ಹೋಗಿದ್ದರು. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ಗುರುತು ಪತ್ತೆ ಹಚ್ಚಲು ಮತ್ತು ಅವರನ್ನು ಶೀಘ್ರವಾಗಿ ಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಮಂಗಳೂರು ಕಮೀಷನರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner