ಕನ್ನಡ ಸುದ್ದಿ  /  Karnataka  /  Mangaluru News Giant Size Pili Thorake Fish Caught Into The Net Of Someshwar Uchila Fishermen News In Kannada Hsm

Mangaluru News: ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಸೋಮೇಶ್ವರ ಉಚ್ಚಿಲ ಮೀನುಗಾರರ ಬಲೆಗೆ

ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಮೀನು ಬಿದ್ದಿದೆ.

ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಸೋಮೇಶ್ವರ ಉಚ್ಚಿಲ ಮೀನುಗಾರರ ಬಲೆಗೆ
ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಸೋಮೇಶ್ವರ ಉಚ್ಚಿಲ ಮೀನುಗಾರರ ಬಲೆಗೆ

ಮಂಗಳೂರು: ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಸೋಮೇಶ್ವರ ಉಚ್ಚಿಲ ಮೀನುಗಾರರ ಬಲೆಗೆ ಬಿದ್ದಿದೆ. ಸಮುದ್ರ ತಟದ ಸಮೀಪ ಬೀಸಿದ ಬಲೆಗೆ ಬುಧವಾರ ಸಂಜೆ ಹೊತ್ತಿಗೆ 75 ಕೆ.ಜಿ ಯ ಮೀನು ಬಲೆಗೆ ಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಮೀನು ಬಿದ್ದಿದೆ.

ಈ ವರ್ಷದ ತಮ್ಮ ಮೀನುಗಾರಿಕೆಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ ಅನ್ನುವ ಅಭಿಪ್ರಾಯ ಅವರದ್ದಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತೆ ಅಲೆಗಳು ಬರುತ್ತವೆ.

ಈ ನೀರಿಗೆ ಮೀನುಗಾರಿಕೆಯಲ್ಲಿ ಅತ್ಯಂತ ಪಾವಿತ್ರ್ಯತೆಯೂ ಇದೆ. ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ. ಆದರೆ ಈ ಬಾರಿ ದೊಡ್ಡ ಗಾತ್ರದ ಪಿಲಿತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ. ವ್ಯಾಪಾರ ಮಾಡುತ್ತಿದ್ದರೆ ಕೆಜಿಗೆ ರೂ. 200 ರಷ್ಟಿದೆ. ಆದರೆ ಸಿಕ್ಕ ಮೀನನ್ನು ವ್ಯಾಪಾರ ಮಾಡದೇ , ಈದ್ ಹಬ್ಬ ಇರುವುದರಿಂದ ತಮ್ಮೊಳಗೆ ಹಂಚಿಕೊಂಡಿದ್ದಾರೆ.