ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಮತ್ತೆ ಭೂ ಕುಸಿತ, ಸಂಚಾರ ತಾತ್ಕಾಲಿಕ ಸ್ಥಗಿತ, ಪ್ರಯಾಣಿಕರ ಪರದಾಟ-mangaluru news hassan mangalore train temporarily stopped due to landslide passengers in trouble ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಮತ್ತೆ ಭೂ ಕುಸಿತ, ಸಂಚಾರ ತಾತ್ಕಾಲಿಕ ಸ್ಥಗಿತ, ಪ್ರಯಾಣಿಕರ ಪರದಾಟ

ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಮತ್ತೆ ಭೂ ಕುಸಿತ, ಸಂಚಾರ ತಾತ್ಕಾಲಿಕ ಸ್ಥಗಿತ, ಪ್ರಯಾಣಿಕರ ಪರದಾಟ

ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಪುನಃ ಭೂಕುಸಿತ ಉಂಟಾಗಿದೆ. ರೈಲು ಹಳಿಗಳ ಮೇಲೆ ಕಲ್ಲು-ಮಣ್ಣು ಬಿದ್ದಿದ್ದು ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಸ್ಥಗಿತಗೊಂಡಿರುವ ರೈಲು ಪ್ರಯಾಣಿಕರಿಗೆ ಆಲೂರಿನಲ್ಲಿ ಆಹಾರ ವ್ಯವಸ್ಥೆ ಮಾಡಲಾಗಿದೆ. (ವರದಿ: ಹರೀಶ್‌ ಮಾಂಬಾಡಿ)

ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಮತ್ತೆ ಭೂ ಕುಸಿತ, ಸಂಚಾರ ತಾತ್ಕಾಲಿಕ ಸ್ಥಗಿತ, ಪ್ರಯಾಣಿಕರ ಪರದಾಟ
ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಮತ್ತೆ ಭೂ ಕುಸಿತ, ಸಂಚಾರ ತಾತ್ಕಾಲಿಕ ಸ್ಥಗಿತ, ಪ್ರಯಾಣಿಕರ ಪರದಾಟ

ಮಂಗಳೂರು: ಈ ವರ್ಷದ ಮುಂಗಾರಿನ ಪ್ರಭಾವ ಜೋರಿದ್ದು ಹಲವು ಅನಾಹುತಗಳು ಸಂಭವಿಸಿತ್ತು. ಇತ್ತೀಚೆಗೆ ಮಳೆಯ ಪ್ರಮಾಣ ಕಡಿಮೆಯಾದರೂ ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ. ಮಂಗಳೂರು-ಹಾಸನ ನಡುವಿನ ರೈಲು ಮಾರ್ಗದಲ್ಲಿ ಭೂಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಿನ್ನೆಯಷ್ಟೇ (ಆಗಸ್ಟ್‌ 9) ಪುನಃ ರೈಲು ಸಂಚಾರ ಆರಂಭವಾಗಿತ್ತು. ಇದೀಗ ಮತ್ತೆ ಭೂಕುಸಿತ ಕಾರಣದಿಂದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಹಾಸನ ಮಂಗಳೂರು ನಡುವಿನ ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ಭೂಕುಸಿತವಾಗಿದೆ. ಕಲ್ಲು, ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದೆ. ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ 6 ಕಡೆ 6 ರೈಲುಗಳು ನಿಂತಿವೆ. ಮಾರ್ಗ ಮಧ್ಯದಲ್ಲೇ ರೈಲು ಸ್ಥಗಿತಗೊಂಡಿರುವ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ. ಸ್ಥಗಿತಗೊಂಡಿರುವ ರೈಲು ಪ್ರಯಾಣಿಕರಿಗೆ ಆಲೂರಿನಲ್ಲಿ ಆಹಾರ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ

ಅಬ್ಬಾ, ಮತ್ತೆ ಶುರುವಾಯ್ತು ಮಂಗಳೂರು-ಬೆಂಗಳೂರು ರೈಲು ಸಂಚಾರ; ನೆಮ್ಮದಿಯ ನಿಟ್ಟುಸಿರು ಬಿಟ್ಟ ಕರಾವಳಿ ಜಿಲ್ಲೆಗಳ ಜನ

ಕಾರವಾರ ಮತ್ತು ಮಂಗಳೂರು ಜಂಕ್ಷನ್‌ನಿಂದ ಸೇವೆಗಳು ಆಗಸ್ಟ್ 9 ಶುಕ್ರವಾರ ಪ್ರಾರಂಭ ಎಂದು ಸೌತ್ ವೆಸ್ಟರ್ನ್ ರೈಲ್ವೆ ಪ್ರಕಟಣೆ ತಿಳಿಸಿತ್ತು. ಎಡಕುಮಾರಿ ಮತ್ತು ಕಡಗರವಳ್ಳಿ ನಡುವಿನ ಎಲ್ಲಾ ರೈಲುಗಳು ಮುಂದಿನ ಆದೇಶದವರೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.