ಕನ್ನಡ ಸುದ್ದಿ  /  Karnataka  /  Mangaluru News Kasaragod Thiruvananthapuram Vande Bharat Express Train Route Extended To Mangaluru Route Schedule Rst

ಮಂಗಳೂರಿಗೂ ಬರಲಿದೆ ಕಾಸರಗೋಡು-ತಿರುವನಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌; ಈ ರೈಲಿನ ಸಂಚಾರ ಮಾರ್ಗ, ವೇಳಾಪಟ್ಟಿಯ ವಿವರ ಇಲ್ಲಿದೆ

ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚಾರ ಮಾಡುತ್ತಿರುವ ವಂದೇ ಭಾರತ್‌ ರೈಲು ಇದೀಗ ಮಂಗಳೂರಿಗೂ ಬರಲಿದೆ. ಕಾಸರಗೋಡು-ತಿರುವನಂತಪುರ ವಂದೇ ಭಾರತ್‌ ರೈಲು ಸೇವೆಯನ್ನು ಮಂಗಳೂರಿನವರೆಗೆ ವಿಸ್ತರಿಸಿದೆ ಇಂಡಿಯನ್‌ ರೈಲ್ವೇ. ಈ ರೈಲಿನ ಮಾರ್ಗ ಹಾಗೂ ಸಮಯದ ವೇಳಾಪಟ್ಟಿ ಇಲ್ಲಿದೆ.

ಮಂಗಳೂರಿಗೂ ಬರಲಿದೆ ಕಾಸರಗೋಡು-ತಿರುವನಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌; ಈ ರೈಲಿನ ಸಂಚಾರ ಮಾರ್ಗ, ವೇಳಾಪಟ್ಟಿಯ ವಿವರ ಇಲ್ಲಿದೆ
ಮಂಗಳೂರಿಗೂ ಬರಲಿದೆ ಕಾಸರಗೋಡು-ತಿರುವನಂತಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌; ಈ ರೈಲಿನ ಸಂಚಾರ ಮಾರ್ಗ, ವೇಳಾಪಟ್ಟಿಯ ವಿವರ ಇಲ್ಲಿದೆ

ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಇಲ್ಲಿದೆ ಶುಭಸುದ್ದಿ. ಇನ್ನು ಮುಂದೆ ನೀವೂ ಕೂಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಚಾರ ಮಾಡಬಹುದು. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಭಾರತೀಯ ರೈಲ್ವೆ ಇಲಾಖೆ ತಿರುವನಂತಪುರ-ಕಾಸರಗೋಡು ಮಾರ್ಗದ 20632/20631 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮಾರ್ಗವನ್ನು ಇನ್ನು ಮುಂದೆ ಮಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂಬುದನ್ನು ತಿಳಿಸಿದೆ.

ಈ ರೈಲಿನ ವೇಳಾಪಟ್ಟಿ ಹೀಗಿದೆ

ಸದ್ಯ ವೇಳಾಪಟ್ಟಿಯ ಪ್ರಕಾರ ಈ ರೈಲು ಬೆಳಿಗ್ಗೆ 6.15ಕ್ಕೆ ಮಂಗಳೂರು ರೈಲು ನಿಲ್ದಾಣದಿಂದ ಹೊರಟು ಮಧ್ಯಾಹ್ನ 3.05 ನಿಮಿಷಕ್ಕೆ ತಿರುವಂತನಪುರ ತಲುಪಲಿದೆ. ಸಂಜೆ 4.05ಕ್ಕೆ ತಿರುವಂತನಪುರದಿಂದ ಹೊರಡುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮಧ್ಯರಾತ್ರಿ 12.40 ಕ್ಕೆ ಮಂಗಳೂರು ತಲುಪಲಿದೆ.

ಯಾವ ಯಾವ ದಿನ ಈ ರೈಲು ಸಂಚಾರ ಮಾಡಲಿದೆ

ವಾರದಲ್ಲಿ ಆರು ದಿನ ತಿರುವನಂತಪುರ-ಕಾಸರಗೋಡು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಚಾರ ಮಾಡಲಿದೆ. ಇಂಡಿಯಾ ರೈಲ್ವೆ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ ಈ ರೈಲು ಗುರುವಾರ ಈ ಮಾರ್ಗದಲ್ಲಿ ಸಂಚಾರಿಸುವುದಿಲ್ಲ.

ರೈಲು ಮಾರ್ಗ ಹೀಗಿದೆ

ಸದ್ಯ ಈ ಮಾರ್ಗದ ವಂದೇ ಭಾರತ್‌ ರೈಲು ಒಟ್ಟು ಒಂಬತ್ತು ನಿಲ್ದಾಣಗಳಲ್ಲಿ ನಿಲ್ಲುತ್ತಿದೆ. ಕಾಸರಗೋಡು, ಕಣ್ಣೂರು, ರೈಲು ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ತಿರೂರ್, ಶೋರನೂರು, ತ್ರಿಶೂರ್, ಎರ್ನಾಕುಲಂ, ಆಲಪ್ಪುಳ ಮತ್ತು ಕೊಲ್ಲಂನಲ್ಲಿ ನಿಲುಗಡೆ ಮಾಡುತ್ತದೆ.

ವಂದೇ ಭಾರತ್‌ ರೈಲನ್ನು ಮಂಗಳೂರಿನವರೆಗೆ ವಿಸ್ತರಿಸಿರುವುದಕ್ಕೆ ಸಂಸದ ನಳೀನ್‌ ಕುಮಾರ್‌ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಕೃತಜ್ಞತೆ ಸಲ್ಲಿಸಿದರು, ಮಂಗಳೂರಿಗೆ ಈ ರೈಲು ಸೇವೆ ವಿಸ್ತರಿಸುವ ಬಗ್ಗೆ ನಳಿನ್‌ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು.

2023ರ ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ತಿರುವನಂತಪುರ ಸೆಂಟ್ರಲ್‌ ರೈಲ್‌ ನಿಲ್ದಾಣದಿಂದ ಈ ಸೆಮಿ ಹೈಸ್ಪೀಡ್‌ ರೈಲಿಗೆ ಚಾಲನೆ ನೀಡಿದ್ದರು. ಈಗಾಗಲೇ ಬೆಂಗಳೂರು-ಧಾರಾವಾಡ, ಚೆನ್ನೈ-ಬೆಂಗಳೂರು-ಮೈಸೂರು ಭಾಗದಲ್ಲಿ ವಂದೇ ಭಾರತ್‌ ರೈಲು ಸಂಚಾರ ಮಾಡುತ್ತಿದೆ.

ಇದನ್ನೂ ಓದಿ

Explainer: 40,000 ರೈಲ್ವೆ ಕೋಚ್‌ಗಳು ಮೇಲ್ದರ್ಜೆಗೆ, ವಂದೇ ಭಾರತ್ ಗುಣಮಟ್ಟಕ್ಕೆ ಭಾರತೀಯ ರೈಲ್ವೆ; ಏನಿದು ಯೋಜನೆ?

ಪ್ರಯಾಣಿಕರ ಸುರಕ್ಷತೆ, ಅನುಕೂಲ ಮತ್ತು ಸೌಕರ್ಯವನ್ನು ಹೆಚ್ಚಿಸಲು ಭಾರತೀಯ ರೈಲ್ವೆಯ 40 ಸಾವಿರ ಸಾಂಪ್ರದಾಯಿಕ ರೈಲು ಬೋಗಿಗಳನ್ನು ವಂದೇ ಭಾರತ್ ಗುಣಮಟ್ಟಕ್ಕೆ ಪರಿವರ್ತಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ಏನೇನಿರಲಿದೆ ಎಂಬ ಮಾಹಿತಿ ಇಲ್ಲಿದೆ.